ಒಪ್ಪೋದ ಈ ಫೋನ್ ಈಗ ದುಬಾರಿ ಅಲ್ಲವೇ ಅಲ್ಲ!..ಬೆಸ್ಟ್ ಆಫರ್!
ಒಪ್ಪೋ ಸಂಸ್ಥಯ ಕೆಲವು ಬಜೆಟ್ ದರದ ಮೊಬೈಲ್‌ಗಳ ಪೈಕಿ ಒಪ್ಪೋ A17k ಒಂದಾಗಿದ್ದು, ಈ ಮೊಬೈಲ್ ಈಗ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಆಕರ್ಷಕ ರಿಯಾಯಿತಿ ಬೆಲೆ ಪಡೆದಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಸೌಲಭ್ಯ ಪಡೆದಿದ್ದು, 1 TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಸೌಲಭ್ಯ ಸಹ ಪಡೆದುಕೊಂಡಿದೆ.
ಹೌದು, ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಒಪ್ಪೋ A17k ಫೋನ್ ಶೇ. 31% ರಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಫೋನ್ 3GB + 64 GB ಸ್ಟೋರೇಜ್ ವೇರಿಯಂಟ್ ಬೆಲೆ 12,999ರೂ.ಗಳ ಬೆಲೆ ಪಡೆದಿದ್ದು, ಆದರೆ ಆಫರ್‌ನಲ್ಲಿ 8,999ರೂ. ಗಳ ದರಕ್ಕೆ ಖರೀದಿ ಮಾಡಬಹುದು. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ಗಳಿಂದ ಕೆಲವು ಆಫರ್ ಕೂಡಾ ಇದ್ದು, ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯ.

ಇನ್ನು ಒಪ್ಪೋ A17k ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, ಹಿಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಪಡೆದುಕೊಂಡಿದೆ. ಅಲ್ಲದೇ ಬಾಹ್ಯ ಸ್ಟೋರೇಜ್ ಅನ್ನು 1 TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಸೌಲಭ್ಯ ಕೂಡಾ ಇದೆ. ಇನ್ನುಳಿದಂತೆ ಒಪ್ಪೋ A17k ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಹೇಗಿದೆ ಡಿಸ್‌ಪ್ಲೇ ಮತ್ತು ವಿನ್ಯಾಸ
ಒಪ್ಪೋ A17k ಮೊಬೈಲ್ 6.56 ಇಂಚಿನ ಹೆಚ್‌ಡಿ + ರೆಸಲ್ಯೂಶನ್ ಜೊತೆಗೆ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಪಡೆದಿದೆ. ಈ ಫೋನ್ ಡಿಸ್‌ಪ್ಲೇಯು 720 x 1612 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೆಯೇ ಇದು 60Hz ರಿಫ್ರೆಶ್ ರೇಟ್, 600nits ಬ್ರೈಟ್‌ನೆಸ್ ನೀಡುವ ಫೀಚರ್ಸ್ ಇದೆ.

ಪ್ರೊಸೆಸರ್ ಪವರ್ ಮಾಹಿತಿ
ಒಪ್ಪೋ A17k ಫೋನ್ ಆಂಡ್ರಾಯ್ಡ್ 12 ಜೊತೆಗೆ ಕಲರ್ OS 12.1 ಅನ್ನು ಪಡೆದಿದ್ದು, ಒಪ್ಪೋ A17k ಮೊಬೈಲ್ ಮೀಡಿಯಾ ಟೆಕ್ ಹಿಲಿಯೋ G35 ಪ್ರೊಸೆಸರ್ ನಿಂದ ಕಾರ್ಯ ನಿರ್ವಹಿಸಲಿದೆ. ಇದರ ಜೊತೆಗೆ 3GB RAM ಜೊತೆಗೆ 64GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆದಿದೆ.
ಇದರೊಂದಿಗೆ ಈ ಒಪ್ಪೋ A17k ಫೋನ್ ಸ್ಟೋರೇಜ್ ಸಾಮರ್ಥ್ಯ ಅನ್ನು 1 TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ. ಇದರೊಟ್ಟಿಗೆ 4GB RAM ಅನ್ನು ವಿಸ್ತರಿಸುವ ಆಯ್ಕೆ ಕೂಡಾ ಒಳಗೊಂಡಿದೆ.

ಸಿಂಗಲ್ ಕ್ಯಾಮೆರಾ ಸೆನ್ಸಾರ್ ಸೌಲಭ್ಯ
ಒಪ್ಪೋ ಸಂಸ್ಥೆಯ ಈ ಮೊಬೈಲ್ 8 ಮೆಗಾ ಪಿಕ್ಸೆಲ್ ಆಟೋಫೋಕಸ್ ಸೆನ್ಸರ್ ಹಾಗೂ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಫೀಕ್ಸೆಡ್ ಫೋಕಸ್ ಸೆನ್ಸರ್‌ಕ್ಯಾಮೆರಾ ರಚನೆ ಹೊಂದಿದ್ದು, ಇವು OIS ಫೀಚರ್ಸ್ ಒಳಗೊಂಡಿಲ್ಲ. ಹಾಗೆಯೇ IPX4 ರೇಟಿಂಗ್‌ನೊಂದಿಗೆ ಫ್ಲ್ಯಾಶ್ ರೆಸಿಸ್ಟೆಂಟ್ ವಿಶೇಷತೆ ಒಳಗೊಂಡಿದೆ. ಅಂದಹಾಗೆ ಈ ಫೋನ್ 189ಗ್ರಾಂ ತೂಕ ಪಡೆದಿದೆ.
ಬಿಗ್ ಬ್ಯಾಟರಿ ಹಾಗೂ ಇತರೆ ಸೌಲಭ್ಯ
ಒಪ್ಪೋ A17k ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಪಡೆದುಕೊಡಿದ್ದು, ಸೈಡ್ ಫಿಂಗರ್ ಪ್ರಿಂಟ್ ಅನ್‌ಲಾಕ್ ಆಯ್ಕೆಯೊಂದಿಗೆ ಅಲ್ಟ್ರಾವಾಲ್ಯೂಮ್ ಮೋಡ್ ಫೀಚರ್ಸ್ ಕಾಣಬಹುದಾಗಿದೆ. ಇನ್ನು ಈ ಫೋನ್ 3.5mm ಹೆಡ್‌ಫೋನ್ ಜ್ಯಾಕ್ ಇದೆ.
ಮೆಮೊರಿ ಹಾಗೂ ಕಲರ್ ಆಯ್ಕೆಯ ಮಾಹಿತಿ
ಒಪ್ಪೋ A17k ಫೋನ್ 3GB + 64 GB ಸ್ಟೋರೇಜ್ ಹಾಗೂ 4GB + 64GB ಆಂತರೀಕ ಸ್ಟೋರೇಜ್ ವೇರಿಯಂಟ್ ನಲ್ಲಿ ಖರೀದಿಗೆ ಲಭ್ಯ ಇದೆ. ಗ್ರಾಹಕರು ಈ ಮೊಬೈಲ್ ಅನ್ನು ಗೋಲ್ಡ್ ಮತ್ತು ನೇವಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ.


Click it and Unblock the Notifications








