'ಒಪ್ಪೊ A9 2020' ಸ್ಮಾರ್ಟ್‌ಫೋನ್ ಬೆಲೆ ಇಳಿಕೆ!
ಇತ್ತೀಚಿಗೆ ಬಿಡುಗಡೆ ಆಗಿದ್ದ 'ಒಪ್ಪೊ A9 2020' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇದೀಗ ದಿಢೀರನೆ ಇಳಿಕೆ ಕಂಡಿದ್ದು, ಗ್ರಾಹಕರಿಗೆ ಭಾರೀ ಅಚ್ಚರಿ ಎನಿಸಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್, ಆಂಡ್ರಾಯ್ಡ್ 9 ಪೈ ಓಎಸ್, ನಾಲ್ಕು ರಿಯರ್ ಕ್ಯಾಮೆರಾ ಮತ್ತು 5,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಫೀಚರ್ಸ್‌ಗಳೊಂದಿಗೆ ಗ್ರಾಹಕರನ್ನು ಸೆಳೆದಿದೆ. ಆದ್ರೆ ಬೆಲೆ ಇಳಿಕೆಯಿಂದಾಗಿ ಆರಂಭಿಕ ವೇರಿಯಂಟ್ 15,990ರೂ.ಗಳಿಗೆ ಲಭ್ಯವಾಗಲಿದೆ.

ಹೌದು, 'ಒಪ್ಪೊ A9 2020' ಸ್ಮಾರ್ಟ್‌ಫೋನ್ 4GB RAM ಮತ್ತು 8GB RAM ಸಾಮರ್ಥ್ಯದ ಎರಡು ವೇರಿಯಂಟ್‌ಗಳ ಆಯ್ಕೆಯನ್ನು ಹೊಂದಿದೆ. ಅವುಗಳಲ್ಲಿ ಇದೀಗ 4GB RAM ವೇರಿಯಂಟ್‌ನ ಬೆಲೆಯಲ್ಲಿ 1,000ರೂ ಇಳಿಕೆ ಮಾಡಿದ್ದು, 15,990ರೂ.ಗಳಿಗೆ ದೊರೆಯುತ್ತದೆ. ಆದ್ರೆ 8GB RAM ವೇರಿಯಂಟ್ 19,990ರೂ.ಗಳಿಗೆ ಲಭ್ಯವಿದ್ದು, ಬೆಲೆ ಇಳಿಕೆ ಕಂಡಿಲ್ಲ. ಈ ಸ್ಮಾರ್ಟ್‌ಫೋನ್ ಅಮೆಜಾನ್ ಇ-ಕಾಮರ್ಸ್ ತಾಣದಲ್ಲಿ ಖರೀದಿಗೆ ದೊರೆಯಲಿದೆ. ಹಾಗಾದರೇ ಒಪ್ಪೊ A9 2020 ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿರಿ.

ಪೂರ್ಣ ಹೆಚ್‌ಡಿ ಡಿಸ್‌ಪ್ಲೇ
ಒಪ್ಪೊ A9 2020 ಸ್ಮಾರ್ಟ್‌ಫೋನ್ 720 x 1600 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಸ್ಕ್ರೀನ್‌ನಿಂದ ಬಾಹ್ಯ ಬಾಡಿ ನಡುವಿನ ಅನುಪಾತವು ಶೇ. 82.5 ರಷ್ಟಾಗಿದೆ. ಡಿಸ್‌ಪ್ಲೇಯು ಐಪಿಎಸ್, ಎಲ್‌ಸಿಡಿ ಮಾದರಿಯ ವಿನ್ಯಾಸ್ ಪಡೆದಿದ್ದು, ಹಾಗೆಯೇ ಡಿಸ್‌ಪ್ಲೇ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 270ppi ಆಗಿದೆ. ಸುತ್ತಳತೆಯು 163.6 x 75.6 x 9.1 mm ಆಗಿದೆ.

ಪ್ರೊಸೆಸರ್ ಶಕ್ತಿ
ಒಪ್ಪೊ A9 2020 ಸ್ಮಾರ್ಟ್‌ಫೋನ್ 4GB RAM ಮತ್ತು 8GB RAM ಸಾಮರ್ಥ್ಯದೊಂದಿಗೆ 128GB ಆಂತರಿಕ ಸ್ಟೋರೇಜ್ ಆಯ್ಕೆಯನ್ನು ಹೊಂದಿದ್ದು, ಎಸ್‌ಎಇ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 256GB ವರೆಗೂ ವಿಸ್ತರಿಸುವ ಅವಕಾಶ ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಹೊಂದಿದೆ. ಇದಕ್ಕೆ ಜೊತೆಯಾಗಿ ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲ ಪಡೆದಿದೆ.

ಕ್ಯಾಮೆರಾ ವಿಶೇಷತೆ
ಒಪ್ಪೊ A9 2020 ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಆಯ್ಕೆಯನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು f/1.8 ಅಪರ್ಚರ್ನೊಂದಿಗೆ 48ಎಂಪಿ ಸೆನ್ಸಾರ್ ಹೊಂದಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ ಪಡೆದಿವೆ. ಹಾಗೆಯೇ ಸೆಲ್ಫಿಗಾಗಿ f/2.0 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್ ಬಲದ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಒಪ್ಪೊ A9 2020 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದ್ದು, ಅತ್ಯುತ್ತಮ ಚಾರ್ಜಿಂಗ್ ಸೌಲಭ್ಯವನ್ನು ಸಹ ಪಡೆದುಕೊಂಡಿದೆ. ಇದರೊಂದಿಗೆ ವೈಫೈ, ಬ್ಲೂಟೂತ್, ಮೈಕ್ರೋ ಯುಎಸ್‌ಬಿ, OTG ಮತ್ತು GPS/ A-GPS ಸೌಲಭ್ಯಗಳು ಇವೆ. ಹಾಗೂ ಆಂಬಿಯಂಟ್ ಲೈಟ್, ಪ್ರಾಕ್ಸಿಮಿಟಿ, ಗೈರೋಸ್ಕೋಪ್, ಆಕ್ಸಲೆರೋಮೀಟರ್ ಸೆನ್ಸಾರ್ ಆಯ್ಕೆಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಒಪ್ಪೊ A9 2020 ಸ್ಮಾರ್ಟ್‌ಫೋನ್ ಇದೀಗ ಬೆಲೆ ಇಳಿಕೆ ಕಂಡಿದ್ದು, 4GB RAM ವೇರಿಯಂಟ್ 15,990ರೂ.ಗಳಿಗೆ ದೊರೆಯುತ್ತದೆ. ಹಾಗೆಯೇ 8GB RAM ವೇರಿಯಂಟ್ 19,990ರೂ.ಗಳಿಗೆ ಲಭ್ಯವಿದೆ. ಗ್ರಾಹಕರು ಅಮೆಜಾನ್ ಇ-ಕಾಮರ್ಸ್ ತಾಣದಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications