Home
ಸುದ್ದಿಜಾಲ

Oppo: ಒಪ್ಪೋ ಸ್ಮಾರ್ಟ್‌ಫೋನ್‌ಗೆ ಬರೋಬ್ಬರಿ 30% ರಿಯಾಯಿತಿ! 8 GB RAM.. 50 MP ಕ್ಯಾಮೆರಾ

ಒಪ್ಪೋ ಫೋನ್‌ಗಳೆಂದರೆ (Oppo smartphone) ಅದರಲ್ಲೂ ಭಾರತದಲ್ಲಿ ಒಪ್ಪೋ ಸ್ಮಾರ್ಟ್‌ಫೋನ್‌ಗಳು ಎಂದರೆ ಬಹುಪಾಲು ಜನರಿಗೆ ವಿಶೇಷವಾದ ಆಕರ್ಷಣೆ. ಈ ಸ್ಮಾರ್ಟ್‌ಫೋನ್‌ಗಳು ವಿವಿಧ ಆಕರ್ಷಕ ಫೋಚರ್ಸ್‌ನೊಂದಿಗೆ ಆತ್ಯಾಕರ್ಷಕ ಕ್ಯಾಮೆರಾ ಫೀಚರ್ಸ್‌ ಹೊಂದಿರಲಿವೆ. ಇದರೊಂದಿಗೆ ಈಗ ಒಪ್ಪೋದ ಈ ಫೋನ್‌ ಆಫರ್ ಬೆಲೆಗೆ ಲಭ್ಯ ಆಗುತ್ತಿದೆ.

ಹೌದು, ಒಪ್ಪೋ A77s ಸ್ಮಾರ್ಟ್‌ಫೋನ್‌ಗೆ (Oppo A77s smartphone) ಭರ್ಜರಿ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 8 GB RAM ಆಯ್ಕೆ ಪಡೆದುಕೊಂಡಿದ್ದು, ಮೀಡಿಯಾಟೆಕ್‌ ಹಿಲಿಯೋ G70 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ಗೆ ಇರುವ ಆಫರ್ ಬೆಲೆ ಎಷ್ಟು? ಬ್ಯಾಂಕ್‌ ಅಫರ್ ಏನು? ಇತರೆ ಫೀಚರ್ಸ್‌ ಏನು ಅನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಒಪ್ಪೋ ಸ್ಮಾರ್ಟ್‌ಫೋನ್‌ಗೆ ಬರೋಬ್ಬರಿ 30% ರಿಯಾಯಿತಿ! 8 GB RAM..

ಒಪ್ಪೋ A77s ಸ್ಮಾರ್ಟ್‌ಫೋನ್‌ ಆಫರ್ ವಿವರ: ಈ ಫೋನ್‌ ಸಾಮಾನ್ಯ ದರ 22,999ರೂ.ಗಳಾಗಿದ್ದು, ಆದರ ನೀವು ಇದನ್ನು 15,890ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ(Flipkart) 30% ರಷ್ಟು ರಿಯಾಯಿತಿ ನೀಡಿಲಾಗಿದೆ. ಇದರೊಂದಿಗೆ ನೀವು ಬ್ಯಾಂಕ್‌ ಅಫರ್ ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಖರೀದಿ ಮಾಡಬಹುದಾಗಿದೆ.

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಸಿಟಿ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರ ಮೇಲೆ 10% ರಿಯಾಯಿತಿ, ಐಡಿಎಫ್‌ಸಿ ಮೊದಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ಡಿಸ್ಕೌಂಟ್‌ ಸಿಗಲಿದೆ.ಇದರೊಂದಿಗೆ ಇನ್ನೂ ಹಲವಾರು ರೀತಿಯ ಕ್ಯಾಶ್‌ ಬ್ಯಾಕ್‌ ಹಾಗೂ ಇನ್ನಿತರೆ ಆಫರ್ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಒಪ್ಪೋ ಸ್ಮಾರ್ಟ್‌ಫೋನ್‌ಗೆ ಬರೋಬ್ಬರಿ 30% ರಿಯಾಯಿತಿ! 8 GB RAM..

