OPPO: ಒಪ್ಪೋದ ಫೋನ್‌ಗೆ ಇಷ್ಟೊಂದು ರಿಯಾಯಿತಿಯೇ? 1 TB ವರೆಗೂ ಸ್ಟೋರೇಜ್ ಸಾಮರ್ಥ್ಯ
ಒಪ್ಪೋ (OPPO) ಫೋನ್‌ಗಳು ಎಂದರೆ ಭಾರತೀಯರಿಗೆ ವಿಶೇಷವಾದ ಪ್ರೀತಿ. ಈ ಫೋನ್‌ಗಳು ಉತ್ತಮ ಕ್ಯಾಮೆರಾ ಹಾಗೂ ಪ್ರೊಸೆಸರ್ ಸಾಮರ್ಥ್ಯ ಪಡೆದಿದ್ದು, ಈ ಮೂಲಕ ಬಳಕೆದಾರರಿಗೆ ಭಿನ್ನ ಅನುಭವ ನೀಡುತ್ತದೆ. ಈ ಕಾರಣಕ್ಕೆ ಈ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ 1 TB ವರೆಗೂ ಸ್ಟೋರೇಜ್ ಸಾಮರ್ಥ್ಯದ ಬೆಂಬಲ ಇರುವ ಫೋನ್‌ಗೆ ಆಫರ್ ಘೋಷಣೆ ಮಾಡಲಾಗಿದೆ.
ಹೌದು, ಪ್ರಮುಖ ಇ-ಕಾಮರ್ಸ್ ಸೈಟ್ ನಲ್ಲಿ ಒಪ್ಪೋ A76 ಸ್ಮಾರ್ಟ್‌ಫೋನ್‌ಗೆ (Oppo A76 smartphone) ಭರ್ಜರಿ ಆಫರ್ ನೀಡಲಾಗಿದೆ. ಈ ಫೋನ್ ಹೆಚ್‌ಡಿ+ ಡಿಸ್‌ಪ್ಲೇ ಆಯ್ಕೆ ಹಾಗೂ ಡ್ಯುಯಲ್ ರಿಯರ್ ಕ್ಯಾಮೆರಾ ಮೂಲಕ ಉತ್ತಮ ಬಜೆಟ್ ಬೆಲೆಯ ಫೋನ್ ಎನಿಸಿಕೊಂಡಿದೆ. ಹಾಗಿದ್ರೆ, ತಡಯಾಕೆ ಬನ್ನಿ ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಒಪ್ಪೋ A76 ಸ್ಮಾರ್ಟ್‌ಫೋನ್ ಆಪರ್ ವಿವರ: ಈ ಫೋನ್ 21,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 15,490 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್ ಈ ಫೋನ್ ಮೇಲೆ 29% ರಿಯಾಯಿತಿ ಘೋಷಣೆ ಮಾಡಿದೆ. ಇದರೊಂದಿಗೆ ನೀವು ಬ್ಯಾಂಕ್ ಆಫರ್ ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಕೊಂಡುಕೊಳ್ಳಬಹುದಾಗಿದೆ.
ಬ್ಯಾಂಕ್ ವಿಚಾರಕ್ಕೆ ಬಂದರೆ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಐಡಿಎಫ್‌ಸಿ ಮೊದಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ ಬ್ಯಾಂಕ್ ಆಫರ್ 10% ರಿಯಾಯಿತಿ, 12,500 ರೂ. ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳ ಮೇಲೆ ಒನ್‌ಕಾರ್ಡ್ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಇಎಮ್‌ಐ ವ್ಯವಹಾರದ ಮೇಲೆ 750 ರೂ.ಗಳ ಆಫರ್ ಸಿಗಲಿದೆ. ಹಾಗಿದ್ರೆ ಈ ಫೋನ್‌ನ ಫೀಚರ್ಸ್ ಕಡೆಯೂ ಕಣ್ಣಾಯಿಸೋಣ ಬನ್ನಿ.
ಒಪ್ಪೋ A76 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ ಈ ಬೆಲೆಗೆ ತಕ್ಕ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಅಂದರೆ 6.56 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಇದು 90Hz ರಿಫ್ರೆಶ್ ರೇಟ್ ಹಾಗೂ 480 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 20:9 ಅನುಪಾತ ಪಡೆದಿದೆ.

ಒಪ್ಪೋ A76 ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಕ್ವಾಲ್ಕಾಮ್ SM6225 ಸ್ನಾಪ್ಡ್ರಾಗನ್ 680 4G (6 nm) ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಇದು ಅಡ್ರಿನೊ 610 ಗ್ರಾಫಿಕ್ಸ್ ಕಾರ್ಡ್ ಬಲದೊಂದಿಗೆ ಕೆಲಸ ಮಾಡಿದೆ. ಜೊತೆಗೆ ಆಂಡ್ರಾಯ್ಡ್ 11, ಕಲರ್ ಓಎಸ್ 11.1 ಅನ್ನು ಈ ಫೋನ್ ರನ್ ಮಾಡಲಿದೆ. ಇನ್ನು ಆಫರ್ ಬೆಲೆಗೆ ಲಭ್ಯ ಇರುವ ಈ ಫೋನ್ 128GB ಇಂಟರ್ ಸ್ಟೋರೇಜ್ ಹಾಗೂ 6GB RAM ಆಯ್ಕೆ ಪಡೆದಿದೆ. ಅದರಲ್ಲೂ 1 TB ವರೆಗೂ ಸ್ಟೋರೇಜ್ ಸಾಮರ್ಥ್ಯ ವಿಸ್ತರಣೆ ಮಾಡಿಕೊಳ್ಳಲು ಇದು ಅನುಮತಿಸುತ್ತದೆ.

ಒಪ್ಪೋ A76 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ನ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಇದು 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿದೆ, ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯಲು ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್ ಈ ಫೋನ್‌ನಲ್ಲಿದೆ. ಉಳಿದಂತೆ ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 33W ವೈರ್ಡ್ ಚಾರ್ಜಿಂಗ್ ಬೆಂಬಲ ಹೊಂದಿದೆ.


Click it and Unblock the Notifications








