ಒಪ್ಪೊ A9 ಸ್ಮಾರ್ಟ್‌ಫೋನ್‌ ಬಿಡುಗಡೆ : 128GB ಸ್ಟೋರೇಜ್ ಹೈಲೈಟ್!

|

ಚೀನಾ ಮೂಲದ 'ಒಪ್ಪೊ' ಕಂಪನಿಯು ವಿವಿಧ ಸ್ಮಾರ್ಟ್‌ಫೋನ್ ಶ್ರೇಣಿಯ ಮೂಲಕ ಈಗಾಗಲೇ ಭಾರತೀಯ ಮಾರುಕಟ್ಟೆಗೆ ಗುರುತಿಸಿಕೊಂಡಿದ್ದು, ಆದ್ರೆ ಈಗ ಸದ್ದಿಲ್ಲದೇ 'ಒಪ್ಪೊ A9' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ 4,020mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿರುವ ಜೊತೆಗೆ 4GB RAM + 128GB ಸ್ಟೋರೇಜ್‌ ಸ್ಥಳಾವಕಾಶವನ್ನು ಪಡೆದುಕೊಂಡಿದೆ.

ಒಪ್ಪೊ A9 ಸ್ಮಾರ್ಟ್‌ಫೋನ್‌ ಬಿಡುಗಡೆ : 128GB ಸ್ಟೋರೇಜ್ ಹೈಲೈಟ್!

ಹೌದು, ಒಪ್ಪೊ ಕಂಪನಿಯು ಇದೇ ಜುಲೈ 18ರಂದು ಭಾರತೀಯ ಮಾರುಕಟ್ಟೆಗೆ ಒಪ್ಪೊ A9 ಬಜೆಟ್‌ ಸ್ಮಾರ್ಟ್‌ಫೋನ್‌ ಅನ್ನು ರಿಲೀಸ್‌ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ ಇದೇ ಜುಲೈ 20ರಿಂದ ಮೊದಲ ಸೇಲ್ ಆರಂಭವಾಗಲಿದೆ. 15,490ರೂ.ಗಳ ಪ್ರೈಸ್‌ ಟ್ಯಾಗ್‌ನಲ್ಲಿರುವ ಈ ಸ್ಮಾರ್ಟ್‌ಫೋನ್ ಪ್ರಮುಖ ಇ ಕಾಮರ್ಸ್‌ ತಾಣಗಳ ಸೇರಿದಂತೆ ಆಫ್‌ಲೈನ್‌ ಸ್ಟೋರ್‌ಗಳಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯಲಿದೆ.

ಒಪ್ಪೊ A9 ಸ್ಮಾರ್ಟ್‌ಫೋನ್‌ ಬಿಡುಗಡೆ : 128GB ಸ್ಟೋರೇಜ್ ಹೈಲೈಟ್!

ಮಿಡೀಯಾ ಟೆಕ್‌ ಹಿಲಿಯೊ P70 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಸುವ ಈ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್‌ 9.0 ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ ಡ್ಯುಯಲ್‌ ಕ್ಯಾಮೆರಾ ಫೀಚರ್ಸ್‌ ಹೊಂದಿದ್ದು, ಹಾಗೆಯೇ ಗೇಮಿಂಗ್‌ ಅನುಕೂಲತೆಗಾಗಿ 'ಹೈಪರ್‌ ಬೂಸ್ಟ್‌' ಸಾಫ್ಟ್‌ವೇರ್ ಸಹ ನೀಡಲಾಗಿದೆ. ಹಾಗಾದರೇ ಒಪ್ಪೊ A9 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿರಿ.

ಓದಿರಿ : ವಾಟ್ಸಪ್‌ನ ಈ ಹೊಸ ಫೀಚರ್‌ ಐಫೋನ್‌ ಬಳಕೆದಾರರಿಗೆ ಮಾತ್ರ!ಓದಿರಿ : ವಾಟ್ಸಪ್‌ನ ಈ ಹೊಸ ಫೀಚರ್‌ ಐಫೋನ್‌ ಬಳಕೆದಾರರಿಗೆ ಮಾತ್ರ!

ಪೂರ್ಣ ಹೆಚ್‌ಡಿ ಡಿಸ್‌ಪ್ಲೇ

ಪೂರ್ಣ ಹೆಚ್‌ಡಿ ಡಿಸ್‌ಪ್ಲೇ

ಒಪ್ಪೊ A9 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್‌ ನೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಸ್ಕ್ರೀನ್‌ನಿಂದ ಬಾಹ್ಯಬಾಡಿ ನಡುವಿನ ಅನುಪಾತವು ಶೇ. 90.70ರಷ್ಟಾಗಿದೆ. ಡಿಸ್‌ಪ್ಲೇಯು ವಾಟರ್‌ಡ್ರಾಪ್‌ ನಾಚ್‌ ವಿನ್ಯಾಸ್‌ ಪಡೆದಿದ್ದು, ಹಾಗೆಯೇ ಡಿಸ್‌ಪ್ಲೇ ಮೇಲ್ಭಾಗದ ಗೊರಿಲ್ಲಾ ಗ್ಲಾಸ್‌ ಸ್ಕ್ರೀನ್‌ಗೆ ರಕ್ಷಣೆ ಒದಗಿಸಲಿದೆ.

