Home
ಸುದ್ದಿಜಾಲ

ಭಾರೀ ಆಫರ್‌ನಲ್ಲಿ ಹೊಸ ಒಪ್ಪೋ ಮೊಬೈಲ್‌ ಖರೀದಿಸಲು ಇದೇ ಬೆಸ್ಟ್‌ ಟೈಮ್!

ಒಪ್ಪೋ ಸಂಸ್ಥೆಯ ಫೋನ್‌ಗಳ ಮಾರುಕಟ್ಟೆಯಲ್ಲಿ ತಮ್ಮದೇ ಸ್ಥಾನ ಪಡೆದಿವೆ. ಇನ್ನು ಒಪ್ಪೋ ಸಂಸ್ಥೆಯು ಇತ್ತೀಚಿಗೆ ಒಪ್ಪೋ A79 5G ಫೋನ್ ಬಿಡುಗಡೆ ಮಾಡುವ ಮೂಲಕ ತನ್ನ ಮೊಬೈಲ್‌ ಶ್ರೇಣಿಯನ್ನು ವಿಸ್ತಾರ ಮಾಡಿಕೊಂಡಿದೆ. ಅಂದಹಾಗೆ ಈ ನೂತನ ಮೊಬೈಲ್‌ ಅಮೆಜಾನ್‌ ತಾಣದಲ್ಲಿ ಆಕರ್ಷಕ ರಿಯಾಯಿತಿ ಪಡೆದಿದ್ದು, ಈಗ ಹೆಚ್ಚಿನ ಗಮನ ಸೆಳೆದಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ದೈತ್ಯ ಅಮೆಜಾನ್‌ ತಾಣದಲ್ಲಿ ಒನ್‌ಪ್ಲಸ್‌ ಸಂಸ್ಥೆಯ ಒಪ್ಪೋ A79 5G ಮೊಬೈಲ್‌ ಶೇ. 13% ರಷ್ಟು ಡಿಸ್ಕೌಂಟ್‌ ಪ್ರೈಸ್‌ ಅನ್ನು ಪಡೆದುಕೊಂಡಿದೆ. ಈ ಮೊಬೈಲ್‌ನ 8GB RAM + 128GB ಸ್ಟೋರೇಜ್‌ ಮಾಡೆಲ್‌ ಫೋನಿನ ಕೊಡುಗೆಯ ಬೆಲೆಯು 19,999ರೂ. ಆಗಿದೆ. ಗ್ರಾಹಕರು ಅಮೆಜಾನ್‌ನಲ್ಲಿ ಲಭ್ಯ ಇರುವ ಎಕ್ಸ್‌ಚೆಂಜ್‌ ಸೇರಿದಂತೆ ಇತರೆ ಪಡೆದರೆ ಮತ್ತಷ್ಟು ರಿಯಾಯಿತಿ ಪಡೆಯಲು ಸಾಧ್ಯ.

ಭಾರೀ ಆಫರ್‌ನಲ್ಲಿ ಹೊಸ ಒಪ್ಪೋ ಮೊಬೈಲ್‌ ಖರೀದಿಸಲು ಇದೇ ಬೆಸ್ಟ್‌ ಟೈಮ್!

ಅಂದಹಾಗೆ ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ಸೌಲಭ್ಯ ಪಡೆದುಕೊಂಡಿದ್ದುಯ, ಹಾಗೆಯೇ 5,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಸಹ ಒಳಗೊಂಡಿದೆ. ಹಾಗಾದರೆಒಪ್ಪೋ A79 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸದ ಮಾಹಿತಿ

ಒಪ್ಪೋ A79 5G ಮೊಬೈಲ್‌ 6.72 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 91.4% ಡಿಸ್‌ಪ್ಲೇ ರಚನೆಯ ಅನುಪಾತವನ್ನು ಹೊಂದಿದ್ದು, ಜೊತೆಗೆ ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ.

ಭಾರೀ ಆಫರ್‌ನಲ್ಲಿ ಹೊಸ ಒಪ್ಪೋ ಮೊಬೈಲ್‌ ಖರೀದಿಸಲು ಇದೇ ಬೆಸ್ಟ್‌ ಟೈಮ್!

ಪ್ರೊಸೆಸರ್‌ ಸಾಮರ್ಥ್ಯ ಎಷ್ಟು

ಒಪ್ಪೋ A79 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ವೇಗದ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್‌ 13 OS ಆಧಾರಿತ ಕಲರ್ಓಎಸ್‌ 13 ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಅದೇ ರೀತಿ 8GB RAM ಮತ್ತು 128GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆ ಸಹ ಪಡೆದಿದೆ. ಹಾಗೆಯೇ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಒದಗಿಸಿದೆ.

ಕ್ಯಾಮೆರಾ ರಚನೆ ವಿವರ

ಒಪ್ಪೋದ ಈ ನೂತನ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪೋರ್ಟ್ರೇಟ್‌ ಲೆನ್ಸ್‌ ಅನ್ನು ಪಡೆದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ. ಈ ಮೊಬೈಲ್‌ನ ಹಿಂಬದಿಯ ಕ್ಯಾಮೆರಾಗಳಿಗೆ ರಿಂಗ್‌ ಹೌಸಿಂಗ್‌ ಟಚ್‌ ನೀಡಲಾಗಿದೆ.

ಭಾರೀ ಆಫರ್‌ನಲ್ಲಿ ಹೊಸ ಒಪ್ಪೋ ಮೊಬೈಲ್‌ ಖರೀದಿಸಲು ಇದೇ ಬೆಸ್ಟ್‌ ಟೈಮ್!

ಬಿಗ್ ಬ್ಯಾಟರಿ ಮತ್ತು ಇತರೆ ಸೌಲಭ್ಯ

ಒಪ್ಪೋ A79 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು 33W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್‌ 5.3, ಯುಎಸ್‌ಬಿ ಟೈಪ್-ಸಿ, ಇಯರ್‌ಫೋನ್ ಜ್ಯಾಕ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್‌ 3.5ಮಿ.ಮೀ ಸ್ಟೀರಿಯೋ ಸಪೋರ್ಟ್‌ ನೊಂದಿಗೆ ಡ್ಯುಯಲ್ ಸ್ಪೀಕರ್ ರಚನೆ ಅನ್ನು ಹೊಂದಿದೆ.

ಮೆಮೊರಿ ಮತ್ತು ಕಲರ್ ಆಯ್ಕೆ

ಒಪ್ಪೋ A79 5G ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಗ್ಲೋಯಿಂಗ್ ಗ್ರೀನ್ ಮತ್ತು ಮಿಸ್ಟರಿ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Oppo A79 5G has received high price drop in Amazon. check offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+