ಸದ್ಯದಲ್ಲಿಯೇ ಬರಲಿದೆ ಬಜೆಟ್‌ ಬೆಲೆಯ ಒಪ್ಪೋ A6 ಸ್ಮಾರ್ಟ್‌ಫೋನ್!

|

ಒಪ್ಪೋ ಸ್ಮಾರ್ಟ್‌ಫೋನ್ ಸಂಸ್ಥೆಯು ಭಿನ್ನ ಶ್ರೇಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಕಳೆದ ವರ್ಷ ಬಿಡುಗಡೆ ಮಾಡಿದ್ದ ಒಪ್ಪೋ A5 ಸ್ಮಾರ್ಟ್‌ಫೋನಿನ ಉತ್ತರಾಧಿಕಾರಿಯಾಗಿ ಇದೀಗ ಒಪ್ಪೋ A6 ಸ್ಮಾರ್ಟ್‌ಫೋನ್ ಪರಿಚಯಿಸಲು ಸಂಸ್ಥೆಯು ಸಜ್ಜಾಗಿದೆ. ಇ ಫೋನ್ ಬಜೆಟ್‌ ಪ್ರೈಸ್‌ಟ್ಯಾಗ್ ಹೊಂದಿರಲಿದ್ದು, ಆದರೆ ಫೀಚರ್ಸ್‌ಗಳು ಬಗ್ಗೆ ಕುತೂಹಲ ಮೂಡಿಸಿದೆ.

ಒಪ್ಪೋ

ಹೌದು, ಒಪ್ಪೋ ಸಂಸ್ಥೆಯು ತನ್ನ ಹೊಸ ಒಪ್ಪೋ A6 ಸ್ಮಾರ್ಟ್‌ಫೋನ್ ಅನ್ನು ಭಾರತಯ ಮಾರುಕಟ್ಟೆಗೆ ಇದೇ ಸೆಪ್ಟಂಬರ್ ತಿಂಗಳಿನಲ್ಲಿ ಲಾಂಚ್ ಮಾಡುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಸಂಸ್ಥೆಯು ಅಧಿಕೃತ ಟೀಸರ್ ಮತ್ತು ಮಾಹಿತಿ ಬಹಿರಂಗ ಮಾಡಿಲ್ಲ ಎಂದು ಮೊಬೈಲ್ 91 ವೆಬ್‌ಸೈಟ್ ವರದಿ ಮಾಡಿದೆ. ಆದರೆ ಕ್ಯಾಮೆರಾ, ಪ್ರೊಸೆಸರ್‌ ಫೀಚರ್ಸ್‌ಗಳಲ್ಲಿ ಅಪ್‌ಡೇಟ್‌ ಹೊಂದಿರಲಿದೆ ಎನ್ನಲಾಗಿದ್ದು, ಫೋನ್ ಬೆಲೆಯು 10,000 ರೂ. ಆಸುಪಾಸಿನಲ್ಲಿರಲಿದೆ ಎಂದು ಹೇಳಲಾಗುತ್ತಿದೆ.

ಒಪ್ಪೋ A5

ಒಪ್ಪೋ A6 ಈ ಹಿಂದಿನ ಒಪ್ಪೋ A5 ಸ್ಮಾರ್ಟ್‌ಫೋನಿಗಿಂತ ಸಾಕಷ್ಟು ಅಪ್‌ಡೇಟ್ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ಮುಖ್ಯವಾಗಿ ಬ್ಯಾಟರಿ, ಪ್ರೊಸೆಸರ್‌ನಲ್ಲಿ ಬದಲಾವಣೆ ಇರಲಿವೆ ಎಂದು ಹೇಳಲಾಗ್ತಿದೆ. ಹಾಗಾದರೇ ಈ ಹಿಂದಿನ ಒಪ್ಪೋ A5 ಫೋನ್ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಪೂರ್ಣ ಡಿಸ್‌ಪ್ಲೇ

ಪೂರ್ಣ ಡಿಸ್‌ಪ್ಲೇ

6.2 ಇಂಚಿನ ಡಿಸ್ ಪ್ಲೇಯನ್ನು ಒಪ್ಪೋ A5 ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದಾಗಿದ್ದು, ಇದು HD + ಗುಣಮಟ್ಟವನ್ನು ಹೊಂದಿದ್ದು, ಜೊತೆಗೆ ನಾಚ್ ಡಿಸ್ ಪ್ಲೇ ವಿನ್ಯಾಸ ಸಹ ಇದರಲ್ಲಿದೆ. ಇದಲ್ಲದೇ ಇದು 19:9 ಅನುಪಾತದ ಡಿಸ್ ಪ್ಲೇಯಾಗಿದ್ದು, ಫೂಲ್ ವ್ಯೂವ್ ಡಿಸ್ ಪ್ಲೇ ವಿನ್ಯಾಸವನ್ನು ಹೊಂದಿದ್ದು, ಗೇಮ್ ಆಡಲು ಮತ್ತು ವಿಡಿಯೋ ನೋಡುವ ವಿನ್ಯಾಸವು ಇದರಲ್ಲಿದೆ.

ಪ್ರೊಸೆಸರ್ ಯಾವುದು

ಪ್ರೊಸೆಸರ್ ಯಾವುದು

ಒಪ್ಪೋ A5 ಸ್ಮಾರ್ಟ್ ಫೋನ್ ನಿನಲ್ಲಿ ವೇಗದ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರಲ್ಲಿ 4 GB RAM ನೊಂದಿಗೆ ಸ್ನಾಪ್ ಡ್ರಾಗನ್ 450 ಪ್ರೋಸೆಸರ್ ಅನ್ನು ನೀಡಲಾಗಿದ್ದು, ಇದರೊಂದಿಗೆ 64GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದಲ್ಲದೇ 256 GB ವೆರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಡಬಲ್‌ ಕ್ಯಾಮೆರಾ ಮತ್ತು ಬ್ಯಾಟರಿ

ಡಬಲ್‌ ಕ್ಯಾಮೆರಾ ಮತ್ತು ಬ್ಯಾಟರಿ

ಒಪ್ಪೋ A5 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, 13 MP + 2 MP ಕ್ಯಾಮೆರಾವನ್ನು ಹಿಂಭಾಗದಲ್ಲಿ ನೀಡಲಾಗಿದ್ದು, ಉತ್ತಮವಾದ ಫೋಟೋಗಳನ್ನು ಸೆರೆಹಿಡಿಯಲು ಇದು ಸಹಾಯವನ್ನು ಮಾಡಲಿದೆ. ಇದರೊಂದಿಗೆ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ. ಇದು ಹೊಸ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ 4230mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

Best Mobiles in India

English summary
OPPO A6 successor of OPPO A5 2020 smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X