Home
ಸುದ್ದಿಜಾಲ

Oppo: ಒಪ್ಪೋ A60 ಸ್ಮಾರ್ಟ್‌ಫೋನ್‌ ಲಾಂಚ್‌! ಸ್ನಾಪ್‌ಡ್ರಾಗನ್ 680, 45W ಫಾಸ್ಟ್ ಚಾರ್ಜಿಂಗ್‌.. ಬೆಲೆ ಎಷ್ಟು?

ಒಪ್ಪೋ ಸ್ಮಾರ್ಟ್‌ಫೋನ್‌ಗಳು (Oppo Smartphones) ವಿಶೇಷ ಫೀಚರ್ಸ್‌ ಆಯ್ಕೆಯ ಮೂಲಕ ಬಳಕೆದಾರರಿಗೆ ವಿವಿಧ ರೀತಿಯ ಅನುಭವವನ್ನು ನೀಡುತ್ತವೆ. ಈ ನಡುವೆ ಒಪ್ಪೋ A60 ಸ್ಮಾರ್ಟ್‌ಫೋನ್‌ ಅನ್ನು (Oppo A60 smartphone) ಲಾಂಚ್‌ ಮಾಡಲಾಗಿದ್ದು, ಈ ಫೋನ್ 45W ಫಾಸ್ಟ್ ಚಾರ್ಜಿಂಗ್‌ ಬೆಂಬಲ ಪಡೆದಿದೆ.

ಹೌದು, ಒಪ್ಪೋ ತನ್ನ ಇತ್ತೀಚಿನ ಬಜೆಟ್ ಕೊಡುಗೆಯಾದ ಒಪ್ಪೋ A60 ಸ್ಮಾರ್ಟ್‌ಫೋನ್‌ ಅನ್ನು ವಿಯೆಟ್ನಾಂನಲ್ಲಿ ಲಾಂಚ್‌ ಮಾಡಿದೆ. ಈ ಹೊಸ A-ಸರಣಿ ಲೈನ್‌ಅಪ್ ಫೋನ್ ಅನ್ನು ಈ ಹಿಂದೆ ವಿವಿಧ ಪ್ರಮಾಣೀಕರಣ ಮತ್ತು ಬೆಂಚ್‌ಮಾರ್ಕ್ ಪಟ್ಟಿಗಳಲ್ಲಿ ಗುರುತಿಸಲಾಗಿತ್ತು. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ಒಪ್ಪೋ A60 ಸ್ಮಾರ್ಟ್‌ಫೋನ್‌ ಲಾಂಚ್‌! ಬೆಲೆ ಎಷ್ಟು?...

ಒಪ್ಪೋ A60 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಒಪ್ಪೋ A60 ಸ್ಮಾರ್ಟ್‌ಫೋನ್ 6.67 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1604 x 720 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಹೆಚ್‌ಡಿ+ ರೆಸಲ್ಯೂಶನ್, 90 Hz ರಿಫ್ರೆಶ್ ರೇಟ್ ಮತ್ತು 950 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದೆ. ಇದರ ಜೊತೆಗೆ ಭದ್ರತೆಗಾಗಿ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಪಡೆದುಕೊಂಡಿದೆ.

ಒಪ್ಪೋ A60 ಸ್ಮಾರ್ಟ್‌ಫೋನ್ ಪ್ರೊಸೆಸೆರ್ ವಿವರ: ಈ ಸ್ಮಾರ್ಟ್‌ಫೋನ್ 6nm-ನಿರ್ಮಿತ ಸ್ನಾಪ್‌ಡ್ರಾಗನ್ 680 4G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8 GB LPDDR4x RAM ಅನ್ನು ಒಳಗೊಂಡಿದೆ. ಇದರ ಜೊತೆಗೆ 128 GB ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್‌ ಆಯ್ಕೆಯೊಂದಿಗೆ ಸಿಗಲಿದೆ. ಇದರ ಜೊತೆಗೆ ಆಂಡ್ರಾಯ್ಡ್‌ 14 ಆಧಾರಿತ ಕಲರ್‌ಓಎಸ್ 14 ನೊಂದಿಗೆ ರನ್‌ ಆಗಲಿದೆ.

ಒಪ್ಪೋ A60 ಸ್ಮಾರ್ಟ್‌ಫೋನ್‌ ಲಾಂಚ್‌! ಬೆಲೆ ಎಷ್ಟು?...

