Oppo: ಒಪ್ಪೋ A78 5G ಸ್ಮಾರ್ಟ್‌ಫೋನ್‌ಗೆ ಬೊಂಬಾಟ್ ಡಿಸ್ಕೌಂಟ್! 8GB RAM...50MP ಕ್ಯಾಮೆರಾ
ಒಪ್ಪೋ (Oppo) ಫೋನ್‌ಗಳಿಗೆ ಭಾರತದಲ್ಲಿ ಅಗಾದವಾದ ಬೇಡಿಕೆ ಇದೆ. ಈ ಫೋನ್‌ಗಳು ಬಜೆಟ್ ಬೆಲೆಯಲ್ಲಿ ಅತ್ಯುತ್ತಮವಾದ ಪ್ರೀಮಿಯಂ ಫೋನ್‌ಗಳಲ್ಲಿ ಇರುವ ಫೀಚರ್ಸ್ ಆಯ್ಕೆಯನ್ನು ಹೊಂದಿರುತ್ತವೆ. ಇದರಿಂದಾಗಿ ಇವುಗಳ ಖರೀದಿಗೆ ಜನರು ಹೆಚ್ಚು ಇಷ್ಟಪಡುತ್ತಾರೆ. ಈ ನಡುವೆ ಒಪ್ಪೋದ ಈ ಜನಪ್ರಿಯ ಫೋನ್‌ಗೆ ಮಗದೊಮ್ಮೆ ಆಫರ್ ನೀಡಲಾಗಿದೆ.
ಹೌದು, ಒಪ್ಪೋ A78 5G ಸ್ಮಾರ್ಟ್‌ಫೋನ್‌ಗೆ (Oppo A78 5G) ಫ್ಲಿಪ್‌ಕಾರ್ಟ್ ಬೃಹತ್ ಆಫರ್ ಘೋಷಣೆ ಮಾಡಿದೆ. ಈ ಫೋನ್ 50MP ಮುಖ್ಯ ಕ್ಯಾಮೆರಾ ಹಾಗೂ ಮೀಡಿಯಾ ಟೆಕ್ ಡೈಮೆನ್ಸಿಟಿ 700 MT6833 ಪ್ರೊಸೆಸರ್ ಬಲದೊಂದಿಗೆ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಹಾಗಿದ್ರೆ, ಈ ಫೋನ್‌ಗೆ ಇರುವ ಆಫರ್ ಏನು?, ಈ ಬೆಲೆಗೆ ಈ ಫೋನ್ ಖರೀದಿ ಮಾಡಲು ಯೋಗ್ಯವೇ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಒಪ್ಪೋ A78 5G ಸ್ಮಾರ್ಟ್‌ಫೋನ್ ಆಫರ್ ವಿವರ: ಈ ಸ್ಮಾರ್ಟ್‌ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಆಗಾಗ್ಗೆ ಆಫರ್ ನೀಡಲಾಗುತ್ತಲೇ ಇರುತ್ತದೆ. ಅದರಂತೆ ಈಗ ಮಗದೊಮ್ಮೆ ಆಫರ್ ನೀಡಲಾಗಿದ್ದು, ಅಂದರೆ 22,999ರೂ.ಗಳ ಬೆಲೆ ಇರುವ ಈ ಫೋನ್ ಅನ್ನು ನೀವು ಈಗ 16,499ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅಂದರೆ ಫ್ಲಿಪ್‌ಕಾರ್ಟ್ ಇದಕ್ಕೆ 28% ರಿಯಾಯಿತಿ ಘೋಷಣೆ ಮಾಡಿದೆ.
ಇಷ್ಟೇ ಅಲ್ಲದೆ ಕೆಲವು ಬ್ಯಾಂಕ್ ಕಾರ್ಟ್ ಹಾಗೂ ವಿನಿಮಯ ಅಫರ್ ಸಹ ಇದ್ದು, ಈ ಮೂಲಕ ಅಗ್ಗದ ದರದಲ್ಲಿ ಈ ಫೋನ್ ಅನ್ನು ಖರೀದಿ ಮಾಡಬಹುದು. ಅಂದರೆ ಕೊಟಾಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 10% ರಿಯಾಯಿತಿ, ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 10% ರಿಯಾಯಿತಿ, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಲ್ಲಿ 10% ರಿಯಾಯಿತಿ ಸಿಗಲಿದೆ ಇದರೊಂದಿಗೆ 2401 ರೂ. ಮೌಲ್ಯದ ಕೂಪನ್ ಅನ್ನೂ ಪಡೆದುಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೆ ಇನ್ನೂ ಹಲವಾರು ವಿವಿಧ ರೀತಿಯ ಬ್ಯಾಂಕ್ ಆಫರ್ ಅನ್ನು ಈ ವೇಳೆ ಗ್ರಾಹಕರು ಗಮನಿಸಬಹುದು.

