Home
ಸುದ್ದಿಜಾಲ

ಒಪ್ಪೋ ಸಂಸ್ಥೆಯ ಈ ಅಗ್ಗದ ಮೊಬೈಲ್‌ ಬೆಲೆಯಲ್ಲಿ ಬಿಗ್ ಡಿಸ್ಕೌಂಟ್‌!

ಏನಾದರೊಂದು ಕೊಡುಗೆ ಮೂಲಕ ಆನ್‌ಲೈನ್‌ ಗ್ರಾಹಕರನ್ನು ತನ್ನತ್ತ ಸೆಳೆಯವ ಕೆಲಸ ಫ್ಲಿಪ್‌ಕಾರ್ಟ್‌ ಮಾಡುತ್ತ ಸಾಗಿದ್ದು, ಮೊಬೈಲ್‌ ಫೋನ್‌ಗಳಿಗೂ ಬೊಂಬಾಟ್‌ ರಿಯಾಯಿತಿ ನೀಡುತ್ತದೆ. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಒಪ್ಪೋ A17k ಫೋನ್‌ ಬಲು ಆಕರ್ಷಕ ಡಿಸ್ಕೌಂಟ್‌ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಒಪ್ಪೋ A17k ಫೋನ್‌ ಶೇ. 34% ರಷ್ಟು ನೇರ ರಿಯಾಯಿತಿ ಪಡೆದಿದೆ. ಈ ಫೋನಿನ 3 GB RAM + 64 GB ಸ್ಟೋರೇಜ್‌ ವೇರಿಯಂಟ್‌ 8,499ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ. ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ ಇರುವ ಇತರೆ ಬ್ಯಾಂಕ್‌ ಆಫರ್‌ಗಳನ್ನು ಪಡೆದರೆ, ಮತ್ತಷ್ಟು ರಿಯಾಯಿತಿ ಬೆಲೆಗೆ ಖರೀದಿಸಲು ಚಾನ್ಸ್‌ ಸಹ ಇದೆ.

ಒಪ್ಪೋ ಸಂಸ್ಥೆಯ ಈ ಅಗ್ಗದ ಮೊಬೈಲ್‌ ಬೆಲೆಯಲ್ಲಿ ಬಿಗ್ ಡಿಸ್ಕೌಂಟ್‌!

ಅಂದಹಾಗೆ ಒಪ್ಪೋ A17k ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G35 ಪ್ರೊಸೆಸರ್‌ ಪವರ್‌ ಪಡೆದಿದ್ದು, ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 8 ಮೆಗಾ ಪಿಕ್ಸೆಲ್‌ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ಒಪ್ಪೋ A17k ಮೊಬೈಲ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ A17k ಫೋನ್‌ ಫೀಚರ್ಸ್‌

ಒಪ್ಪೋ A17k ಮೊಬೈಲ್‌ 6.56 ಇಂಚಿನ ಹೆಚ್‌ಡಿ + ರೆಸಲ್ಯೂಶನ್ ಜೊತೆಗೆ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಸೌಲಭ್ಯ ಅನ್ನು ಹೊಂದಿದ್ದು, ಇದು 720 x 1612 ಪಿಕ್ಸೆಲ್‌ ರೆಸಲ್ಯೂಶನ್‌ ಒದಗಿಸಲಿದೆ. ಹಾಗೆಯೇ ಇದು 60Hz ರಿಫ್ರೆಶ್ ರೇಟ್‌, 600 nits ಬ್ರೈಟ್‌ನೆಸ್‌ ನೀಡುವ ಫೀಚರ್ಸ್‌ ಪಡೆದುಕೊಂಡಿದೆ.

ಒಪ್ಪೋ A17k ಮೊಬೈಲ್‌ ಆಂಡ್ರಾಯ್ಡ್ 12 ಓಎಸ್‌ ಜೊತೆಗೆ Color OS 12.1 ಅನ್ನು ಹೊಂದಿದ್ದು, ಅಲ್ಲದೇ ಒಪ್ಪೋ A17k ಮೀಡಿಯಾ ಟೆಕ್‌ ಹಿಲಿಯೋ G35 ಪ್ರೊಸೆಸರ್‌ ನಿಂದ ಕಾರ್ಯ ನಿರ್ವಹಿಸಲಿದೆ. ಇದರ ಜೊತೆಗೆ 3 GB RAM + 64 GB ಆಂತರೀಕ ಸ್ಟೋರೇಜ್‌ ಆಯ್ಕೆ ಹೊಂದಿದೆ.

ಹಾಗೆಯೇ ಒಪ್ಪೋ A17k ಆಂತರೀಕ ಸ್ಟೋರೇಜ್‌ ಅನ್ನು 1 TB ವರೆಗೆ ವಿಸ್ತರಣೆ ಮಾಡಿಕೊಳ್ಳಬಹುದಾದ ಆಯ್ಕೆ ಇದೆ. ಇದರೊಂದಿಗೆ ಹಾಗೆಯೇ 4GB RAM ಅನ್ನು ವಿಸ್ತರಿಸುವ ಆಯ್ಕೆ ಸಹ ಪಡೆದುಕೊಂಡಿದೆ.

ಒಪ್ಪೋ A17k ಮೊಬೈಲ್‌ 8 ಮೆಗಾ ಪಿಕ್ಸೆಲ್‌ ಆಟೋ ಫೋಕಸ್ ಸೆನ್ಸರ್ ಮತ್ತು ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಫೀಕ್ಸೆಡ್‌ ಫೋಕಸ್ ಸೆನ್ಸರ್‌ ಕ್ಯಾಮೆರಾ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ IPX4 ರೇಟಿಂಗ್‌ ನೊಂದಿಗೆ ಫ್ಲ್ಯಾಶ್ ರೆಸಿಸ್ಟೆಂಟ್‌ ವಿಶೇಷತೆ ಒಳಗೊಂಡಿದ್ದು, ಈ ಫೋನ್ 189 ಗ್ರಾಂ ತೂಕ ಪಡೆದಿದೆ.

ಒಪ್ಪೋ A17k ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಸೈಡ್‌ ಫಿಂಗರ್ ಪ್ರಿಂಟ್‌ ಅನ್‌ಲಾಕ್‌ ಆಯ್ಕೆಯೊಂದಿಗೆ ಅಲ್ಟ್ರಾವಾಲ್ಯೂಮ್‌ ಮೋಡ್‌ ಫೀಚರ್ಸ್‌ ಕಾಣಬಹುದಾಗಿದೆ. ಹಾಗೆಯೇ ಈ ಫೋನ್‌ 3.5mm ಹೆಡ್‌ಫೋನ್ ಜ್ಯಾಕ್ ಪಡೆದುಕೊಂಡಿದೆ.

ಒಪ್ಪೋ A17k ಮೊಬೈಲ್‌ ಎರಡು ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಅವುಗಳು 3 GB + 64 GB ಸ್ಟೋರೇಜ್‌ ಮತ್ತು 4GB + 64 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಗಿವೆ. ಇನ್ನು ಖರೀದಿದಾರರು ಈ ಮೊಬೈಲ್‌ ಅನ್ನು ಗೋಲ್ಡ್ ಮತ್ತು ನೇವಿ ಬ್ಲೂ ಕಲರ್‌ಗಳ ಆಯ್ಕೆಯಲ್ಲಿ ಖರೀದಿ ಮಾಡಲು ಚಾನ್ಸ್‌ ಇದೆ.

Best Mobiles in India

English summary
OPPO A17k Price Slash on Flipkart website. check out offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+