ಭಾರೀ ಅಗ್ಗದ ಬೆಲೆಗೆ ಈ ಒಪ್ಪೋ ಫೋನ್ ಖರೀದಿಸಬಹುದು..ಸಖತ್ ಕೊಡುಗೆ!
ಒಪ್ಪೋ ಕಂಪನಿಯ ಜನಪ್ರಿಯ ಮೊಬೈಲ್‌ಗಳ ಪೈಕಿ ಒಪ್ಪೋ A17k ಒಂದಾಗಿದ್ದು, ಇದರ ಬೆಲೆಯಲ್ಲಿ ಇದೀಗ ಭಾರೀ ಇಳಿಕೆ ಕಂಡಿದೆ. ಬಜೆಟ್ ದರದಲ್ಲಿ ಕಾಣಿಸಿಕೊಂಡಿರುವ ಈ ಮೊಬೈಲ್ ದರ ಇಳಿಕೆಯಿಂದಾಗಿ ಈಗ ಅಗ್ಗದ ಪ್ರೈಸ್‌ನಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಈ ಮೊಬೈಲ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದ್ದು, ಸಿಂಗಲ್ ಕ್ಯಾಮೆರಾ ಸೆನ್ಸಾರ್ ಒಳಗೊಂಡಿದೆ.
ಹೌದು, ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಒಪ್ಪೋ A17k ಮೊಬೈಲ್ 27% ರಷ್ಟು ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಫೋನ್ 3GB + 64 GB ಸ್ಟೋರೇಜ್ ವೇರಿಯಂಟ್ ಬೆಲೆ 12,999ರೂ.ಗಳು ಆಗಿದ್ದು, ಆಫರ್‌ನಲ್ಲಿ 9,499ರೂ. ಗಳ ಬೆಲೆಯಲ್ಲಿ ಖರೀದಿಸಬಹುದು. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಕೆಲವು ಆಫರ್ ಸಹ ಇದ್ದು, ಜೊತೆಗೆ ಎಕ್ಸ್‌ಚೇಂಜ್ ಕೊಡುಗೆ ಸಹ ಸಿಗಲಿದೆ.

ಒಪ್ಪೋ A17k ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಹಿಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಒಳಗೊಂಡಿದೆ. ಇದರ ಜೊತೆಗೆ ಆಂತರೀಕ ಸ್ಟೋರೇಜ್ ಅನ್ನು 1 TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಆಯ್ಕೆ ಇದೆ. ಹಾಗಾದರೇ ಒಪ್ಪೋ A17k ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒಪ್ಪೋ A17k ಡಿಸ್‌ಪ್ಲೇ ಮತ್ತು ವಿನ್ಯಾಸ : ಒಪ್ಪೋ A17k ಮೊಬೈಲ್ 6.56 ಇಂಚಿನ ಹೆಚ್‌ಡಿ + ರೆಸಲ್ಯೂಶನ್ ಜೊತೆಗೆ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು 720 x 1612 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೆಯೇ ಇದು 60Hz ರಿಫ್ರೆಶ್ ರೇಟ್, 600nits ಬ್ರೈಟ್‌ನೆಸ್ ನೀಡುವ ಫೀಚರ್ಸ್ ಪಡೆದಿದೆ.
ಒಪ್ಪೋ A17k ಪ್ರೊಸೆಸರ್ ಪವರ್ ಯಾವುದು : ಒಪ್ಪೋ A17k ಮೊಬೈಲ್ ಆಂಡ್ರಾಯ್ಡ್ 12 ಜೊತೆಗೆ Color OS 12.1 ಅನ್ನು ಪಡೆದಿದ್ದು, ಒಪ್ಪೋ A17k ಮೀಡಿಯಾ ಟೆಕ್ ಹಿಲಿಯೋ G35 ಪ್ರೊಸೆಸರ್ ನಿಂದ ಕಾರ್ಯ ನಿರ್ವಹಿಸಲಿದೆ. ಇದರ ಜೊತೆಗೆ 3GB RAM ಜೊತೆಗೆ 64GB ಇಂಟರ್ನಲ್ ಸ್ಟೋರೇಜ್ ಆಯ್ಕೆ ಪಡೆದಿದೆ.
ಹಾಗೆಯೇ ಒಪ್ಪೋ A17k ಇಂಟರ್ನಲ್ ಸ್ಟೋರೇಜ್ ಅನ್ನು 1 TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಆಯ್ಕೆ ಒದಗಿಸಲಾಗಿದೆ. ಇದರೊಂದಿಗೆ ಹಾಗೆಯೇ 4GB RAM ಅನ್ನು ವಿಸ್ತರಿಸುವ ಆಯ್ಕೆ ಸಹ ಒಳಗೊಂಡಿದೆ.
ಒಪ್ಪೋ A17k ಸಿಂಗಲ್ ಕ್ಯಾಮೆರಾ ಸೆನ್ಸಾರ್ : ಒಪ್ಪೋ A17k ಮೊಬೈಲ್ 8 ಮೆಗಾ ಪಿಕ್ಸೆಲ್ ಆಟೋಫೋಕಸ್ ಸೆನ್ಸರ್ ಹಾಗೂ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಫೀಕ್ಸೆಡ್ ಫೋಕಸ್ ಸೆನ್ಸರ್‌ಕ್ಯಾಮೆರಾ ರಚನೆ ಪಡೆದಿದ್ದು, ಇವು OIS ಫೀಚರ್ಸ್ ಪಡೆದಿಲ್ಲ. ಹಾಗೆಯೇ IPX4 ರೇಟಿಂಗ್‌ನೊಂದಿಗೆ ಫ್ಲ್ಯಾಶ್ ರೆಸಿಸ್ಟೆಂಟ್ ವಿಶೇಷತೆ ಒಳಗೊಂಡಿದೆ. ಇನ್ನು ಈ ಫೋನ್ 189ಗ್ರಾಂ ತೂಕ ಹೊಂದಿದೆ.
ಒಪ್ಪೋ A17k ಬ್ಯಾಟರಿ ಹಾಗೂ ಇತರೆ ಸೌಲಭ್ಯಗಳು : ಒಪ್ಪೋ A17k ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಸೈಡ್ ಫಿಂಗರ್ ಪ್ರಿಂಟ್ ಅನ್‌ಲಾಕ್ ಆಯ್ಕೆಯೊಂದಿಗೆ ಅಲ್ಟ್ರಾವಾಲ್ಯೂಮ್ ಮೋಡ್ ಫೀಚರ್ಸ್ ಇದರಲ್ಲಿದೆ. ಇನ್ನು ಈ ಫೋನ್ 3.5mm ಹೆಡ್‌ಫೋನ್ ಜ್ಯಾಕ್ ಪಡೆದುಕೊಂಡಿದೆ.
ಒಪ್ಪೋ A17k ಮೆಮೊರಿ ಹಾಗೂ ಕಲರ್ ಆಯ್ಕೆ : ಒಪ್ಪೋ A17k ಮೊಬೈಲ್ 3GB + 64 GB ಸ್ಟೋರೇಜ್ ಹಾಗೂ 4GB + 64GB ಆಂತರೀಕ ಸ್ಟೋರೇಜ್ ವೇರಿಯಂಟ್ ನಲ್ಲಿ ಖರೀದಿಗೆ ಸಿಗುತ್ತದೆ. ಗ್ರಾಹಕರು ಈ ಮೊಬೈಲ್ ಅನ್ನು ಗೋಲ್ಡ್ ಮತ್ತು ನೇವಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ.


Click it and Unblock the Notifications