ಪ್ರೊಸೆಸರ್‌ ಶಕ್ತಿ

ಪ್ರೊಸೆಸರ್‌ ಶಕ್ತಿ

4GB RAM ಸಾಮರ್ಥ್ಯದೊಂದಿಗೆ 128GB ಆಂತರಿಕ ಸ್ಟೋರೇಜ್ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಮಿಡೀಯಾ ಟೆಕ್‌ ಹಿಲಿಯೊ P70 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ColorOS 6 ಒಳಗೊಂಡ ಆಂಡ್ರಾಯ್ಡ್‌ 9.0 ಆಪರೇಟಿಂಗ್‌ ಸಿಸ್ಟಮ್‌ನ ಬೆಂಬಲ ಪಡೆದಿದ್ದು, ಮಲ್ಟಿಟಾಸ್ಕ್‌ ಕೆಲಸಗಳು ವೇಗವಾಗಿ ನಡೆಯಲಿವೆ.

ಓದಿರಿ : ಶಿಯೋಮಿಯ 'ನೆಕ್‌ಬ್ಯಾಂಡ್ ಇಯರ್‌ಫೋನ್‌' ಲಾಂಚ್!.ಇದೇ ಜುಲೈ 23 ಸೇಲ್!

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಡ್ಯುಯಲ್ ರೇರ್‌ ಕ್ಯಾಮೆರಾ ಸೆಟ್‌ಅಪ್‌ ಆಯ್ಕೆಯನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು f/1.8 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್‌ ಹೊಂದಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದ್ದು, ಜೊತೆಗೆ ಎಲ್‌ಇಡಿ ಫ್ಲ್ಯಾಶ್‌ ಒಳಗೊಂಡಿದೆ. ಹಾಗೆಯೇ ಸೆಲ್ಫಿಗಾಗಿ f/2.0 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್‌ ಬಲದ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಒಪ್ಪೊ A9 ಸ್ಮಾರ್ಟ್‌ಫೋನ್ 4,020mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದ್ದು, ಅತ್ಯುತ್ತಮ ಚಾರ್ಜಿಂಗ್ ಸೌಲಭ್ಯವನ್ನು ಸಹ ಪಡೆದುಕೊಂಡಿದೆ. ಇದರೊಂದಿಗೆ ವೈಫೈ, ಬ್ಲೂಟೂತ್‌, ಮೈಕ್ರೋ ಯುಎಸ್‌ಬಿ, OTG ಮತ್ತು GPS/ A-GPS ಸೌಲಭ್ಯಗಳು ಇವೆ. ಹಾಗೂ ಆಂಬಿಯಂಟ್ ಲೈಟ್, ಪ್ರಾಕ್ಸಿಮಿಟಿ, ಗೈರೋಸ್ಕೋಪ್‌, ಆಕ್ಸಲೆರೋಮೀಟರ್‌ ಸೆನ್ಸಾರ್‌ ಆಯ್ಕೆಗಳನ್ನು ಹೊಂದಿದೆ.

ಓದಿರಿ : 'ಟಿಸಿಎಲ್'ನ ಹೊಸ 55 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಬಿಡುಗಡೆ!ಓದಿರಿ : 'ಟಿಸಿಎಲ್'ನ ಹೊಸ 55 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಬಿಡುಗಡೆ!

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈ ವರ್ಷದ ಆರಂಭದಲ್ಲಿ ಮೊದಲು ಚೀನಾದಲ್ಲಿ ಬಿಡುಗಡೆ ಆಗಿದ್ದ ಒಪ್ಪೊ A9 ಸ್ಮಾರ್ಟ್‌ಫೋನ್ ಇದೀಗ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಎರಡು ಬಣ್ಣಗಳ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯಲ್ಲಿ ಗುರುತಿಸಿಕೊಂಡಿದ್ದು, ಬೆಲೆಯು 15,490ರೂ.ಗಳಾಗಿವೆ. ಇದೇ ಜುಲೈ 20ರಿಂದ ಆಪ್‌ಲೈನ್‌ ಮತ್ತು ಆಫ್‌ಲೈನ್‌ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ.

ಓದಿರಿ : 'ನೆಟ್‌ಫ್ಲೆಕ್ಸ್' ತಿಂಗಳ ಚಂದಾಶುಲ್ಕ ಈಗ ತುಂಬಾ ಕಡಿಮೆ!ಓದಿರಿ : 'ನೆಟ್‌ಫ್ಲೆಕ್ಸ್' ತಿಂಗಳ ಚಂದಾಶುಲ್ಕ ಈಗ ತುಂಬಾ ಕಡಿಮೆ!

Best Mobiles in India

English summary
Oppo A9 has been launched in India with dual rear camera setup and a full-HD+ display. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X