Oppo: ಐಫೋನ್ 15 ನಲ್ಲೂ ಇಲ್ಲದ ಫೀಚರ್ಸ್ ಮಿಡ್‌ರೇಂಜ್‌ನ ಈ ಒಪ್ಪೋ ಫೋನ್‌ನಲ್ಲಿ! ಯಾವಾಗ ಲಾಂಚ್?
ಒಪ್ಪೋ ಫೋನ್‌ಗಳು (Oppo phones) ಭಿನ್ನ ಫೀಚರ್ಸ್ ಆಯ್ಕೆ ಮೂಲಕ ಸಾಕಷ್ಟು ಗ್ರಾಹಕರನ್ನು ಸೆಳೆದಿವೆ. ಈ ನಡುವೆ ಒಪ್ಪೋ ಸುಧಾರಿತ ಫೀಚರ್ಸ್ ಇರುವ ಹೊಸ ಫೋನ್ ಅನ್ನು ಅನಾವರಣ ಮಾಡಲು ಮುಂದಾಗಿದೆ. ಈ ಸ್ಮಾರ್ಟ್‌ಫೋನ್ ಐಫೋನ್ 15 (iPhone 15) ನಲ್ಲೂ ಇಲ್ಲದ ಫೀಚರ್ಸ್ ಆಯ್ಕೆ ಪಡೆದುಕೊಂಡಿರುವ ದೃಢವಾಗಿದೆ.
ಹೌದು, ಒಪ್ಪೋ A3 ಪ್ರೊ ಸ್ಮಾರ್ಟ್‌ಫೋನ್ (Oppo A3 Pro smartphone) ಅನ್ನು ಇನ್ನೇನು ಕೆಲವೇ ದಿನಗಳಲ್ಲಿ ಅನಾವರಣ ಮಾಡಲಾಗುತ್ತದೆ. ಈ ಸ್ಮಾರ್ಟ್‌ಫೋನ್ ಲಾಂಚ್ ಆಗುವ ಮುನ್ನವೇ ಸ್ಮಾರ್ಟ್‌ಫೋನ್ ವಲಯದಲ್ಲಿ ದೊಡ್ಡ ಬಿರುಗಾಳಿ ಉಂಟು ಮಾಡಿದೆ. ಈ ಫೋನ್ ಮಿಡ್‌ರೇಂಜ್ ಫೋನ್ ವಿಭಾಗದಲ್ಲಿ ದೊಡ್ಡ ಕಮಾಲ್ ಮಾಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್ ಏನು?, ಐಫೋನ್‌ನಲ್ಲೂ ಇಲ್ಲದ ಅಂತಹ ಫೀಚರ್ಸ್ ಯಾವುದು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒಪ್ಪೋ A3 ಪ್ರೊ ಸ್ಮಾರ್ಟ್‌ಫೋನ್: ಒಪ್ಪೋ ಇಂದು ತನ್ನ ಒಪ್ಪೋ A3 ಪ್ರೊ ಅನ್ನು ಚೀನಾದಲ್ಲಿ ಏಪ್ರಿಲ್ 12 ರಂದು ಲಾಂಚ್ ಮಾಡಲಿದೆ ಎಂದು ಘೋಷಣೆ ಮಾಡಿದೆ. ಗಮನಿಸಬೇಕಾದ ವಿಷಯ ಏನೆಂದರೆ ಈ ಬಿಡುಗಡೆಯ ದಿನಾಂಕದ ಜೊತೆಗೆ, ಕಂಪನಿಯು ಸ್ಮಾರ್ಟ್‌ಫೋನ್‌ಗಾಗಿ ವಿನ್ಯಾಸ ಮತ್ತು ಬಣ್ಣದ ಆಯ್ಕೆಯನ್ನೂ ಸಹ ಬಹಿರಂಗಪಡಿಸಿದೆ. ಜೊತೆಗೆ ಈ ಫೋನ್
IP69 ರೇಟಿಂಗ್ ಅನ್ನು ಒಳಗೊಂಡಿರುವ ಒಪ್ಪೋದ ಮಿಡ್ ರೇಂಜ್ ವಿಭಾಗದ ಮೊದಲ ಫೋನ್ ಆಗಿರಲಿದೆ.
ಈಗ ವಿಶ್ವಾಸಾರ್ಹ ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಫೋನ್‌ನ ಫೀಚರ್ಸ್ ಬಗ್ಗೆ ಸುಳಿವು ನೀಡಿದೆ. ಈ ಮೂಲಕ ಈ ಫೋನ್‌ನಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ನಮಗೆ ಸ್ಪಷ್ಟವಾದ ಕಲ್ಪನೆ ಬರಲಿದೆ. ಅಂತೆಯೇ ಈ ಫೋನ್ ಅಸಾಧಾರಣ ಫೀಚರ್ಸ್ ಹಾಗೂ ಬಾಳಿಕೆಗೆ ಹೆಸರುವಾಸಿಯಾಗಲಿದೆ. ಟಿಪ್‌ಸ್ಟರ್ ಪ್ರಕಾರ, ಫೋನ್ IP69 ರೇಟಿಂಗ್ ಅನ್ನು ಹೊಂದಿದೆ. ಇದು ಡಿವೈಸ್‌ಗಳಿಗೆ ಹೆಚ್ಚಿನ ಮಟ್ಟದ ಧೂಳು ಮತ್ತು ನೀರಿನಿಂದ ರಕ್ಷಣೆ ನೀಡಲಿದೆ.