ಒಪ್ಪೋ A60 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್‌ನೊಂದಿಗೆ ಡ್ಯುಯಲ್-ಕ್ಯಾಮೆರಾ ರಚನೆ ಪಡೆದಿದ್ದು, ಈ ಫೋನ್ ಸೆಲ್ಫಿಗಳಿಗಾಗಿ ಹಾಗೂ ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಒಪ್ಪೋ A60 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 45W ಸೂಪರ್‌ವೂಕ್‌ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 7.68mm ದಪ್ಪ ಮತ್ತು 186 ಗ್ರಾಂ ತೂಕವನ್ನು ಹೊಂದಿರುವ ಈ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಪಡೆದಿದೆ. ಹಾಗೆಯೇ ಡ್ಯುಯಲ್ ಸ್ಪೀಕರ್ ಸೆಟಪ್ ಮೂಲಕ ಸ್ಟಿರಿಯೊ ಆಡಿಯೊ ಅನುಭವ ನೀಡುತ್ತದೆ ಮತ್ತು ವೈರ್ಡ್ ಇಯರ್‌ಫೋನ್‌ಗಳಿಗಾಗಿ 3.5 ಎಂಎಂ ಆಡಿಯೊ ಜ್ಯಾಕ್ ಆಯ್ಕೆ ಪಡೆದಿದೆ.

ಒಪ್ಪೋ A60 ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ: ಈ ಸ್ಮಾರ್ಟ್‌ಫೋನ್‌ನ 8 GB RAM + 128 GB ಸ್ಟೋರೇಜ್‌ ಮತ್ತು 8 GB RAM + 256 GB ಸ್ಟೋರೇಜ್‌ನ ಬೆಲೆ ಕ್ರಮವಾಗಿ 5,490,000 VND (ಅಂದಾಜು 18,000 ರೂ.ಗಳು) ಮತ್ತು 6,490,000 VND (ಅಂದಾಜು 21,335 ರೂ.ಗಳು). ಈ ಫೋನ್ ಅನ್ನು ಎರಡು ಬಣ್ಣಗಳಲ್ಲಿ ಖರೀದಿಸಬಹುದು. ಒಂದ ನೀಲಿ ನೇರಳೆ ಮತ್ತೊಂದು ನೀಲಿ.

ಒಪ್ಪೋ A60 ಸ್ಮಾರ್ಟ್‌ಫೋನ್‌ ಲಾಂಚ್‌! ಬೆಲೆ ಎಷ್ಟು?...

ಒಪ್ಪೋ A3: ಈ ನಡುವೆ ಒಪ್ಪೋ ಮಗದೊಂದು ಫೋನ್‌ ಲಾಂಚ್‌ಗೆ ರೆಡಿಯಾಗುತ್ತಿದೆ. ಅದನ್ನು ಒಪ್ಪೋ A3 ಎಂದು ಗುರುತಿಸಲಾಗಿದೆ. ಈ ಫೋನ್ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, 5500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಈ ಹೊಸ ಫೋನ್ ಅನ್ನು ಚೀನಾದಲ್ಲಿ MIIT / TENAA ಪ್ರಮಾಣೀಕರಿಸಿದೆ. PJT110 ಮಾದರಿ ಸಂಖ್ಯೆಯೊಂದಿಗೆ ಫೋನ್‌ನ ಫೀಚರ್ಸ್‌ ಅನ್ನು ಬಹಿರಂಗಪಡಿಸುತ್ತದೆ. ಇದರ ಜೊತೆಗೆ ಈ ಫೋನ್ ಆಕ್ಟಾ-ಕೋರ್ ಪ್ರೊಸೆಸರ್, 12GB RAM, 512GB ವರೆಗೆ ಸ್ಟೋರೇಜ್‌ ಆಯ್ಕೆ, 50MP + 2MP ಡ್ಯುಯಲ್ ರಿಯರ್ ಮತ್ತು 16MP ಸೆಲ್ಫಿ ಕ್ಯಾಮೆರಾ ಹೊಂದಿರಬಹುದು ಎಂದು ಹೇಳಲಾಗಿದೆ.

Best Mobiles in India

English summary
Oppo has launched its latest budget offering, the Oppo A60 smartphone, in Vietnam. This new A-series lineup of phones was earlier spotted on various certification and benchmark lists.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+