Home
ಸುದ್ದಿಜಾಲ

ಒಪ್ಪೋ ಸಂಸ್ಥೆಯ ಈ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್‌ಗೆ ಗ್ರಾಹಕರು ಫಿದಾ!

ಇ ಕಾಮರ್ಸ್‌ ತಾಣಗಳು ಗ್ರಾಹಕರನ್ನು ಸೆಳೆಯಲು ಆಯ್ದ ಉತ್ಪನ್ನಗಳಿಗೆ ಒಂದಿಲ್ಲೊಂದು ಬೊಂಬಾಟ್‌ ರಿಯಾಯಿತಿ ನೀಡುತ್ತವೆ. ಅದೇ ರೀತಿ ಫ್ಲಿಪ್‌ಕಾರ್ಟ್‌ ತಾಣವು ಇದೀಗ ಒಪ್ಪೋ ಸಂಸ್ಥೆಯ ಜನಪ್ರಿಯ ಫೋನ್‌ಗಳಲ್ಲಿ ಒಂದಾದ ಒಪ್ಪೋ A78 ಫೋನಿಗೆ ಸಖತ್ ರಿಯಾಯಿತಿ ತಿಳಿಸಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ ನಲ್ಲಿ ಒಪ್ಪೋ A78 ಫೋನ್‌ ಶೇ. 32% ರಷ್ಟು ನೇರ ರಿಯಾಯಿತಿ ಪಡೆದುಕೊಂಡಿದೆ. ಈ ಫೋನಿನ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ 15,499ರೂ. ಗಳ ಕೊಡುಗೆಯ ದರದಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಇತರೆ ಆಫರ್‌ಗಳನ್ನು ಪಡೆದುಕೊಂಡರೆ, ಈ ಫೋನ್‌ ಇನ್ನಷ್ಟು ಗ್ರಾಹಕಸ್ನೇಹಿ ಬೆಲೆಯಲ್ಲಿ ಲಭ್ಯವಾಗಲಿದೆ.

ಒಪ್ಪೋ ಸಂಸ್ಥೆಯ ಈ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್‌ಗೆ ಗ್ರಾಹಕರು ಫಿದಾ!

ಅಂದಹಾಗೆ ಈ ಫೋನ್‌ ಸ್ಯಾಮ್‌ಡ್ರಾಗನ್‌ 680 ಪ್ರೊಸೆಸರ್‌ ಅನ್ನು ಪಡೆದಿದ್ದು, 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಅಲ್ಲದೇ 50 ಮೆಗಾಪಿಕ್ಸೆಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ಆಯ್ಕೆ ಸಹ ಇದೆ. ಹಾಗಾದರೇ ಒಪ್ಪೋ A78 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ A78 ಫೋನ್‌ ಫೀಚರ್ಸ್‌

ಒಪ್ಪೋ A78 ಮೊಬೈಲ್‌ 6.56 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1,612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಇದು 90Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದ್ದು, 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ.

ಒಪ್ಪೋ A78 ಮೊಬೈಲ್‌ ಸ್ಯಾಮ್‌ಡ್ರಾಗನ್‌ 680 ಪ್ರೊಸೆಸರ್‌ ಪವರ್‌ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ ಕಲರ್‌ಒಎಸ್‌ 12.1 ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಅನ್ನು ಸಪೋರ್ಟ್ ಮಾಡುತ್ತದೆ. ಇದರಲ್ಲಿ ಆನ್‌ಬೋರ್ಡ್‌ ಸ್ಟೋರೇಜ್‌ ಬಳಸಿಕೊಂಡು 5GB ವರೆಗೆ RAM ವಿಸ್ತರಿಸಬಹುದು.

ಒಪ್ಪೋ A78 ಮೊಬೈಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಪೋಟ್ರೇಟ್ ಸೆನ್ಸಾರ್ ಜೊತೆಗೆ f/2.4 ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾಗಳು 30fps ನಲ್ಲಿ ಫುಲ್‌ HD ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಪಡೆದಿವೆ.

ಒಪ್ಪೋ A78 ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಇದು 33W ಸೂಪರ್‌ ವೂಕ್‌ ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಮಾಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇದು ವೈ ಫೈ 5 ಮತ್ತು ಬ್ಲೂಟೂತ್ v5.3 ವಾಯರ್‌ಲೆಸ್ ಕನೆಕ್ಟಿವಿಟಿ ಅನ್ನು ನೀಡುತ್ತದೆ. ಅಲ್ಲದೆ ಯುಎಸ್‌ಬಿ ಟೈಪ್ ಸಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಪೋರ್ಟ್‌ ಇದೆ.

ಹಾಗೆಯೇ ಒಪ್ಪೋ A78 ಸ್ಮಾರ್ಟ್‌ಫೋನ್‌ 8GB + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಮೊಬೈಲ್‌ ಅನ್ನು ಬ್ಲ್ಯಾಕ್ ಮತ್ತು ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Oppo A78 Received Greatest Price Drop in flipkart. price, offer, features and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+