Home
ಸುದ್ದಿಜಾಲ

ಅಗ್ಗದ ಒಪ್ಪೋ A17k ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಒಪ್ಪೋ ಸಂಸ್ಥೆಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಪೈಕಿ ಒಂದಾದ ಒಪ್ಪೋ A17k ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ ಭರ್ಜರಿ ಇಳಿಕೆ ಕಂಡಿದೆ. ಬಜೆಟ್‌ ರೇಂಜ್‌ ಮಾದರಿಯಲ್ಲಿ ಕಾಣಿಸಿಕೊಂಡಿರುವ ಈ ಫೋನ್ ಇದೀಗ ಭರ್ಜರಿ ಬೆಲೆ ಇಳಿಕೆಯಿಂದಾಗಿ ಇಗ್ಗದ ಬೆಲೆಯಲ್ಲಿ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಸಿಂಗಲ್ ಕ್ಯಾಮೆರಾ ಸೆನ್ಸಾರ್ ಪಡೆದಿದೆ.

ಒಪ್ಪೋ A17k (Oppo A17K)

ಹೌದು, ಒಪ್ಪೋ ಸಂಸ್ಥೆಯು ಇತ್ತೀಚಿನ ಒಪ್ಪೋ A17k (Oppo A17K) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ 500 ರೂ. ಇಳಿಕೆ ಆಗಿದೆ. 3GB + 64 GB ವೇರಿಯಂಟ್‌ ಬೆಲೆಯು 10,499 ರೂ. ಆಗಿದ್ದು, ಇದೀಗ 500 ರೂ. ಬೆಲೆ ಇಳಿಕೆಯಿಂದ 9,999 ರೂ. ಗಳಿಗೆ ಲಭ್ಯವಾಗಲಿದೆ. ಇನ್ನು ಗ್ರಾಹಕರು ಒಪ್ಪೋ A17k ಅನ್ನು ನೇವಿ ಬ್ಲೂ ಮತ್ತು ಗೋಲ್ಡ್ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು.

8 ಮೆಗಾ ಪಿಕ್ಸೆಲ್‌ ಕ್ಯಾಮೆರಾ

ಒಪ್ಪೋ A17k (Oppo A17K) ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಜೊತೆಗೆ ಹಿಂಭಾಗದಲ್ಲಿ 8 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಪಡೆದಿದೆ. ಹಾಗೆಯೇ ಇಂಟರ್ನಲ್‌ ಸ್ಟೋರೇಜ್‌ ಅನ್ನು 1 TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ. ಹಾಗಾದರೇ ಒಪ್ಪೋ A17k ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಒಪ್ಪೋ A17k ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್‌ಡಿ + ರೆಸಲ್ಯೂಶನ್ ಜೊತೆಗೆ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು 720 x 1612 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ ಇದು 60Hz ರಿಫ್ರೆಶ್ ರೇಟ್‌, 600nits ಬ್ರೈಟ್‌ನೆಸ್‌ ನೀಡುವ ಫೀಚರ್ಸ್‌ ಪಡೆದಿದೆ.

ಪ್ರೊಸೆಸರ್‌ ಪವರ್ ಯಾವುದು?

ಪ್ರೊಸೆಸರ್‌ ಪವರ್ ಯಾವುದು?

ಒಪ್ಪೋ A17k ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 12 ಜೊತೆಗೆ Color OS 12.1 ಅನ್ನು ಪಡೆದಿದ್ದು, ಒಪ್ಪೋ A17k ಮೀಡಿಯಾ ಟೆಕ್‌ ಹಿಲಿಯೋ G35 ಪ್ರೊಸೆಸರ್‌ ನಿಂದ ಕಾರ್ಯ ನಿರ್ವಹಿಸಲಿದೆ. ಇದರ ಜೊತೆಗೆ 3GB RAM ಜೊತೆಗೆ 64GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಜೊತೆಗೆ ಇಂಟರ್ನಲ್‌ ಸ್ಟೋರೇಜ್‌ ಅನ್ನು 1 TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಹಾಗೆಯೇ 4GB RAM ಅನ್ನು ವಿಸ್ತರಿಸುವ ಆಯ್ಕೆ ಸಹ ಒಳಗೊಂಡಿದೆ.

ಸಿಂಗಲ್‌ ಕ್ಯಾಮೆರಾ ಸೆನ್ಸಾರ್

ಸಿಂಗಲ್‌ ಕ್ಯಾಮೆರಾ ಸೆನ್ಸಾರ್

ಈ ಸ್ಮಾರ್ಟ್‌ಫೋನ್‌ 8 ಮೆಗಾ ಪಿಕ್ಸೆಲ್‌ ಆಟೋಫೋಕಸ್ ಸೆನ್ಸರ್ ಹಾಗೂ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಫೀಕ್ಸೆಡ್‌ ಫೋಕಸ್ ಸೆನ್ಸರ್‌ಕ್ಯಾಮೆರಾ ರಚನೆ ಹೊಂದಿದ್ದು, ಇವು OIS ಫೀಚರ್ಸ್‌ ಪಡೆದಿಲ್ಲ. ಹಾಗೆಯೇ IPX4 ರೇಟಿಂಗ್‌ನೊಂದಿಗೆ ಫ್ಲ್ಯಾಶ್ ರೆಸಿಸ್ಟೆಂಟ್‌ ವಿಶೇಷತೆ ಪಡೆದಿದೆ. ಇನ್ನು ಈ ಫೋನ್‌ 189ಗ್ರಾಂ ತೂಕ ಪಡೆದಿದೆ.

ಬ್ಯಾಟರಿ ಹಾಗೂ ಇತರೆ ಸೌಲಭ್ಯಗಳು

ಬ್ಯಾಟರಿ ಹಾಗೂ ಇತರೆ ಸೌಲಭ್ಯಗಳು

ಒಪ್ಪೋ A17k ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಸೈಡ್‌ ಫಿಂಗರ್ ಪ್ರಿಂಟ್‌ ಅನ್‌ಲಾಕ್‌ ಆಯ್ಕೆಯೊಂದಿಗೆ ಅಲ್ಟ್ರಾವಾಲ್ಯೂಮ್‌ ಮೋಡ್‌ ಫೀಚರ್ಸ್‌ ಇದರಲ್ಲಿದೆ. ಇನ್ನು 3.5mm ಹೆಡ್‌ಫೋನ್ ಜ್ಯಾಕ್ ಇದರಲ್ಲಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಒಪ್ಪೋ A17k ಸ್ಮಾರ್ಟ್‌ಫೋನ್‌ 4GB + 64GB ವೇರಿಯಂಟ್‌ ನಲ್ಲಿ ಲಭ್ಯವಿದ್ದು, ಇದೀಗ 500ರೂ ಬೆಲೆ ಇಳಿಕೆಯಿಂದ 9,999ರೂ. ಗಳಿಗೆ ಲಭ್ಯವಾಗಲಿದೆ. ಈ ಮೊಬೈಲ್‌ ಗೋಲ್ಡ್ ಮತ್ತು ನೇವಿ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.

Best Mobiles in India

English summary
Oppo A17K receives a price cut in India: Check New Price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+