ಒಪ್ಪೋ A17K ಫೋನಿನ ಆಫರ್ ಬೆಲೆ ಕೇಳಿ ಖರೀದಿದಾರರು ಫುಲ್ ಖುಷ್!
ದಸರಾ ಹಬ್ಬದ ಪ್ರಯುಕ್ತ ಫ್ಲಿಪ್‌ಕಾರ್ಟ್ ಸಂಸ್ಥೆಯು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ (Flipkart Big Billion Days Sale) ಆಯೋಜಿಸಿದೆ. ಈ ಸೇಲ್ ಈಗಾಗಲೇ ಫ್ಲಿಪ್‌ಕಾರ್ಟ್ ಸದಸ್ಯರಿಗೆ ಲೈವ್ ಆಗಿದ್ದು, ನಾಳೆ (ಅಕ್ಟೋಬರ್ 8) ಎಲ್ಲರಿಗೂ ಮುಕ್ತವಾಗಲಿದೆ. ಈ ಸೇಲ್‌ನಲ್ಲಿ ಎಲ್ಲ ಮಾದರಿಯ ಫೋನ್‌ಗಳಿಗೂ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ.
ಹೌದು, ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಬೊಂಬಾಟ್ ಕೊಡುಗೆಗಳಿಂದ ಭರ್ತಿ ಆಗಿದೆ. ಅದರಲ್ಲಿ ಒಪ್ಪೋ A17K ಸ್ಮಾರ್ಟ್‌ಫೋನ್ ಶೇ. 30% ರಷ್ಟು ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಈ ಮೊಬೈಲ್ ಆಫರ್‌ನಲ್ಲಿ 8,999ರೂ. ಗಳಿಗೆ ಖರೀದಿಗೆ ಲಭ್ಯ ಆಗಲಿದೆ.

ಇನ್ನು ಒಪ್ಪೋ A17K ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G35 ಪ್ರೊಸೆಸರ್ ಪವರ್ ಪಡೆದಿದ್ದು, ಇದರ ಜೊತೆಗೆ 8 ಎಂಪಿ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಹಾಗೆಯೇ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಹಾಗಾದರೇ ಒಪ್ಪೋ A17K ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಮತ್ತು ವಿನ್ಯಾಸ ಹೀಗಿದೆ
ಒಪ್ಪೋ A17k ಮೊಬೈಲ್ 6.56 ಇಂಚಿನ ಹೆಚ್‌ಡಿ + ರೆಸಲ್ಯೂಶನ್ ಜೊತೆಗೆ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು 720 x 1612 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೆಯೇ ಇದು 60Hz ರಿಫ್ರೆಶ್ ರೇಟ್, 600nits ಬ್ರೈಟ್‌ನೆಸ್ ನೀಡುವ ಫೀಚರ್ಸ್ ಪಡೆದಿದೆ.
ಪ್ರೊಸೆಸರ್ ಪವರ್ ಎಷ್ಟಿದೆ
ಈ ಫೋನ್ ಆಂಡ್ರಾಯ್ಡ್ 12 ಜೊತೆಗೆ Color OS 12.1 ಅನ್ನು ಪಡೆದಿದ್ದು, ಜೊತೆಗೆ ಮೀಡಿಯಾ ಟೆಕ್ ಹಿಲಿಯೋ G35 ಪ್ರೊಸೆಸರ್ ನಿಂದ ಕಾರ್ಯ ನಿರ್ವಹಿಸಲಿದೆ. ಇದರ ಜೊತೆಗೆ 3GB RAM ಜೊತೆಗೆ 64GB ಇಂಟರ್ನಲ್ ಸ್ಟೋರೇಜ್ ಆಯ್ಕೆ ಪಡೆದಿದೆ.
ಹಾಗೆಯೇ ಒಪ್ಪೋ A17k ಇಂಟರ್ನಲ್ ಸ್ಟೋರೇಜ್ ಅನ್ನು 1 TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಆಯ್ಕೆ ಒದಗಿಸಲಾಗಿದೆ. ಇದರೊಂದಿಗೆ ಹಾಗೆಯೇ 4GB RAM ಅನ್ನು ವಿಸ್ತರಿಸುವ ಆಯ್ಕೆ ಸಹ ಒಳಗೊಂಡಿದೆ.
ಸಿಂಗಲ್ ಕ್ಯಾಮೆರಾ ಸೆನ್ಸಾರ್ ಮಾಹಿತಿ
ಈ ಮೊಬೈಲ್ 8 ಮೆಗಾ ಪಿಕ್ಸೆಲ್ ಆಟೋ ಫೋಕಸ್ ಸೆನ್ಸರ್ ಹಾಗೂ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಫೀಕ್ಸೆಡ್ ಫೋಕಸ್ ಸೆನ್ಸರ್ ಕ್ಯಾಮೆರಾ ರಚನೆ ಹೊಂದಿದ್ದು, ಇವು OIS ಫೀಚರ್ಸ್ ಪಡೆದಿಲ್ಲ. ಹಾಗೆಯೇ IPX4 ರೇಟಿಂಗ್‌ನೊಂದಿಗೆ ಫ್ಲ್ಯಾಶ್ ರೆಸಿಸ್ಟೆಂಟ್ ವಿಶೇಷತೆ ಪಡೆದುಕೊಂಡಿದೆ. ಇನ್ನು ಈ ಫೋನ್ 189ಗ್ರಾಂ ತೂಕ ಹೊಂದಿದೆ.

ಬ್ಯಾಟರಿ ಬ್ಯಾಕ್‌ಅಪ್ ಹಾಗೂ ಇತರೆ ಸೌಲಭ್ಯಗಳ ಮಾಹಿತಿ
ಒಪ್ಪೋ ಸಂಸ್ಥೆಯ ಈ ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಸೈಡ್ ಫಿಂಗರ್ ಪ್ರಿಂಟ್ ಅನ್‌ಲಾಕ್ ಆಯ್ಕೆಯೊಂದಿಗೆ ಅಲ್ಟ್ರಾವಾಲ್ಯೂಮ್ ಮೋಡ್ ಫೀಚರ್ಸ್ ಇದರಲ್ಲಿದೆ. ಇನ್ನು ಈ ಫೋನ್ 3.5mm ಹೆಡ್‌ಫೋನ್ ಜ್ಯಾಕ್ ಪಡೆದುಕೊಂಡಿದೆ.
ಮೆಮೊರಿ ಹಾಗೂ ಕಲರ್ ಆಯ್ಕೆ ಹೀಗಿದೆ
ಒಪ್ಪೋ ಕಂಪನಿಯ ಈ ಮೊಬೈಲ್ 3GB + 64 GB ಸ್ಟೋರೇಜ್ ಹಾಗೂ 4GB + 64GB ಆಂತರೀಕ ಸ್ಟೋರೇಜ್ ವೇರಿಯಂಟ್ ನಲ್ಲಿ ಖರೀದಿಗೆ ಸಿಗುತ್ತದೆ. ಗ್ರಾಹಕರು ಈ ಮೊಬೈಲ್ ಅನ್ನು ಗೋಲ್ಡ್ ಮತ್ತು ನೇವಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ.


Click it and Unblock the Notifications








