Home
ಸುದ್ದಿಜಾಲ

ಒಪ್ಪೋ A78 5G ಫೋನ್‌ಗೆ ಭರ್ಜರಿ ಡಿಸ್ಕೌಂಟ್‌:ಈ ಆಫರ್‌ ಮೂಲಕ 950ರೂ.ಗೆ ಖರೀದಿಸಿ!

ಒಪ್ಪೋ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಬೇಡಿಕೆ ಇದ್ದು, ಈ ಬೇಡಿಕೆ ಹೆಚ್ಚಾಗುತ್ತಿರುವ ಜೊತೆಗೆ ಈ ಫೋನ್‌ಗಳಿಗೆ ಇ-ಕಾಮರ್ಸ್‌ ಸೈಟ್‌ಗಳು ಭರ್ಜರಿ ಡಿಸ್ಕೌಂಟ್‌ ಸಹ ಘೋಷಣೆ ಮಾಡುತ್ತಾ ಬರುತ್ತಿವೆ. ಈ ಹಿಂದೆ ಒಪ್ಪೋ A17 ಫೋನ್‌ ಜಿಯೋ ಮಾರ್ಟ್‌ನಲ್ಲಿ 50%ಡಿಸ್ಕೌಂಟ್‌ ಪಡೆದಿತ್ತು. ಇದೀಗ ಮತ್ತೊಂದು ಫೋನ್ ಭಾರೀ ಡಿಸ್ಕೌಂಟ್‌ ಪಡೆದಿದೆ.

ಹೌದು, ಒಪ್ಪೋ A78 5G (Oppo A78 5G) ಸ್ಮಾರ್ಟ್‌ಫೋನ್‌ ಅನ್ನು ನೀವು ಹಲವು ಕೊಡುಗೆಗಳೊಂದಿಗೆ ಕೇವಲ 950ರೂ. ಗಳಿಗೆ ಖರೀದಿ ಮಾಡಬಹುದು. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದ್ದು, 90Hz ರಿಫ್ರೆಶ್ ರೇಟ್‌ ಹೊಂದಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಇಷ್ಟೊಂದು ಅಗ್ಗದ ಬೆಲೆಗೆ ಖರೀದಿ ಮಾಡುವುದು ಹೇಗೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒಪ್ಪೋ A78 5G ಫೋನ್‌ಗೆ ಭರ್ಜರಿ ಡಿಸ್ಕೌಂಟ್‌:ಈ ಆಫರ್‌ ಮೂಲಕ 950ರೂ.ಗೆ ಖರೀದಿಸಿ!

ಒಪ್ಪೋ A78 5G ಡಿಸ್‌ಪ್ಲೇ ವಿವರ: ಒಪ್ಪೋ A78 5G ಫೋನ್‌ 6.56 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 720 x 1,612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ 90Hz ರಿಫ್ರೆಶ್‌ ರೇಟ್‌ ಹೊಂದಿರುವ ಈ ಡಿಸ್‌ಪ್ಲೇ 600 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ನೀಡಲಿದೆ.

ಒಪ್ಪೋ A78 5G ಪ್ರೊಸೆಸರ್‌ ವಿವರ: ಈ ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 700 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 12 ಆಧಾರಿತ ಕಲರ್‌ಒಎಸ್‌ 12.1 ನಲ್ಲಿ ರನ್‌ ಆಗಲಿದೆ. ಇನ್ನುಳಿದಂತೆ 8GB RAM ಹಾಗೂ 256GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಅದರಲ್ಲೂ ಪ್ರಮುಖವಾಗಿ ಆನ್‌ಬೋರ್ಡ್‌ ಸ್ಟೋರೇಜ್‌ ಮೂಲಕ 5GB ವರೆಗೆ RAM ವಿಸ್ತಣೆಮಾಡಬಹುದಾಗಿದೆ.

