ಒಪ್ಪೋ A53 5G ಸ್ಮಾರ್ಟ್‌ಫೋನ್ ಅನಾವರಣ!..ಟ್ರಿಪಲ್‌ ಕ್ಯಾಮೆರಾ!

|

ಒಪ್ಪೋ ಮೊಬೈಲ್‌ ಸಂಸ್ಥೆಯು ಹಲವು ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಅವುಗಳಲ್ಲಿ ಇತ್ತೀಚಿಗಿನ ಒಪ್ಪೋ A53 2020 ಸಹ ಹೆಚ್ಚು ಆಕರ್ಷಕ ಅನಿಸಿಕೊಂಡಿದೆ. ಒಪ್ಪೋ A53 ಫೋನಿನ ಮುಂದುವರಿದ ಭಾಗವಾಗಿ ಕಂಪನಿಯು ಕಂಪನಿಯು ಇದೀಗ ಒಪ್ಪೋ A53 5G ಸ್ಮಾರ್ಟ್‌ಫೋನ್‌ ಆವೃತ್ತಿಯನ್ನು ಅನಾವರಣ ಮಾಡಿದೆ.

ಒಪ್ಪೋ

ಹೌದು, ಒಪ್ಪೋ ಸಂಸ್ಥೆಯು ಹೊಸದಾಗಿ ಒಪ್ಪೋ A53 5G ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಪರಿಚಯಿಸಿದೆ. ಈ ಫೋನ್ 4GB RAM + 64GB ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಆಂಡ್ರಾಯ್ಡ್ 10 ಓಎಸ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್ ಲೇಕ್ ಗ್ರೀನ್, ಬ್ಲ್ಯಾಕ್ ಹಾಗೂ ಪರ್ಪಲ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಇನ್ನುಳಿದಂತೆ ಈ ಫೋನ್ ಯಾವೆಲ್ಲಾ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಒಪ್ಪೋ A53 5G ಸ್ಮಾರ್ಟ್ ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್‌ ಜೊತೆಗೆ 6.5 ಇಂಚಿನ HD + ಗುಣಮಟ್ಟವನ್ನು ಹೊಂದಿದೆ. 90Hz ರೀಫ್ರೇಶ್ ರೇಟ್ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 20:9 ಅನುಪಾತವನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 405ppi ಆಗಿದೆ.

ಪ್ರೊಸೆಸರ್ ಕಾರ್ಯ

ಪ್ರೊಸೆಸರ್ ಕಾರ್ಯ

ಒಪ್ಪೋ A53 5G ಸ್ಮಾರ್ಟ್ ಫೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 720 SoC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, 5G ಬೆಂಬಲಿತವಾಗಿದೆ. ಹಾಗೆಯೇ ಈ ಫೋನ್ 4GB RAM + 64GB ಮತ್ತು 6GB RAM + 128GB ಸ್ಟೋರೇಜ್ನ ಎರಡು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. .

ಟ್ರಿಪಲ್ ಕ್ಯಾಮೆರಾ

ಟ್ರಿಪಲ್ ಕ್ಯಾಮೆರಾ

ಒಪ್ಪೋ A53 5G ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಮುಖ್ಯ ಕ್ಯಾಮೆರಾ 16 MP ಸೆಕೆಂಡರಿ ಕ್ಯಾಮೆರಾ 2 MP ಹಾಗೂ ತೃತೀಯ ಕ್ಯಾಮೆರಾವು ಸಹ 2MP ಸೆನ್ಸಾರ್‌ನಲ್ಲಿದೆ. ಇದರೊಂದಿಗೆ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಒಪ್ಪೋ A53 5G ಸ್ಮಾರ್ಟ್ ಫೋನ್ 4,040mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 10W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ವೈ-ಫೈ, ಬ್ಲೂಟೂತ್, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ. ಹಾಗೆಯೇ ಆಂಬಿಯೆಂಟ್ ಲೈಟ್ ಸೆನ್ಸಾರ್, ಸಾಮೀಪ್ಯ ಸಂವೇದಕ, ಅಕ್ಸೆಲೆರೊಮೀಟರ್, ಗ್ರಾವಿಟಿ ಸೆನ್ಸರ್ ಮತ್ತು ಗೈರೊಸ್ಕೋಪ್ ಅನ್ನು ಒಳಗೊಂಡಿವೆ. ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಸಹ ಇದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒಪ್ಪೋ A53 5G ಸ್ಮಾರ್ಟ್ ಫೋನ್ 4GB RAM + 64GB ವೇರಿಯಂಟ್ ಬೆಲೆಯು ಚೀನಾದಲ್ಲಿ CNY 1,299 (ಅಂದಾಜು 14,600ರೂ) ಆಗಿದೆ. ಇನ್ನು ಈ ಫೋನ್ ಲೇಕ್ ಗ್ರೀನ್, ಬ್ಲ್ಯಾಕ್ ಹಾಗೂ ಪರ್ಪಲ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಭಾರತದಲ್ಲಿ ಈ ಫೋನ್ ಯಾವಾಗ ಲಭ್ಯ ಎನ್ನುವ ಬಗ್ಗೆ ಕಂಪನಿಯು ಮಾಹಿತಿ ಹೊರಹಾಕಿಲ್ಲ.

Best Mobiles in India

English summary
Oppo A53 5G, a 5G version of the Oppo A53 debuted back in August, has been launched in China.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X