ಭಾರೀ ಸಸ್ತಾ ಬೆಲೆಗೆ OPPO A3x 4G ಫೋನ್ ಲಾಂಚ್; ವೇಗದ ಪ್ರೊಸೆಸರ್ ಇದೆ!
ಜನಪ್ರಿಯ ಒಪ್ಪೋ (OPPO) ಮೊಬೈಲ್ ಸಂಸ್ಥೆಯ ನೂತನವಾಗಿ ಒಪ್ಪೋ A3x 4G (OPPO A3x 4G) ಸ್ಮಾರ್ಟ್‌ಫೋನ್ ಅಧಿಕೃತವಾಗಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಫೋನ್ ಅಗ್ಗದ ಪ್ರೈಸ್‌ಟ್ಯಾಗ್ ವಿಭಾಗದಲ್ಲಿ ಕಾಣಿಸಿಕೊಂಡಿದ್ದು, 4G ವೇರಿಯಂಟ್ ಆಗಿದೆ. ಈ ಮೊಬೈಲ್ ಸ್ನ್ಯಾಪ್‌ಡ್ರಾಗನ್ 6s 4G Gen 1 SoC ಪ್ರೊಸೆಸರ್ ಪವರ್ ಪಡೆದಿರುವುದು ಪ್ರಮುಖ ಹೈಲೈಟ್ಸ್ ಆಗಿ ಗುರುತಿಸಿಕೊಂಡಿದೆ.
ಹೌದು, ಒಪ್ಪೋ ಸಂಸ್ಥೆಯು ಅಧಿಕೃತವಾಗಿ ತನ್ನ ಒಪ್ಪೋ A3x 4G (OPPO A3x 4G) ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಮೊಬೈಲ್ 5100mAh ಬ್ಯಾಟರಿ ಸೌಲಭ್ಯ ಪಡೆದಿದ್ದು, ಇದರೊಂದಿಗೆ 8 ಮೆಗಾ ಪಿಕ್ಸಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಹಾಗೆಯೇ ಮುಂಭಾಗದಲ್ಲಿ 5 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ.

ಸಂಸ್ಥೆಯ ಈ ನೂತನ ಒಪ್ಪೋ A3x 4G ಮೊಬೈಲ್ 4GB + 64GB ಹಾಗೂ 4GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇದಲ್ಲದೇ ಇದು 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರುವುದು ಇನ್ನೊಂದು ಹೈಲೈಟ್ ಅಂಶವಾಗಿ ಕಾಣಿಸಿದೆ. ಇನ್ನುಳಿದಂತೆ ಒಪ್ಪೋ A3x 4G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ಒಪ್ಪೋ A3x 4G - ಫೀಚರ್ಸ್ ಹೀಗಿವೆ
ಒಪ್ಪೋ A3x 4G ಮೊಬೈಲ್ 6.67 ಇಂಚಿನ IPS LCD ಸ್ಕ್ರೀನ್ ಅನ್ನು ಹೊಂದಿದ್ದು, ಡಿಸ್‌ಪ್ಲೇಯು HD+ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಇನ್ನು ಇದು 90 Hz ರಿಫ್ರೆಶ್ ರೇಟ್ ಹಾಗೂ 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಪಡೆದಿದೆ ಜೊತೆಗೆ 264 PPI ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ 1000 nits ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಕೂಡಾ ಪಡೆದಿದೆ.
ಒಪ್ಪೋ A3x 4G ಮೊಬೈಲ್ ಸ್ನ್ಯಾಪ್‌ಡ್ರಾಗನ್ 6s 4G Gen 1 SoC (Snapdragon 6s 4G Gen 1 SoC) ಸಪೋರ್ಟ್ ಸಹ ಇದೆ. ಅಲ್ಲದೇ ಇದು ಆಂಡ್ರಾಯ್ಡ್ 14 ನಲ್ಲಿ ರನ್ ಆಗಲಿದೆ. ಹಾಗೆಯೇ 4GB + 64GB ಹಾಗೂ 4GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಮೈಕ್ರೊ SD ಕಾರ್ಡ್ ಸ್ಲಾಟ್ ಆಯ್ಕೆ ಕೂಡಾ ಇದೆ.
ಒಪ್ಪೋ A3x 4G ಮೊಬೈಲ್ ಹಿಂಭಾಗದಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.
ಒಪ್ಪೋ A3x 4G ಮೊಬೈಲ್ 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದ್ದು, ಇದಕ್ಕೆ ಸಪೋರ್ಟ್ ಆಗಿ 5100mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G LTE, ಬ್ಲೂಟೂತ್ v5.0, Wi-Fi 5 ಮತ್ತು GPS ಆಯ್ಕೆಗಳು ಸಹ ಇವೆ. ಅಲ್ಲದೇ IP54 ರೇಟಿಂಗ್ ಸೌಲಭ್ಯ ಸಹ ಇದೆ. ಹಾಗೆಯೇ ಇದು 3.5mm ಆಡಿಯೋ ಜ್ಯಾಕ್ ಮತ್ತು ಸಿಂಗಲ್ ಮೊನೊ ಸ್ಪೀಕರ್ ಜೊತೆಗೆ USB 2.0 ಡೇಟಾ ವರ್ಗಾವಣೆಗೆ ಚಾರ್ಜಿಂಗ್ ಮತ್ತು ಸಪೋರ್ಟ್‌ಗಾಗಿ USB-C ಪೋರ್ಟ್ ಅನ್ನು ಪಡೆದಿದೆ.
ಬೆಲೆ ಹಾಗೂ ಲಭ್ಯತೆ
ಒಪ್ಪೋ A3x 4G ಮೊಬೈಲ್‌ನ 4GB + 64GB ವೇರಿಯಂಟ್ ಬೆಲೆ 12,999ರೂ ಮತ್ತು 4GB + 128GB ಟ್ರಿಮ್ ವೇರಿಯಂಟ್ ಬೆಲೆಯು 13,999ರೂ. ಆಗಿದೆ. ಇನ್ನು ಈ ಫೋನ್ ನೆಬ್ಯುಲಾ ರೆಡ್ ಮತ್ತು ಓಷನ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಒಪ್ಪೋ ಆನ್‌ಲೈನ್ ಸ್ಟೋರ್‌ನಿಂದ ಖರೀದಿ ಮಾಡಬಹುದು.


Click it and Unblock the Notifications








