ಎಂಟ್ರಿ ಕೊಟ್ಟಿದೆ 'ಒಪ್ಪೋ A57s' ಸ್ಮಾರ್ಟ್‌ಫೋನ್!..ಏನಿದರ ಫೀಚರ್ಸ್?
ಒಪ್ಪೋ ಕಂಪೆನಿಯ ತನ್ನ A ಸರಣಿಯಲ್ಲಿ ಈಗ ಹೊಸದಾಗಿ ಒಪ್ಪೋ A57s ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಜೊತೆಗೆ 5000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಹಾಗೆಯೇ ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿರುವುದು ಪ್ರಮುಖ ಆಕರ್ಷಣೆ ಎನಿಸಿದೆ.

ಹೌದು, ಒಪ್ಪೋ ಕಂಪೆನಿಯು ಹೊಸದಾಗಿ ಒಪ್ಪೋ A57s ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. 1612 × 720 ಪಿಕ್ಸಲ್ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 600nits ಬ್ರೈಟ್ನೆಸ್ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಅಧಿಕ ಬ್ಯಾಟರಿ ಬ್ಯಾಕ್‌ಅಪ್ ನೊಂದಿಗೆ 33W SuperVOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ.

ಇನ್ನು ಈ ಫೋನ್ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, 4GB RAM + 64GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಒಳಗೊಂಡಿದೆ. ಡಿಸ್‌ಪ್ಲೇಯು ವಾಟರ್‌ಟ್ರಾಪ್ ನಾಚ್ ಮಾದರಿಯಲ್ಲಿದೆ. ಇನ್ನುಳಿದಂತೆ ಒಪ್ಪೋ A57s ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಒಪ್ಪೋ A57s ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 60Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇನ್ನು ಡಿಸ್‌ಪ್ಲೇ 84.2% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, 20:9 ರಚನೆಯ ಅನುಪಾತವನ್ನು ಪಡೆದಿದೆ.

ಪ್ರೊಸೆಸರ್ ಪವರ್ ಯಾವುದು?
ಒಪ್ಪೋ A57s ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾಟೆಕ್ ಹಿಲಿಯೋ G35 SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಕಲರ್OS 12.1 ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವಿದೆ.

ಕ್ಯಾಮೆರಾ ಸೆನ್ಸಾರ್ ವಿಶೇಷ
ಒಪ್ಪೋ A57s ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮೊನೊ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ಯಾಮೆರಾ ಮೂಲಕ 30fps ನಲ್ಲಿ 1080p ವರೆಗೆ ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದೆ. ಇದಲ್ಲದೆ ಕ್ಯಾಮೆರಾದಲ್ಲಿ ಎಲ್ಇಡಿ ಫ್ಲ್ಯಾಷ್, ಎಚ್‌ಡಿಆರ್, ಪನೋರಮಾ ಫೀಚರ್ಸ್‌ಗಳನ್ನು ಕಾಣಬಹುದಾಗಿದೆ.

ಬ್ಯಾಟರಿ ಬ್ಯಾಕ್‌ಅಪ್
ಒಪ್ಪೋ A57s ಸ್ಮಾರ್ಟ್‌ಫೋನ್ 33W ಸೂಪರ್‌ವೂಕ್ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಬ್ಲೂಟೂತ್ 5.3, USB ಟೈಪ್-C ಪೋರ್ಟ್ ಮತ್ತು 3.mm ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ. ಹಾಗೆಯೇ ಮೈಕ್ರೋ-ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆಯುತ್ತದೆ

ಇತರೆ ಸೌಲಭ್ಯಗಳು
ಈ ಫೋನ್ ಎರಡು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಅವು ಕ್ರಮವಾಗಿ ಸ್ಟಾರಿ ಬ್ಲಾಕ್ ಮತ್ತು ಸ್ಕೈ ಬ್ಲೂ ಆಗಿವೆ. ಇದು 187ಗ್ರಾಂ ಗಳಷ್ಟು ತೂಗುತ್ತದೆ ಮತ್ತು 163.74 × 75.03 × 7.99mm ಅಳತೆಗಳನ್ನು ಹೊಂದಿದೆ. ಸಾಧನದ ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 4G, ವೈಫೈ 802.11 ac/a/b/g/n, ಬ್ಲೂಟೂತ್ 5.3, NFC, GPS, ಆಯ್ಕೆಗಳು ಇವೆ. ಸಂಸ್ಥೆಯು ಈ ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ.


Click it and Unblock the Notifications








