Home
ಸುದ್ದಿಜಾಲ

Oppo: ಒಪ್ಪೋದ ಈ ಹೊಸ ಫೋನ್‌ಗೆ ಭಾರೀ ಬ್ಯಾಂಕ್‌ ಆಫರ್... 64 GB ಸ್ಟೋರೇಜ್‌, 5000 mAh ಬ್ಯಾಟರಿ

ಒಪ್ಪೋ (Oppo) ಫೋನ್‌ಗಳಿಗೆ ಭಾರತದಲ್ಲಿ ಬಹಳಷ್ಟು ಬೇಡಿಕೆ ಇದೆ. ಈ ಫೋನ್‌ಗಳು ಅಗ್ಗದ ಲಭ್ಯವಾಗುವುದರ ಜೊತೆಗೆ ವಿಶೇಷವಾದ ಫೀಚರ್ಸ್‌ ಪಡೆಯುವ ಮೂಲಕ ಬಳಕೆದಾರರಿಗೆ ಸಾಕಷ್ಟು ಸೌಲಭ್ಯ ಕಲ್ಪಿಸಿದೆ. ಈ ನಡುವೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಫೋನ್‌ಗೆ ಬ್ಯಾಂಕ್‌ ಆಫರ್ ನೀಡಲಾಗಿದೆ.

ಹೌದು, ಭಾರತದಲ್ಲಿ ಬಹು ಬೇಡಿಕೆ ಇರುವ ಒಪ್ಪೋ ಫೋನ್‌ಗಳ ವಿಭಾಗದಲ್ಲಿ ಒಪ್ಪೋ A18 ಸ್ಮಾರ್ಟ್‌‌ಫೋನ್‌ಗೆ (Oppo A18 smartphone) ವಿಶೇ‍ಷ ಆಫರ್ ನೀಡಲಾಗಿದೆ. ಈ ಫೋನ್‌ ಅನ್ನು ಕೆಲವು ದಿನಗಳ ಹಿಂದಷ್ಟೇ ಲಾಂಚ್ ಮಾಡಲಾಗಿತ್ತು. ಇದು ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್, 8 ಮೆಗಾಪಿಕ್ಸೆಲ್‌ ಪ್ರಮುಖ ಕ್ಯಾಮೆರಾ ಹಾಗೂ ಮೀಡಿಯಾಟೆಕ್ ಹಿಲಿಯೊ G85 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂದು ನೋಡೋಣ ಬನ್ನಿ.

ಒಪ್ಪೋದ ಈ ಹೊಸ ಫೋನ್‌ಗೆ ಭಾರೀ ಬ್ಯಾಂಕ್‌ ಆಫರ್... 64 GB ಸ್ಟೋರೇಜ್‌

ಒಪ್ಪೋ A18 ಸ್ಮಾರ್ಟ್‌‌ಫೋನ್‌ ಆಫರ್ ವಿವರ: ಈ ಸ್ಮಾರ್ಟ್‌ಫೋನ್‌ ಅನ್ನು ನೀವು ಆಫರ್‌ ಬೆಲೆಗೆ ಫ್ಲಿಪ್‌ಕಾರ್ಟ್‌ (Flipkart) ಮೂಲಕ ಖರೀದಿ ಮಾಡಬಹುದಾಗಿದೆ. ಇದು 14.999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವಿಗ ಇದನ್ನು ಆಫರ್ ಬೆಲೆ 9,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಪರಿಣಾಮ ಐದು ಸಾವಿರಕ್ಕೂ ಹೆಚ್ಚಿನ ಹಣ ಉಳಿತಾಯ ಮಾಡಬಹುದು. ಇದರೊಂದಿಗೆ ಬ್ಯಾಂಕ್‌ ಹಾಗೂ ವಿನಿಮಯ ಆಫರ್ ಅನ್ನೂ ಸಹ ನೀಡಲಾಗಿದೆ.

ನೀವು ಈ ವೇಳೆ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಲ್ಲಿ ಬ್ಯಾಂಕ್ ಬಳಕೆ ಮಾಡಿ ಖರೀದಿ ಮಾಡಿದರೆ 10% ರಿಯಾಯಿತಿ ಸಿಗಲಿದೆ. ಇದರೊಂದಿಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೂ 10% ರಿಯಾಯಿತಿ ದೊರೆಯಲಿದ್ದು, ಕೊಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 500 ರಿಯಾಯಿತಿ ಸಿಗಲಿದೆ. ಇಷ್ಟೇ ಅಲ್ಲದೆ ಇಎಮ್‌ಐ ಮೂಲಕ ಖರೀದಿ ಮಾಡಿದ್ರೆ ನೀವು ತಿಂಗಳಿಗೆ 3,333ರೂ.ಗಳನ್ನು ಪಾವತಿ ಮಾಡಬಹುದು.

