Home
ಸುದ್ದಿಜಾಲ

Oppo: ಒಪ್ಪೋ ಏರ್‌ ಗ್ಲಾಸ್‌ 3 ಅನಾವರಣ, ಎಐ ಬೆಂಬಲಿತ ಸ್ಮಾರ್ಟ್ ಗ್ಲಾಸ್ ಬಗ್ಗೆ ನಿಮಗೆಷ್ಟು ಗೊತ್ತು?

ಒಪ್ಪೋ (Oppo) ಈವರೆಗೆ ಸ್ಮಾರ್ಟ್‌ಫೋನ್‌ ಸಂಬಂಧ ಮಾರುಕಟ್ಟೆಯಲ್ಲಿ ಸೌಂಡ್‌ ಮಾಡುತ್ತಿತ್ತು. ಆದರೆ, ಈಗ ಈ ಒಂದು ವಿಶೇಷ ಗ್ಲಾಸ್‌ ಮೂಲಕ ಎಲ್ಲಾ ಜನರನ್ನು ತನ್ನ ಕಡೆ ಸೆಳೆದುಬಿಟ್ಟಿದೆ. ಈ ಗ್ಲಾಸ್ ಎಐ ಫೀಚರ್ಸ್‌ ಆಯ್ಕೆ ಪಡೆದಿರುವುದಂತೂ ಸಂತಸ ಪಡುವ ವಿಷಯವಾಗಿದೆ.

ಹೌದು, ಒಪ್ಪೋ ತನ್ನ ಇತ್ತೀಚಿನ ವಿಸ್ತೃತ ರಿಯಾಲಿಟಿ ಗ್ಲಾಸ್‌ಗಳನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2024 ರಲ್ಲಿ ಅನಾವರಣಗೊಳಿಸಿದೆ. ಅದರಂತೆ ಒಪ್ಪೋ ಏರ್ ಗ್ಲಾಸ್ 3 (Oppo Air Glass 3) ಒಂದು ಮೂಲಮಾದರಿಯಾಗಿದ್ದು, ಇದು ಸಾಮಾನ್ಯ ಕನ್ನಡಕದಂತೆ ಕಾಣುತ್ತದೆಯಾದರೂ ಇದು ಅಸಮಾನ್ಯ ಕನ್ನಡಕವಾಗಿರಲಿದೆ. ಈ ಮೂಲಕ ಬಳಕೆದಾರರಿಗೆ ಬೇರೆಯದೇ ಲೋಕದ ಪರಿಚಯ ಮಾಡಿಕೊಡಲಿದೆ. ಹಾಗಿದ್ರೆ ಈ ಗ್ಲಾಸ್‌ನ ಫೀಚರ್ಸ್‌ ಏನು?, ಇದರಿಂದ ಏನೆಲ್ಲಾ ಅನುಕೂಲ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಒಪ್ಪೋ ಏರ್‌ ಗ್ಲಾಸ್‌ 3 ಅನಾವರಣ, ಎಐ ಬೆಂಬಲಿತ ಗ್ಲಾಸ್ ಬಗ್ಗೆ ನಿಮಗೆಷ್ಟು ಗೊತ್ತು?

ಒಪ್ಪೋ ಏರ್ ಗ್ಲಾಸ್ 3: ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ ರಿಂಗ್‌ ಸೇರಿದಂತೆ ಅನೇಕ ಸ್ಮಾರ್ಟ್‌ ಡಿವೈಸ್‌ಗಳು ಇಂದು ಗ್ರಾಹಕರ ಅವಿಭಾಜ್ಯ ಅಂಗದಂತೆ ಆಗುತ್ತಿವೆ. ಈ ನಡುವೆ ಸ್ಮಾರ್ಟ್‌ಗ್ಲಾಸ್‌ ಸಹ ಮುನ್ನೆಲೆಗೆ ಬರುತ್ತಿದ್ದು, ಇವು ಖಂಡಿತಾ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಅಲೆಯನ್ನೇ ಸೃಷ್ಟಿಸಲಿವೆ. ಈ ವಿಭಾಗದಲ್ಲಿ ಈಗ ಒಪ್ಪೋ ಏರ್ ಗ್ಲಾಸ್ 3 ಬಗ್ಗೆ ಜನರಿಗೆ ಕ್ರೇಜ್‌ ಹೆಚ್ಚಾಗಿದೆ.