ಒಪ್ಪೋ A78 5G ಕ್ಯಾಮೆರಾ ರಚನೆ: ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸರ್‌ ಹೊಂದಿದ್ದರೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋಟ್ರೇಟ್ ಸೆನ್ಸರ್ ಹೊಂದಿದೆ. ಹಾಗೆಯೇ ಸೆಲ್ಫಿ ಕಾರಣಕ್ಕೆ 8 ಮೆಗಾಪಿಕ್ಸೆಲ್ ಸೆನ್ಸರ್‌ ಹೊಂದಿದೆ. ಈ ಕ್ಯಾಮೆರಾಗಳು 30fps ನಲ್ಲಿ ಫುಲ್‌-ಹೆಚ್‌ಡಿ ವಿಡಿಯೋ ರೆಕಾರ್ಡ್ ಸಾಮರ್ಥ್ಯ ಹೊಂದಿವೆ.

ಒಪ್ಪೋ A78 5G ಫೋನ್‌ಗೆ ಭರ್ಜರಿ ಡಿಸ್ಕೌಂಟ್‌:ಈ ಆಫರ್‌ ಮೂಲಕ 950ರೂ.ಗೆ ಖರೀದಿಸಿ!

ಒಪ್ಪೋ A78 5G ಬ್ಯಾಟರಿ ಸಾಮರ್ಥ್ಯ: ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 33 W ಸೂಪರ್‌ ವೂಕ್‌ ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಈ ಮೂಲಕ 8.5 ಗಂಟೆಗಳ ಗೇಮಿಂಗ್ ಸಮಯವನ್ನು ಇದು ನೀಡಲಿದೆ ಎಂದು ಕಂಪೆನಿ ತಿಳಿಸಿದೆ.

ಒಪ್ಪೋ A78 5G ಆಫರ್‌ ಬೆಲೆ: ಈ ಫೋನ್‌ ಅನ್ನು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಲಾಂಚ್ ಮಾಡಲಾಗಿದ್ದು, 21,999ರೂ. ಗಳ ಮೂಲ ಬೆಲೆಯಲ್ಲಿ ಕಾಣಿಸಿಕೊಂಡಿತ್ತು. ಆದರೆ ಇದೀಗ ಅಮೆಜಾನ್‌ನಲ್ಲಿ 14 % ರಿಯಾಯಿತಿ ಪಡೆದುಕೊಳ್ಳುವ ಮೂಲಕ 18,999ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅದಾಗ್ಯೂ ನೀವು ಇನ್ನೂ ಅಗ್ಗದ ದರದಲ್ಲಿ ಈ ಫೋನ್‌ ಖರೀದಿ ಮಾಡಬಹುದು.

ಒಪ್ಪೋ A78 5G ಫೋನ್‌ಗೆ ಭರ್ಜರಿ ಡಿಸ್ಕೌಂಟ್‌:ಈ ಆಫರ್‌ ಮೂಲಕ 950ರೂ.ಗೆ ಖರೀದಿಸಿ!

ವಿನಿಮಯ ಆಫರ್‌: ಈ ಫೋನ್‌ ಖರೀದಿ ಮೇಲೆ ವಿನಿಮಯ ಆಫರ್‌ ಇದ್ದು, ಈ ಮೂಲಕ ನೀವು ನಿಮ್ಮ ಹಳೆಯ ಫೋನ್‌ ಅನ್ನು ಮಾರಾಟ ಮಾಡುವ ಮೂಲಕ ಬರೋಬ್ಬರಿ 18,049ರೂ. ರವರೆಗಿನ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದ್ದು, 950 ರೂ. ಗಳಿಗೆ ಹೊಸ ಫೋನ್‌ ಖರೀದಿ ಮಾಡಬಹುದಾಗಿದೆ. ಆದರೆ, ನಿಮ್ಮ ಹಳೆಯ ಫೋನ್ ಅತ್ಯುತ್ತಮವಾಗಿದ್ದರೆ ಮಾತ್ರ ಇಷ್ಟು ಪ್ರಮಾಣದ ರಿಯಾಯಿತಿ ಲಭ್ಯ. ಜೊತೆಗೆ ಬ್ಯಾಂಕ್‌ ಆಫರ್‌ ಸಹ ಲಭ್ಯ.

Best Mobiles in India

English summary
huge discount offer for Oppo A78 5G smartphone in Amazon sale and you can buy this phone for just Rs 950.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+