ಒಪ್ಪೋದ ಈ ಹೊಸ ಫೋನ್‌ಗೆ ಭಾರೀ ಬ್ಯಾಂಕ್‌ ಆಫರ್... 64 GB ಸ್ಟೋರೇಜ್‌

ಒಪ್ಪೋ A18 ಸ್ಮಾರ್ಟ್‌‌ಫೋನ್‌ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.56  ಇಂಚಿನ ಐಪಿಎಸ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು 720 x 1612 ಪಿಕ್ಸೆಲ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 269 ಪಿಪಿಐ ಆಯ್ಕೆ ಇದ್ದು, ಈ ಮೂಲಕ ನೀವು ಉತ್ತಮವಾದ ದೃಶ್ಯ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕೆ ವಾಟರ್ ಡ್ರಾಪ್ ನಾಚ್ ಆಯ್ಕೆ ಹೊಂದಿದೆ.

ಒಪ್ಪೋ A18 ಸ್ಮಾರ್ಟ್‌‌ಫೋನ್‌ ಪ್ರೊಸೆಸರ್‌ ಮಾಹಿತಿ: ಈ ಫೋನ್‌ ಮೀಡಿಯಾಟೆಕ್ ಹಿಲಿಯೊ G85 ಚಿಪ್‌ಸೆಟ್ ಕಾರ್ಯಕ್ಷಮತೆ ಹೊಂದಿದ್ದು, ಇದು 2 GHz, ಆಕ್ಟಾ ಕೋರ್ ಪ್ರೊಸೆಸರ್ ಆಗಿದೆ. ಇದರೊಂದಿಗೆ ಈ ಫೋನ್‌ ಆಂಡ್ರಾಯ್ಡ್ v13 ಓಸ್‌ನಲ್ಲಿ ರನ್‌ ಆಗಲಿದೆ. ಉಳಿದಂತೆ ಈ ಫೋನ್‌ 4 GB RAM ಹಾಗೂ 64 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದ್ದು, ಹೆಚ್ಚಿನ ಸ್ಟೋರೇಜ್‌ ಅವಶ್ಯಕತೆ ಇದ್ದರೆ ಎಸ್‌ಡಿ ಕಾರ್ಡ್‌ ಬಳಕೆ ಮಾಡಬಹುದು.

ಒಪ್ಪೋದ ಈ ಹೊಸ ಫೋನ್‌ಗೆ ಭಾರೀ ಬ್ಯಾಂಕ್‌ ಆಫರ್... 64 GB ಸ್ಟೋರೇಜ್‌

ಒಪ್ಪೋ A18 ಸ್ಮಾರ್ಟ್‌‌ಫೋನ್‌ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್‌ 8 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಸೆನ್ಸರ್‌ 1080p @ 30 fps FHD ವಿಡಿಯೋ ರೆಕಾರ್ಡಿಂಗ್ ಮಾಡಲು ಅನುವು ಮಾಡಿಕೊಡುತ್ತದೆ. ಇದರೊಟ್ಟಿಗೆ 5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆಯನ್ನು ಈ ಫೋನ್‌ ಹೊಂದಿದೆ.

ಒಪ್ಪೋ A18 ಸ್ಮಾರ್ಟ್‌‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 4G, VoLTE, ಬ್ಲೂಟೂತ್ ಆವೃತ್ತಿ v5.3, ವೈಫೈ, ಯುಎಸ್‌ಬಿ ಟೈಪ್‌ ಸಿ v2.0 ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್‌ ಪಡೆದಿದೆ. ಹಾಗೆಯೇ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿರುವ ಈ ಫೋನ್‌ 8.2 mm ದಪ್ಪದೊಂದಿಗೆ 188 g ತೂಕ ಪಡೆದಿದೆ.

Best Mobiles in India

English summary
Oppo A18 smartphone have A special offer. This phone was launched a few days back. It will be powered by a side fingerprint sensor, 8-megapixel main camera and MediaTek Helio G85 chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+