ಈ ಗ್ಲಾಸ್ ಟ್ರಾನ್ಫರೆಂಟ್ ದೃಗ್ವಿಜ್ಞಾನದೊಂದಿಗೆ (transparent optics) ಸಾಮಾನ್ಯ ಗಾತ್ರದ ಕನ್ನಡಕವಾಗಿದೆ. ಇದರ ಪ್ರತಿಯೊಂದು ಲೆನ್ಸ್‌ಗಳು ಬಣ್ಣದ ಚಿತ್ರಗಳನ್ನು ತೋರಿಸಲು ಸಮರ್ಥವಾಗಿದ್ದು, ಒಪ್ಪೋ ಇದನ್ನು ವಿಶ್ವದ ಹಗುರವಾದ ಬೈನಾಕ್ಯುಲರ್ ಎಆರ್‌ ಕನ್ನಡಕ ಎಂದು ಕರೆದಿದೆ. ಅಲ್ಲದೆ ಇದು 50 ಗ್ರಾಂ ಅಷ್ಟೇ ತೂಕ ಹೊಂದಿದ್ದು, ಆರಾಮದಾಯಕ ಅನುಭವ ನೀಡಲಿದೆ ಮತ್ತು ನಿಮ್ಮ ನಿತ್ಯದ ಉಡುಪಿನೊಂದಿಗೆ ಅತ್ಯುತ್ತಮವಾಗಿ ಹೊಂದಿಕೆಯಾಗುತ್ತದೆ.

ಒಪ್ಪೋ ಏರ್‌ ಗ್ಲಾಸ್‌ 3 ಅನಾವರಣ, ಎಐ ಬೆಂಬಲಿತ ಗ್ಲಾಸ್ ಬಗ್ಗೆ ನಿಮಗೆಷ್ಟು ಗೊತ್ತು?

ಇನ್ನು ಇಮೇಜಿಂಗ್‌ಗಾಗಿ ರೆಸಿನ್ ವೇವ್‌ಗೈಡ್‌ಗಳು ಕೇವಲ 0.88 ಮಿಮೀ ದಪ್ಪವನ್ನು ಹೊಂದಿದ್ದು, ಪ್ರತಿ ಕಣ್ಣಿಗೆ 1,000 ನಿಟ್ಸ್‌ವರೆಗೆ ಬ್ರೈಟ್‌ನೆಸ್‌ ಸೌಲಭ್ಯ ನೀಡಬಲ್ಲದು. ಹಾಗೆಯೇ ಚಿಕ್ಕ ಮೈಕ್ರೋಎಲ್‌ಇಡಿ ಪ್ರೊಜೆಕ್ಟರ್‌ಗಳಿಂದ ಇಮೇಜ್ ಡೇಟಾವನ್ನು ರವಾನೆ ಮಾಡುತ್ತದೆ. ಕನ್ನಡಕವು 1.70 ರ ವಕ್ರೀಕಾರಕ ಸೂಚ್ಯಂಕವನ್ನು ಹೊಂದಿದೆ. ಇಷ್ಟೇ ಅಲ್ಲದೆ ಏರ್ ಗ್ಲಾಸ್ 3 ಫ್ರೇಮ್‌ಗಳಲ್ಲಿ ಸ್ಪೀಕರ್ ಆಯ್ಕೆ ಸಹ ನೀಡಲಾಗಿದೆ.

ಈ ಸ್ಪೀಕರ್ ಬಳಕೆ ಮಾಡಿಕೊಂಡು ಬಳಕೆದಾರರು ಕರೆಗಳು ಮತ್ತು ಆಪ್‌ಗಳೊಂದಿಗೆ ಸಂವಹನ ನಡೆಸಬಹುದಾಗಿದೆ. ಪ್ರಮುಖ ವಿಷಯ ಏನೆಂದರೆ ಬಳಕೆದಾರರ ಅನುಭವದ ಗೌಪ್ಯತೆ ಮತ್ತು ಗುಣಮಟ್ಟವನ್ನು ಸುಧಾರಿಸಲು, ರಿವರ್ಸ್ ಸೌಂಡ್ ಫೀಲ್ಡ್ ಟೆಕ್ನಾಲಜಿ ಯನ್ನು ಬಳಕೆ ಮಾಡಿದೆ. ಇದರಿಂದಾಗಿ ನಿಮ್ಮ ಸಮೀಪದಲ್ಲಿರುವ ಜನರು ಸಹ ಗ್ಲಾಸ್‌ ಬಳಕೆ ಮಾಡಿಕೊಂಡು ನೀವು ಏನು ಮಾಡುತ್ತಿದ್ದೀರಿ ಅನ್ನೋದನ್ನು ಪತ್ತೆ ಮಾಡಲು ಆಗುವುದಿಲ್ಲ.

ಒಪ್ಪೋ ಏರ್‌ ಗ್ಲಾಸ್‌ 3 ಅನಾವರಣ, ಎಐ ಬೆಂಬಲಿತ ಗ್ಲಾಸ್ ಬಗ್ಗೆ ನಿಮಗೆಷ್ಟು ಗೊತ್ತು?