ಈ IP69 ರೇಟೆಡ್ ಹೊಂದಿರುವ ಡಿವೈಸ್‌ಗಳು ಯಾವುದೇ ನೀರು, ಧೂಳಿಗೆ ಹಾಳಾಗುವುದಿಲ್ಲ. ಜೊತೆಗೆ ಅತ್ಯಂತ ಕಠಿಣ ಪರಿಸರದಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಈ ಫೀಚರ್ಸ್ ಅನ್ನು ಈವರೆಗೂ ಪ್ರೀಮಿಯಂ ಫೋನ್‌ಗಳಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ, ಈಗ ಒಪ್ಪೋದ ಮಿಡ್ ರೇಂಜ್ ಫೋನ್‌ಗಳಿಗೆ ನೀಡಲಾಗುತ್ತಿರುವುದು ಸ್ಮಾರ್ಟ್‌ಫೋನ್ ಪ್ರಿಯರ ಹುಬ್ಬೇರಿಸುವಂತೆ ಮಾಡಿದೆ.
ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ, ಐಫೋನ್ 15, ಅಥವಾ ಒಪ್ಪೋ ಫೈಂಡ್ X7 ಅಲ್ಟ್ರಾ (Samsung Galaxy S24 Ultra, iPhone 15, Oppo Find X7 Ultra) ನಂತಹ ಡಿವೈಸ್‌ಗಳೇ IP68 ರೇಟಿಂಗ್ ಅನ್ನು ಹೊಂದಿವೆ. ಆದರೆ, ಈ ಮಿಡ್‌ರೇಂಜ್ ಫೋನ್ IP69 ರೇಂಟಿಂಗ್ ಹೊಂದಿರುವುದು ಭಾರೀ ವಿಶೇಷವೇ ಸರಿ. ಈ ಮೂಲಕ ಈ ಫೋನ್ ನೀರಿನ ಹನಿಗಳು ಮತ್ತು ಆಘಾತಗಳನ್ನು ತಡೆದುಕೊಳ್ಳುವ ಒರಟಾದ ವಿನ್ಯಾಸವನ್ನು ಈ ಫೋನ್ ಪಡೆಯಲಿದೆ.
ಇದರೊಂದಿಗೆ ಈ ವಿಶೇಷ ಫೋನ್ ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕಾಗಿ ಕೇಂದ್ರೀಕೃತ ಸಿಂಗಲ್ ಹೋಲ್ ಪಂಚ್‌ನೊಂದಿಗೆ 6.7 ಇಂಚಿನ 1080p ಪಿಕ್ಸೆಲ್ ಸ್ಕ್ರೀನ್ ಸಾಮರ್ಥ್ಯದ 120Hz ರಿಫ್ರೆಶ್ ರೇಟ್ ಆಯ್ಕೆಯ OLED ಕರ್ವ್ಡ ಡಿಸ್‌ಪ್ಲೇ ಅಯ್ಕೆ ಪಡೆದಿರಲಿದೆ ಎನ್ನಲಾಗಿದೆ. ಅಲ್ಲದೆ ಇದು ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.

ಹಾಗೆಯೇ ಈ ಚಿಪ್ ಅನ್ನು 12GB RAM ಮತ್ತು 512GB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ ಸಂಯೋಜನೆ ಮಾಡಲಾಗಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಈ ಫೋನ್ ಹೊಂದಿರಬಹುದು ಎಂದು ಲೀಕ್ ಮಾಹಿತಿ ಮೂಲಕ ತಿಳಿದುಬಂದಿದೆ.


Click it and Unblock the Notifications








