ಒಪ್ಪೋ A55 ಫೋನ್‌ಗೆ ಭರ್ಜರಿ ರಿಯಾಯಿತಿ;12,900ರೂ.ವರೆಗೆ ವಿನಿಮಯ ಆಫರ್!
ಮೊಬೈಲ್ ಮಾರುಕಟ್ಟೆಯಲ್ಲಿ ಒಪ್ಪೋ ಬ್ರ್ಯಾಂಡ್ ಫೋನ್‌ಗಳಿಗೆ ವಿಶೇಷ ಬೇಡಿಕೆ ಇದೆ. ಈ ಫೋನ್‌ಗಳ ಕ್ಯಾಮೆರಾ ಫೀಚರ್ಸ್ ಹಾಗೂ ಬ್ಯಾಟರಿ ಸಾಮರ್ಥ್ಯ ಭಾರತೀಯರಿಗೆ ಅಚ್ಚುಮೆಚ್ಚು. ಅದರಂತೆ ಈಗಾಗಲೇ ಹಲವು ಫೋನ್‌ಗಳ ಬೆಲೆ ಇಳಿಕೆ ಮಾಡಲಾಗಿದ್ದು, ಇದೀಗ ಒಪ್ಪೋ A55 ಫೋನ್ ಅನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ.
ಹೌದು, ಕೈಗೆಟಕುವ ದರದಲ್ಲಿ ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಸುವರ್ಣಾವಕಾಶ. ಯಾಕೆಂದರೆ ಒಪ್ಪೋ A55 (Oppo A55 ) ಸ್ಮಾರ್ಟ್‌ಫೋನ್ 18,990 ರೂ. ಗಳ ಬೆಲೆ ಹೊಂದಿದ್ದು, ವಿನಿಮಯ ಆಫರ್‌ನಲ್ಲಿ ಕೇವಲ 599 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ಆಫರ್ ಎಲ್ಲಿ ಲಭ್ಯ?, ಯಾವ ಬ್ಯಾಂಕ್ ಕಾರ್ಡ್‌ಗೆ ಎಷ್ಟು ಡಿಸ್ಕೌಂಟ್, ಈ ಫೋನ್‌ನ ಪ್ರಮುಖ ಫೀಚರ್ಸ್ ಏನು ಎಂಬ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಒಪ್ಪೋ A55 ಫೋನ್ ಮೂಲ ಬೆಲೆ 18,990
ಒಪ್ಪೋ A55 ಸ್ಮಾರ್ಟ್‌ಫೋನ್ ಅಕ್ಟೋಬರ್ 2021 ರಲ್ಲಿ ಲಾಂಚ್ ಆಗಿದ್ದು, ಇಂದಿಗೂ ಈ ಫೋನ್‌ಗೆ ಬೇಡಿಕೆ ಇದ್ದು, ಒಪ್ಪೋ ಪ್ರಿಯರು ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಅಂದರೆ 29% ತ್ವರಿತ ರಿಯಾಯಿತಿಯೊಂದಿಗೆ 12,900 ವರೆಗಿನ ವಿನಿಮಯ ಆಫರ್ ಹಾಗೂ ಬ್ಯಾಂಕ್ ಕೊಡುಗೆಯೊಂದಿಗೆ ಈ ಫೋನ್ ಖರೀದಿಗೆ ಲಭ್ಯ.
ಅಮೆಜಾನ್ ನಲ್ಲಿ ಭರ್ಜರಿ ಆಫರ್
ಪ್ರಮುಖ ಇ-ಕಾಮರ್ಸ್ ತಾಣವಾದ ಅಮೆಜಾನ್‌ನಲ್ಲಿ ಈ ಫೋನ್‌ಗೆ ಈ ಬಂಪರ್ ಆಫರ್ ಲಭ್ಯವಿದ್ದು, 5,491 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 13,499 ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅದಾಗ್ಯೂ ನೀವು ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಅನ್ನು ಖರೀದಿ ಮಾಡಲು ಬಯಸಿದರೆ ಕೆಲವು ಬ್ಯಾಂಕ್ ಹಾಗೂ ವಿನಿಮಯ ಆಫರ್ ಬಳಕೆ ಮಾಡಿಕೊಳ್ಳಬಹುದಾಗಿದೆ.

599 ರೂ. ಗಳಿಗೆ ಒಪ್ಪೋ A55 ಫೋನ್ ನಿಮ್ಮದಾಗಿಸಿಕೊಳ್ಳಿ
ವಿನಿಮಯ ಆಫರ್‌ನಲ್ಲಿ 12,900 ರೂ. ಗಳ ವರೆಗೂ ರಿಯಾಯಿತಿ ಲಭ್ಯವಾಗಲಿದ್ದು, ಹಳೆಯ ಫೋನ್ ಅತ್ಯುತ್ತಮವಾಗಿದ್ದರೆ ಇಷ್ಟು ರಿಯಾಯಿತಿ ದೊರೆಯುತ್ತದೆ. ಈ ಮೂಲಕ ಕೇವಲ 599 ರೂ. ಗಳಲ್ಲಿ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು ಎಂದರೆ ನೀವು ನಂಬಲೇಬೇಕು. ಇದಿಷ್ಟೇ ಅಲ್ಲದೆ, ಫ್ಲಿಪ್‌ಕಾರ್ಟ್‌ನಲ್ಲೂ ಸಹ ಇದೇ ರೀತಿಯ ಆಫರ್ ಲಭ್ಯವಿದ್ದು, ಗ್ರಾಹಕರು ಹೆಚ್‌ಎಸ್‌ಬಿಸಿ ಕಾರ್ಡ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಈ ಫೋನ್ ಖರೀದಿ ಮಾಡಿದರೆ 250 ರೂ. ಗಳ ರಿಯಾಯಿತಿ ಪಡೆಯಬಹುದಾಗಿದೆ.
ಒಪ್ಪೋ A55 ಫೋನ್ ಪ್ರಮುಖ ಫೀಚರ್ಸ್
ಒಪ್ಪೋ A55 ಸ್ಮಾರ್ಟ್‌ಫೋನ್ 6.51 ಇಂಚಿನ IPS ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 720 x 1600 ಪಿಕ್ಸೆಲ್ ರೆಸಲ್ಯೂಶನ್ ಪಡೆದುಕೊಂಡಿದೆ. ಹಾಗೆಯೇ 550nits ಬ್ರೈಟ್‌ನೆಸ್ ಮೂಲಕ ಹೆಚ್ಚಿನ ಪ್ರಖರತೆಯನ್ನು ನೀಡಲಿದೆ. ಇದರೊಂದಿಗೆ ಮೀಡಿಯಾ ಟೆಕ್ ಹಿಲಿಯೋ G35 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಈ ಫೋನ್ 4GB ಮತ್ತು 6GB RAM ನ ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ.

ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ
ಇನ್ನುಳಿದಂತೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಹೊಂದಿದ್ದು, ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಆಯ್ಕೆ ಹೊಂದಿದ್ದು, ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಪಡೆದುಕೊಂಡಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಇದು 18W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.


Click it and Unblock the Notifications








