ಒಪ್ಪೋದ ಈ ಹಳೆಯ ಫೋನಿಗೆ ಭಾರೀ ಡಿಸ್ಕೌಂಟ್; ಖರೀದಿ ಮಾಡಬಹುದೇ?
ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಒಪ್ಪೋ ಸಂಸ್ಥೆಯು ಭಿನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕ ಬಳಗವನ್ನು ಹೊಂದಿದೆ. ಸಂಸ್ಥೆಯ A ಸರಣಿ ಫೋನ್‌ಗಳು ಬಜೆಟ್ ಪ್ರೈಸ್‌ಟ್ಯಾಗ್ ಪಡೆದಿದ್ದು, ಆ ಪೈಕಿ ಕೆಲವು ಹೆಚ್ಚು ಆಕರ್ಷಕ ಎನಿಸಿಕೊಂಡಿವೆ. ಆ ಪೈಕಿ ಒಪ್ಪೋ A ಸರಣಿಯ ಒಪ್ಪೋ A77 ಎರಡು ವರ್ಷಗಳ ಹಳೆಯ ಫೋನ್ ಎನಿಸಿಕೊಂಡಿದ್ದು, ಸದ್ಯ ದೊಡ್ಡ ಆಫರ್‌ನಲ್ಲಿ ಖರೀದಿಗೆ ಲಭ್ಯ ಇದೆ.
ಹೌದು, ಒಪ್ಪೋ ಸಂಸ್ಥೆಯ ಒಪ್ಪೋ A77 ಮೊಬೈಲ್ ಅಧಿಕೃತ ಒಪ್ಪೋ ವೆಬ್‌ಸೈಟ್‌ನಲ್ಲಿ ಭರ್ಜರಿ ರಿಯಾಯಿತಿ ಪಡೆದುಕೊಂಡಿದೆ. ಗ್ರಾಹಕರು 4 GB RAM + 64 GB ಸ್ಟೋರೇಜ್ ವೇರಿಯಂಟ್‌ನ ಈ ಫೋನ್ ಅನ್ನು ಗ್ರಾಹಕರು ಈಗ 10,999ರೂ. ಗಳ ಬೆಲೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ. ಇದರೊಂದಿಗೆ ಲಭ್ಯ ಇರುವ ಎಕ್ಸ್‌ಚೆಂಜ್ ಆಫರ್, ಬ್ಯಾಂಕ್ ಡಿಸ್ಕೌಂಟ್ ಹಾಗೂ ಇತರೆ ಕೊಡುಗೆ ಪಡೆದುಕೊಂಡರೆ ಮತ್ತಷ್ಟು ಡಿಸ್ಕೌಂಟ್ ಸಿಗಲಿದೆ.

ಒಪ್ಪೋ A77 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ. ಇನ್ನು 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸಹ ಪಡೆದಿದೆ. ಹಾಗಾದರೇ ಒಪ್ಪೋ A77 ಮೊಬೈಲ್ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒಪ್ಪೋ A77 ಮೊಬೈಲ್ ಫೀಚರ್ಸ್
ಒಪ್ಪೋ A77 ಫೋನ್ 6.56 ಇಂಚಿನ HD+ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಸಪೋರ್ಟ್ ಇದೆ. ಹಾಗೆಯೇ ಈ ಡಿಸ್‌ಪ್ಲೇ 1,612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದ್ದು, 600ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ. ಇದರ ಜೊತೆಗೆ ಡಿಸ್‌ಪ್ಲೇ ವೀಡಿಯೋ ವೀಕ್ಷಣೆಗೆ ಉತ್ತಮವಾದ ಮಾದರಿಯನ್ನು ಕೂಡ ಹೊಂದಿದೆ.
ಒಪ್ಪೋ A77 ಫೋನ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಆಧಾರಿತ ಕಲರ್ ಓಎಸ್ 12.1 ನಲ್ಲಿ ರನ್ ಆಗಲಿದೆ. ಹಾಗೆಯೇ 4 GB RAM + 64 GB ಸ್ಟೋರೇಜ್ ಆಂತರೀಕ ವೇರಿಯಂಟ್ ಆಯ್ಕೆ ಅನ್ನು ಪಡೆದುಕೊಂಡಿದೆ.
ಒಪ್ಪೋ A77 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರ ಜೊತೆಗೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒದಗಿಸಲಾಗಿದೆ. ಅಲ್ಲದೇ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಒಪ್ಪೋ ಬೊಕೆ ಫ್ಲೇರ್ ಪೋಟ್ರೇಟ್ ಮೋಡ್, ಫೋಕಸ್ ಮತ್ತು ಬ್ಲರ್ ಅನ್ನು ಒದಗಿಸುತ್ತದೆ.
ಒಪ್ಪೋ A77 ಫೋನ್ 4880mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 33W ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದೆ. ಇದರಿಂದ ನಿಮ್ಮ ಫೋನ್ ಅನ್ನು ಕೇವಲ 71 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದಾಗಿದೆ.
ಇನ್ನು ಒಪ್ಪೋ A77 ಫೋನ್ ಕನೆಕ್ಟಿವಿಟಿ ಸೌಲಭ್ಯಗಳ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ ಅನ್ನು ಸಪೋರ್ಟ್ ಲಭ್ಯ ಇದೆ. ಇದಲ್ಲದೆ IP54 ರೇಟಿಂಗ್, ಸ್ಟೀರಿಯೋ ಸ್ಪೀಕರ್ ರಚನೆ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯವನ್ನು ಸಹ ಪಡೆದಿದೆ.


Click it and Unblock the Notifications