ಒಪ್ಪೋ A78 5G ಡಿಸ್‌ಪ್ಲೇ ವಿವರ: ಈ ಫೋನ್ ಇಷ್ಟು ಕಡಿಮೆ ಬೆಲೆಗೆ ಸಿಗುತ್ತದೆ. ಹಾಗೂ ಇಷ್ಟೊಂದು ಆಫರ್ ಹೊಂದಿದೆ ಅಂದಾಕ್ಷಣ ಹಿಂದು ಮುಂದು ನೋಡದೆ ಖರೀದಿ ಮಾಡಿದರೆ ನೀವು ನಷ್ಟಕ್ಕೆ ಒಳಗಾಗಬಹುದು. ಈ ಕಾರಣಕ್ಕೆ ನೀವು ನೀಡುತ್ತಿರುವ ಬೆಲೆಗೆ ಈ ಫೋನ್ ಯೋಗ್ಯವೇ ಎಂದು ಅರಿಯಲು ಇದರ ಫೀಚರ್ಸ್ ತಿಳಿಯುವುದು ಅನಿವಾರ್ಯ. ಅದರಂತೆ ಈ ಫೋನ್ 6.56 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ (IPS LCD display) ಹೊಂದಿದ್ದು, ಇದು 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಸೆಲ್ಫಿ ಕ್ಯಾಮೆರಾಕ್ಕಾಗಿ ವಾಟರ್‌ಡ್ರಾಪ್ ನಾಚ್ ಶೈಲಿ ನೀಡಲಾಗಿದೆ.
ಒಪ್ಪೋ A78 5G ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ನ 8GB RAM ಆಯ್ಕೆಯೊಂದಿಗೆ ಮೀಡಿಯಾಟೆಕ್ ಡೈಮೆನ್ಸಿಟಿ 700 MT6833 ಪ್ರೊಸೆಸರ್ (MediaTek Dimensity 700 MT6833 processor) ಬಲ ಪಡೆದಿಕೊಂಡಿದ್ದು, ಒಟ್ಟಾರೆ ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಗೆ ಮಾಡಲಿದೆ. ಅಂದರೆ ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕಾರ್ಟೆಕ್ಸ್ A55 ಮತ್ತು 76 ಸಿಪಿಯು ಜೊತೆಗೆ 2.3GHz ಗರಿಷ್ಠ ವೇಗ ಮತ್ತು ಮಾಲಿ-G57 MC2 ಜಿಪಿಯು ಶಕ್ತಿಯನ್ನು ಈ ಫೋನ್ ಹೊಂದಿದೆ.

ಒಪ್ಪೋ A78 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇವೆ. ಇವು ಟಚ್-ಟು-ಫೋಕಸ್, ಡಿಜಿಟಲ್ ಜೂಮ್, ಆಟೋಫೋಕಸ್, ಹೆಚ್‌ಡಿಆರ್ ಮೋಡ್ ಫೀಚರ್ಸ್ ಪಡೆದುಕೊಂಡಿವೆ. ಉಳಿದಂತೆ ಸೆಲ್ಫಿಗಳನ್ನು ತೆಗೆದುಕೊಳ್ಳಲು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 33W VOOC ಸೂಪರ್ ವೂಕ್ ಚಾರ್ಜರ್ ಬೆಂಬಲ ಪಡೆದುಕೊಂಡಿದೆ.


Click it and Unblock the Notifications