ಒಪ್ಪೋ ಏರ್ ಗ್ಲಾಸ್ 3 ನ ಪ್ರಸ್ತುತ ಮೂಲಮಾದರಿಯು ಕಲರ್‌ಓಎಸ್‌ 13 ಅಥವಾ ಅದಕ್ಕಿಂತ ಹೆಚ್ಚಿನ ಆಧುನಿಕ ಒಪ್ಪೋ ಫೋನ್‌ಗೆ ಹೊಂದಾಣಿಕೆ ಆಗಲಿದೆ. ಜೊತೆಗೆ ಗ್ಲಾಸ್‌ನ ಪ್ರೇಮ್ ನ ಮೇಲೆ ಟಚ್ ಪ್ಯಾಡ್‌ ಆಯ್ಕೆ ನೀಡಲಾಗಿದ್ದು, ಈ ಮೂಲಕ ಗ್ಲಾಸ್‌ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇದೆಲ್ಲದರ ಜೊತೆಗೆ ವಾಯ್ಸ್‌ ಅಸಿಸ್ಟೆಂಟ್‌ ಸೌಲಭ್ಯವನ್ನೂ ಸಹ ಇದರಲ್ಲಿ ಪಡೆಯಬಹುದಾಗಿದೆ.

ಹಾಗೆಯೇ ಒಪ್ಪೋದ ಸ್ವಂತ ಆಂಡಿಸ್‌ಜಿಪಿಟಿ (AndesGPT) ದೊಡ್ಡ ಭಾಷಾ ಮಾದರಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ. ಆದರೆ, ಇದನ್ನು ಬಳಕೆ ಮಾಡಬೇಕು ಎಂದರೆ ಸ್ಮಾರ್ಟ್‌ಫೋನ್‌ನಲ್ಲಿ ನಿರ್ಧಿಷ್ಟ ಆಪ್‌ ಬಳಕೆ ಮಾಡಬೇಕಾಗುತ್ತದೆ. ಇದು ನಿರ್ವಹಿಸುವ ಕಾರ್ಯಗಳ ಬಗ್ಗೆ ಹೇಳುವುದಾದರೆ ಪ್ರಸ್ತುತ ವಾಯ್ಸ್‌ ಕಾಲ್‌ ಸೌಲಭ್ಯ, ಮ್ಯೂಸಿಕ್‌ ಪ್ಲೇಬ್ಯಾಕ್ ಸೌಲಭ್ಯದ ಜೊತೆಗೆ ಭವಿಷ್ಯದ ಆವೃತ್ತಿಗಳಲ್ಲಿ ಟೆಲಿಪ್ರೊಂಪ್ಟರ್, ನ್ಯಾವಿಗೇಷನ್, ಟೈಮರ್, ಭಾಷಾಂತರ ಮತ್ತು ಆರೋಗ್ಯ ಮತ್ತು ಫಿಟ್‌ನೆಸ್ ಮಾಹಿತಿಯನ್ನು ಸೇರಿಸಲು ಯೋಜಿಸಿದೆ.

ಒಪ್ಪೋ ಏರ್‌ ಗ್ಲಾಸ್‌ 3 ಅನಾವರಣ, ಎಐ ಬೆಂಬಲಿತ ಗ್ಲಾಸ್ ಬಗ್ಗೆ ನಿಮಗೆಷ್ಟು ಗೊತ್ತು?

ಇನ್ನು ಏರ್ ಗ್ಲಾಸ್ 2 ಮಾದರಿಯನ್ನು ಎರಡು ವರ್ಷಗಳ ಹಿಂದೆ ಪ್ರದರ್ಶಿಸಿದ್ದು, ಇದುವರೆಗೆ ಇದರ ಪ್ರಗತಿಯು ಸ್ಥಿರವಾಗಿದೆ. ಜೊತೆಗೆ ಈಗ ಒಪ್ಪೋ ತನ್ನದೇ ಆದ ಎಐ ಕೇಂದ್ರವನ್ನು ಪ್ರಾರಂಭಿಸಿದೆ, ಇದು ಭವಿಷ್ಯದಲ್ಲಿ ಎಆರ್‌ ಮತ್ತು ಎಕ್ಸ್‌ಆರ್‌ ನೊಂದಿಗೆ ಎಐ ಅನ್ನು ಸಂಯೋಜಿಸಲಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಬೆಳವಣಿಗೆಯೊಂದಿಗೆ ಈ ಹೊಸ ಗ್ಲಾಸ್‌ ಅನ್ನು ಯಾವಾಗ ಲಾಂಚ್‌ ಮಾಡಲಾಗುತ್ತದೆ?, ಸಾರ್ವಜನಿಕರಿಗೆ ಯಾವಾಗ ಲಭ್ಯವಾಗುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.

Best Mobiles in India

English summary
Oppo has unveiled its latest Oppo Air Glass 3 at the Mobile World Congress (MWC) 2024. It looks like an ordinary pair of glasses but it is going to be an extraordinary pair of glasses.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+