Home
ಸುದ್ದಿಜಾಲ

ಒಪ್ಪೋ A17k ಸ್ಮಾರ್ಟ್‌ಫೋನ್‌ಗೆ 27% ಡಿಸ್ಕೌಂಟ್‌: ಆಫರ್‌ ಮಿಸ್‌ ಮಾಡ್ಕೋಬೇಡಿ!

ಒಪ್ಪೋ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಅನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಒಪ್ಪೋ A17k ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ. ಈ ಫೋನ್‌ಗೆ ಈ ಹಿಂದೆಯೂ ಹಲವಾರು ಬಾರಿ ರಿಯಾಯಿತಿ ನೀಡಲಾಗಿದ್ದನ್ನು ಗಮನಿಸಬಹುದು.

ಹೌದು, ಒಪ್ಪೋ A17k (OPPO A17k) ಸ್ಮಾರ್ಟ್‌ಫೋನ್‌ಗೆ ಇದೀಗ ಭಾರೀ ಡಿಸ್ಕೌಂಟ್‌ ಘೋಷಣೆ ಮಾಡಲಾಗಿದ್ದು,ಈ ಮೂಲಕ ನೀವು ಮೂರು ಸಾವಿರಕ್ಕೂ ಅಧಿಕ ಹಣ ಉಳಿತಾಯ ಮಾಡಬಹುದು.ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್‌ ಬಲ ಪಡೆದುಕೊಂಡಿದ್ದು, ಸಿಂಗಲ್ ಕ್ಯಾಮೆರಾ ಸೆನ್ಸಾರ್ ಆಯ್ಕೆ ಹೊಂದಿದೆ. ಜೊತೆಗೆ ಈ ಫೋನ್‌ 3GB+64GB ಇಂಟರ್‌ ಸ್ಟೋರೇಜ್ ಆಯ್ಕೆ ಹೊಂದಿದೆ.ಹಾಗಿದ್ರೆ,ಇದರ ಆಫರ್‌ ವಿವರ ಹಾಗೂ ಈ ಫೋನ್ ಫೀಚರ್ಸ್‌ ಬಗ್ಗೆ ತಿಳಿಯೋಣ ಬನ್ನಿ.

ಒಪ್ಪೋ A17k ಸ್ಮಾರ್ಟ್‌ಫೋನ್‌ಗೆ 27% ಡಿಸ್ಕೌಂಟ್‌: ಆಫರ್‌ ಮಿಸ್‌ ಮಾಡ್ಕೋಬೇಡಿ!

ಒಪ್ಪೋ A17k ಡಿಸ್‌ಪ್ಲೇ ವಿವರ: ಒಪ್ಪೋ A17k ಸ್ಮಾರ್ಟ್‌ಫೋನ್‌ನ ನ ಆಫರ್ ವಿವರ ತಿಳಿಯುವ ಮುನ್ನ ಇದರ ಪ್ರಮುಖ ಫೀಚರ್ಸ್‌ಗಳನ್ನು ತಿಳಿದುಕೊಳ್ಳೋಣ. ಅದರಂತೆ ಈ ಫೋನ್ 6.56 ಇಂಚಿನ ಹೆಚ್‌ಡಿ + ರೆಸಲ್ಯೂಶನ್ ಜೊತೆಗೆ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು 720 x 1612 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 60Hz ರಿಫ್ರೆಶ್ ರೇಟ್‌ ಹೊಂದಿದ್ದು, 600nits ಗರಿಷ್ಠ ಬ್ರೈಟ್‌ನೆಸ್‌ ನೀಡುವ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ.

ಒಪ್ಪೋ A17k ಪ್ರೊಸೆಸರ್‌ ಸಾಮರ್ಥ್ಯ: ಈ ಫೋನ್ ಮೀಡಿಯಾ ಟೆಕ್‌ ಹಿಲಿಯೋ G35 ಪ್ರೊಸೆಸರ್‌ ನಿಂದ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಆಂಡ್ರಾಯ್ಡ್ 12 ಜೊತೆಗೆ ಕಲರ್‌ ಓಎಸ್‌ 12.1 ನಲ್ಲಿ ರನ್ ಆಗಲಿದೆ. ಜೊತೆಗೆ 3GB RAM ಹಾಗೂ 64GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದ್ದು, 4GBRAM ಅನ್ನು ವಿಸ್ತರಿಸುವ ಆಯ್ಕೆ ಸಹ ಈ ಫೋನ್‌ ನಲ್ಲಿದೆ. ಜೊತೆಗೆ 1TB ವರೆಗೆ ಇಂಟರ್ನಲ್‌ ಸ್ಟೋರೇಜ್‌ ಹೆಚ್ಚಿಗೆ ಮಾಡಿಕೊಳ್ಳುವ ಆಯ್ಕೆ ನೀಡಲಾಗಿದೆ.

