Home
ಸುದ್ದಿಜಾಲ

Smartphones: 20 ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು! ರೆಡ್ಮಿ ನೋಟ್ 12 5G ಯಿಂದ ಲಾವಾ ಅಗ್ನಿ 2 5G ವರೆಗೆ

ವಿವಿಧ ಫೀಚರ್ಸ್‌ ಆಯ್ಕೆಯ ಸ್ಮಾರ್ಟ್‌ಫೋನ್‌ಗಳು (Smartphones) ಮಾರುಕಟ್ಟೆಗೆ ಲಗ್ಗೆ ಇಟ್ಟಾಗಲೆಲ್ಲಾ ಹಲವಾರು ಜನರು ಆ ಪೋನ್‌ಗಳಿಗೆ ಅಪ್‌ಗ್ರೇಡ್‌ ಆಗಲು ಮುಂದಾಗುತ್ತಾರೆ. ಇದು ಸಾಮಾನ್ಯವಾದ ಪ್ರಕ್ರಿಯೆ ಈ ನಡುವೆ 20 ಸಾವಿರದೊಳಗಿನ ಲಭ್ಯ ಇರುವ ಫೋನ್‌ಗಳಿಗೆ ಭಾರತದಲ್ಲಿ ಬಹಳ ಬೇಡಿಕೆ ಇದೆ.

ಹೌದು, ರಿಯಲ್‌ಮಿ 11 5G ಯಿಂದ ಹಿಡಿದು ಒಪ್ಪೋ A79 5G ಸ್ಮಾರ್ಟ್‌ಫೋನ್‌ ವರೆಗೆ ವಿವಿಧ ಫೋನ್‌ಗಳು 20 ಸಾವಿರದೊಳಗೆ ಲಭ್ಯ ಇವೆ. ಈ ಫೋನ್‌ಗಳು ಸ್ಟೋರೇಜ್‌ ವಿಭಾಗದಲ್ಲಿ, ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಹಾಗೂ ಕ್ಯಾಮೆರಾ ವಿಚಾರದಲ್ಲಂತೂ ಪ್ರೀಮಿಯಂ ಎನಿಸಿವೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳು ಈ ಬೆಲೆಯಲ್ಲಿ ಲಭ್ಯ ಇವೆ?, ಇವುಗಳ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

20 ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು...

ರೆಡ್ಮಿ ನೋಟ್ 12 5G: ಈ ಸ್ಮಾರ್ಟ್‌ಫೋನ್ (Redmi Note 12 5G) ಅನ್ನು ನೀವು 18,999 ರೂ.ಗಳ ಬೆಲೆಯಲ್ಲಿ ಕೊಂಡುಕೊಳ್ಳಬಹುದಾಗಿದೆ. ಜೊತೆಗೆ ಗ್ರಾಹಕರು ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಫ್ಲಾಟ್ 2000 ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು. ಈ ಫೋನ್‌ 1080x2400 ರೆಸಲ್ಯೂಶನ್ ಹೊಂದಿರುವ 6.67 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್, 8 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಆಯ್ಕೆ ಪಡೆದಿದೆ.

ರಿಯಲ್‌ಮಿ 11 5G : ಈ ಸ್ಮಾರ್ಟ್‌ಫೋನ್‌ (Realme 11 5G) ಅನ್ನು ನೀವು 18,599 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 8GB RAM, 256GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಕಾಣಿಸಿಕೊಂಡಿದ್ದು, ಡೈಮೆನ್ಸಿಟಿ 6100+ 5G ಚಿಪ್‌ಸೆಟ್‌ ಹೊಂದಿದೆ. ಜೊತೆಗೆ 108MP + 2MP ರಿಯರ್‌ ಕ್ಯಾಮೆರಾ, 16MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಈ ಫೋನ್‌ಗೆ ಇನ್ನಷ್ಟು ಶಕ್ತಿ ನೀಡಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಫೋನ್‌ 6.72 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಪಡೆದಿದೆ.

ಒನ್‌ಪ್ಲಸ್ ನಾರ್ಡ್ CE 3 ಲೈಟ್‌ 5G: ಈ ಫೋನ್‌ (OnePlus Nord CE 3 Lite 5G) ಅನ್ನು ನೀವು 19,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 108 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಮತ್ತು ವಿವಿಧ ಶೂಟಿಂಗ್ ಮೋಡ್‌ಗಳನ್ನು ಒಳಗೊಂಡಂತೆ ಕ್ಯಾಮೆರಾ ರಚನೆ ಪಡೆದಿದೆ. ಇದರೊಂದಿಗೆ 6.72 ಇಂಚಿನ ಡಿಸ್‌ಪ್ಲೇ ಹಾಗೂ 120 Hz ರಿಫ್ರೆಶ್ ರೇಟ್‌ ಪಡೆಯುವ ಮೂಲಕ ಅತ್ಯುತ್ತಮ ಅನುಭವ ನೀಡಲಿದೆ. ಹಾಗೆಯೇ ಸ್ನಾಪ್ಡ್ರಾಗನ್ 695 5G ಪ್ರೊಸೆಸರ್ ಸುಗಮ ಕಾರ್ಯಕ್ಷಮತೆಯನ್ನು ನೀಡಲಿದ್ದು, 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಜೊತೆಗೆ ಈ ಫೋನ್‌ 8GB RAM, 128GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ.

20 ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು...

ಒಪ್ಪೋ A79 5G : ಈ ಫೋನ್ (Oppo A79 5G) ಅನ್ನು 19,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 50 ಮೆಗಾಪಿಕ್ಸೆಲ್‌ ಎಐ ರಿಯರ್‌ ಕ್ಯಾಮರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮೂಲಕ ಕಾಣಿಸಿಕೊಂಡಿದ್ದು, 8GB RAM, 128GB ಸ್ಟೋರೇಜ್‌ ಆಯ್ಕೆ ಮೂಲಕ ಉತ್ತಮ ಎನಿಸಿದೆ. ಇದರೊಂದಿಗೆ 6.72 ಇಂಚಿನ ಫುಲ್‌ಹೆಚ್‌ಡಿ+ 90Hz ವಾಟರ್‌ಡ್ರಾಪ್ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಉಳಿದಂತೆ ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಇದು 33W ಸೂಪರ್‌ವೂಕ್‌ ಚಾರ್ಜಿಂಗ್‌ ಬೆಂಬಲ ಪಡೆದಿದೆ.

20 ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು...

ಲಾವಾ ಅಗ್ನಿ 2 5G : ಈ ಫೋನ್ (Lava Agni 2 5) 19,999 ರೂ.ಗಳಿಗೆ ಲಭ್ಯ ಇದೆ. ಇದು 6.78 ಇಂಚಿನ ಹಾಗೂ 120Hz ರಿಫ್ರೆಶ್‌ ರೇಟ್‌ ಆಯ್ಕೆ ಇರುವ ಫುಲ್‌ ಹೆಚ್‌ಡಿ+ ಕರ್ವ್ಡ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಸೂಪರ್‌ಫಾಸ್ಟ್ 66W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ 50 ಮೆಗಾಪಿಕ್ಸೆಲ್‌ ನೊಂದಿಗೆ ಕ್ವಾಡ್-ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

Best Mobiles in India

English summary
Various Smartphones are available on Amazon under 20k. Among these, Redmi Note 12 5G, Realme 11 5G, OnePlus Nord CE 3 Lite 5G, Oppo A79 5G, Lava Agni 2 5G Smartphones are in high demand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+