ಒಪ್ಪೋ A77s ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್‌ 6.56 ಇಂಚಿನ ಎಲ್‌ಸಿಡಿ ವಾಟರ್‌ಡ್ರಾಪ್ ನಾಚ್ ಶೈಲಿಯ HD+ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು 267ppi ಪಿಕ್ಸೆಲ್ ಸಾಂದ್ರತೆ, 720x1600px ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಹಾಗೆಯೇ 60Hz ರಿಫ್ರೆಶ್ ರೇಟ್‌, 480 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 90% ಕ್ಕಿಂತ ಹೆಚ್ಚಿನ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಅತ್ಯುತ್ತಮ ವೀಕ್ಷಣೆ ಅನುಭವನ್ನು ನೀಡಲಿದೆ.

ಒಪ್ಪೋ A77s ಸ್ಮಾರ್ಟ್‌ಫೋನ್‌ ಪ್ರೊಸೆಸರ್ ಮಾಹಿತಿ: ಈ ಫೋನ್ ಆಕ್ಟಾ-ಕೋರ್ ಕಾರ್ಟೆಕ್ಸ್ A75 ಡ್ಯುಯಲ್-ಕೋರ್, 2GHz ಮತ್ತು ಕಾರ್ಟೆಕ್ಸ್ A55 ಹೆಕ್ಸಾ-ಕೋರ್, 1.7GHz CPU ಗಳನ್ನು ಹೊಂದಿರುವ ಮೀಡಿಯಾ ಟೆಕ್ ಹಿಲಿಯೊ G70 ಚಿಪ್‌ಸೆಟ್ ನೊಂದಿಗೆ ಕಾರ್ಯನಿರ್ವಹಿಸಲಿದ್ದು, ಮಾಲಿ-G52 MC2 ಜಿಪಿಯು ಈ ಫೋನ್‌ಗೆ ಇನ್ನಷ್ಟು ಬಲ ನೀಡಲಿದೆ. ಇದರೊಂದಿಗೆ 8GB RAM ಬಳಕೆದಾರರಿಗೆ ಅದ್ಭುತ ದೃಶ್ಯಗಳನ್ನು ಮತ್ತು ಬಹುಕಾರ್ಯವನ್ನು ಮಾಡಲು ಅನುಮತಿಸುತ್ತದೆ.

ಒಪ್ಪೋ ಸ್ಮಾರ್ಟ್‌ಫೋನ್‌ಗೆ ಬರೋಬ್ಬರಿ 30% ರಿಯಾಯಿತಿ! 8 GB RAM..

ಒಪ್ಪೋ A77s ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, f/1.8 ಅಪರ್ಚರ್ ಜೊತೆಗೆ 2 ಮೆಗಾಪಿಕ್ಸೆಲ್‌ ಆಟೋಫೋಕಸ್ ಎಐ ಲೆನ್ಸ್‌ನೊಂದಿಗೆ ಬರುತ್ತದೆ. ಇದು ಎಲ್‌ಇಡಿ ಫ್ಲ್ಯಾಶ್‌ ಲೈಟ್‌ ಆಯ್ಕೆ ಪಡೆದಿದೆ. ಇದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಒಪ್ಪೋ ಸ್ಮಾರ್ಟ್‌ಫೋನ್‌ಗೆ ಬರೋಬ್ಬರಿ 30% ರಿಯಾಯಿತಿ! 8 GB RAM..

ಈ ಸೆನ್ಸರ್‌ಗಳು ಸ್ಲೋ ಮೋಷನ್, ಟೈಮ್‌ಲ್ಯಾಪ್ಸ್, ಪ್ರೊಫೆಷನಲ್ ಮೋಡ್, ಪನೋರಮಿಕ್ ಮತ್ತು ನೈಟ್ ಸೀನ್ ಸೇರಿದಂತೆ ಹಲವು ಫೀಚರ್ಸ್‌ ಆಯ್ಕೆಯನ್ನು ಪಡೆದುಕೊಂಡಿವೆ. ಉಳಿದಂತೆ ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 33W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಪರಿಣಾಮ ಅತ್ಯುತ್ತಮ ಬ್ಯಾಟರಿ ಬ್ಯಾಕಪ್‌ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Oppo A77s smartphone has been given a great offer. This smartphone is powered by MediaTek Helio G70 chipset with 8 GB RAM option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+