ಒಪ್ಪೋ A17k ಸ್ಮಾರ್ಟ್‌ಫೋನ್‌ಗೆ 27% ಡಿಸ್ಕೌಂಟ್‌: ಆಫರ್‌ ಮಿಸ್‌ ಮಾಡ್ಕೋಬೇಡಿ!

ಒಪ್ಪೋ A17k ಕ್ಯಾಮೆರಾ ರಚನೆ: ಈ ಫೋನ್‌ ಸಿಂಗಲ್‌ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ f/2.2 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್‌ ರೆಸಲ್ಯೂಶನ್ ಹೊಂದಿದ್ದು, ಇದು ಎಲ್‌ಇಡಿ ಫ್ಲ್ಯಾಶ್‌ ಮತ್ತು ಇತರ ಫೀಚ್ಸ್‌ಗಳಾದ ಆಟೋ ಫ್ಲ್ಯಾಶ್, ಎಕ್ಸ್‌ಪೋಶರ್ ಕಾಂಪೆನ್ಸೇಶನ್, ಎಚ್‌ಡಿಆರ್ ಮೋಡ್ ಹೊಂದಿದೆ. ಇದರೊಂದಿಗೆ ಈ ಫೋನ್ 5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ರಚನೆ ಪಡೆದುಕೊಂಡಿದೆ.

ಒಪ್ಪೋ A17k ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ವಿಶೇಷ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ದೀರ್ಘ ಬ್ಯಾಟರಿ ಬ್ಯಾಕಪ್‌ ನೀಡಲಿದೆ. ಇದರೊಂದಿಗೆ ಸೈಡ್‌ ಫಿಂಗರ್ ಪ್ರಿಂಟ್‌ ಅನ್‌ಲಾಕ್‌ ಆಯ್ಕೆಯೊಂದಿಗೆ ಅಲ್ಟ್ರಾವಾಲ್ಯೂಮ್‌ ಮೋಡ್‌ ಫೀಚರ್ಸ್‌ ಇದರಲ್ಲಿದ್ದು, 3.5mm ಹೆಡ್‌ಫೋನ್ ಜ್ಯಾಕ್ ಆಯ್ಕೆ ನೀಡಲಾಗಿದೆ. ಇನ್ನುಳಿದಂತೆ IPX4 ರೇಟಿಂಗ್‌ನೊಂದಿಗೆ ಫ್ಲ್ಯಾಶ್ ರೆಸಿಸ್ಟೆಂಟ್‌ ಸೌಲಭ್ಯ ಪಡೆದುಕೊಂಡಿದ್ದು, ಈ ಫೋನ್‌ 189ಗ್ರಾಂ ತೂಕ ಪಡೆದಿದೆ.

ಒಪ್ಪೋ A17k ಸ್ಮಾರ್ಟ್‌ಫೋನ್‌ಗೆ 27% ಡಿಸ್ಕೌಂಟ್‌: ಆಫರ್‌ ಮಿಸ್‌ ಮಾಡ್ಕೋಬೇಡಿ!

ಒಪ್ಪೋ A17k ಆಫರ್‌ ವಿವರ: ಈ ಫೋನ್ 3GB+64GB ಸ್ಟೋರೇಜ್‌ ಹಾಗೂ 4GB+64GB ಸ್ಟೋರೇಜ್‌ ವೇರಿಯಂಟ್‌ ನಲ್ಲಿ ಲಭ್ಯ ಇರಲಿದ್ದು, ಗೋಲ್ಡ್ ಮತ್ತು ನೇವಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇರಲಿದೆ. ಈ ಮೂಲಕ 12,999ರೂ.ಗಳ ಮೂಲ ಬೆಲೆ ಹೊಂದಿರುವ ಈ ಫೋನ್‌ ಅನ್ನು ನೀವು ಕೇವಲ 9,499ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ಈ ಫೋನ್‌ಗೆ 27% ಡಿಸ್ಕೌಂಟ್‌ ನೀಡಲಾಗಿದೆ. ಇದನ್ನು ನೀವು ಅಮೆಜಾನ್‌ನಲ್ಲಿ ಖರೀದಿ ಮಾಡಬಹುದು.

Best Mobiles in India

English summary
Oppo A17k smartphone got huge discount. through which you can save more than three thousand. The phone will be powered by MediaTek Helio G35 SoC processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+