OPPO: ಒಪ್ಪೋದಿಂದ ವಿಶೇಷ ಸೇಲ್; ಫೋನ್ ಖರೀದಿಸಿ 10 ಲಕ್ಷ ರೂ. ಗೆಲ್ಲಿ!
ಒಪ್ಪೋ (Oppo) ಕಂಪೆನಿಯ ಸ್ಮಾರ್ಟ್ ಡಿವೈಸ್‌ಗಳಿಗೆ ಈಗಾಗಲೇ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ಆಫರ್ ನೀಡಲಾಗಿತ್ತು. ಅಂದರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಹಾಗೂ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023 ನಲ್ಲಿ ಅಗ್ಗದ ದರದಲ್ಲಿ ಒಪ್ಪೋದ ಡಿವೈಸ್‌ಗಳನ್ನು ಖರೀದಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಈಗ ಒಪ್ಪೋ ಸ್ವತಃ ತಾನೇ ವಿಶೇಷ ಸೇಲ್ ಆಯೋಜನೆ ಮಾಡಿದೆ. ಅದೂ ಸಹ ವಿಶೇಷ ಬಹುಮಾನಗಳೊಂದಿಗೆ.
ಹೌದು, ಒಪ್ಪೋ ಇಂಡಿಯಾ (Oppo India) ಅಕ್ಟೋಬರ್ 16, 2023 ರಿಂದ ಒಪ್ಪೋ ವಿಶೇಷ ಆಫರ್ ಅನ್ನು ಪರಿಚಯಿಸಿದೆ. ಈ ಸೇಲ್‌ನಲ್ಲಿ ಗ್ರಾಹಕರು ಒಪ್ಪೋ ಸ್ಮಾರ್ಟ್‌ಫೋನ್ ಖರೀದಿ ಮಾಡಿದರೆ ಆಕರ್ಷಕ ಬಹುಮಾನಗಳನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಸ್ಮಾರ್ಟ್ ಡಿವೈಸ್‌ಗಳಿಗೆ ಡಿಸ್ಕೌಂಟ್ ಅನ್ನು ಸಹ ನೀಡಲಾಗಿದೆ. ಉಳಿದಂತೆ ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಇನ್ನೂ ಅಗ್ಗದ ದರದಲ್ಲಿ ಒಪ್ಪೋ ಫೋನ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಗಿದ್ರೆ, ಏನೆಲ್ಲಾ ಡಿಸ್ಕೌಂಟ್ ಇದೆ, ಬಹುಮಾನಗಳು ಏನೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಒಪ್ಪೋ ಮೆಂಬರ್ಸ್ ಡೇ: ಈ ಸೇಲ್‌ನಲ್ಲಿ(Oppo Member's Day) ಗ್ರಾಹಕರು ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡುವ ಮೂಲಕ 6000ರೂ.ಗಳ ವರೆಗೂ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್‌ಗಳಿಗೆ 10% ತ್ವರಿತ ರಿಯಾಯಿತಿ ಸಹ ಸಿಗಲಿದೆ. ಇಷ್ಟೇ ಅಂದುಕೊಳ್ಳಬೇಡಿ. IoT ಉತ್ಪನ್ನಗಳ ಮೇಲೆ 13000ರೂ.ವರೆಗೂ ನೀವು ಹಣ ಉಳಿತಾಯ ಮಾಡಬಹುದು. ಇದರೊಂದಿಗೆ ಒಪ್ಪೋದ ಇತರೆ ಉತ್ಪನ್ನಗಳಿಗೆ ಬರೋಬ್ಬರಿ 83% ವರೆಗೆ ರಿಯಾಯಿತಿ ನೀಡಲಾಗಿದೆ ಇದರಿಂದಾಗಿ ಅಗ್ಗದ ದರದಲ್ಲಿ ಅತ್ಯುತ್ತಮ ಡಿವೈಸ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.
ಒಪ್ಪೋ ಗ್ರಾಹಕರಿಗೆ ಸಿಗುವ ಬಹುಮಾನಗಳೇನು?: ಈ ವಿಶೇಷ ಸೇಲ್‌ನಲ್ಲಿ ಒಪ್ಪೋ ಗ್ರಾಹಕರು ವಿವಿಧ ಬಹುಮಾನಗಳನ್ನು ಗೆಲ್ಲಲು ಅವಕಾಶ ಇದೆ. ಅಂದರೆ 5 ನಗದು ಬಹುಮಾನ ಗಳನ್ನು ನೀಡಲಾಗುತ್ತದೆ. ಈ ಬಹುಮಾನದಲ್ಲಿ ತಲಾ 10 ಲಕ್ಷ ರೂ. ಸಿಗಲಿದೆ. ಹಾಗೆಯೇ 2 ಮೋಟಾರು ಬೈಕುಗಳು, ಐಸಿಸಿ ಸೆಮಿಫೈನಲ್ ಅಥವಾ ಫೈನಲ್ ಪಂದ್ಯಕ್ಕೆ 9 ಟಿಕೆಟ್‌ಗಳು, 10 ಚಿನ್ನದ ನಾಣ್ಯಗಳು, 5ಒಪ್ಪೋ ಪ್ಯಾಡ್‌ಗಳು, 500+ ಕೂಪನ್‌ಗಳು, ಪ್ರತಿ ಖರೀದಿಯ ಮೇಲೆ 100 ರಿವಾರ್ಡ್ ಪಾಯಿಂಟ್‌ಗಳು ಸಿಗಲಿದೆ.
ಬಹುಮಾನಗಳನ್ನು ಪಡೆದುಕೊಳ್ಳುವುದು ಹೇಗೆ?: ನೀವು ಆಫರ್ ಬೆಲೆಗೆ ಒಪ್ಪೋ ಸ್ಮಾರ್ಟ್‌ಫೋನ್ ಸೇರಿದಂತೆ ಇತರೆ ಡಿವೈಸ್‌ಗಳನ್ನು ಖರೀದಿ ಮಾಡಬೇಕು ಎಂದರೆ ಒಪ್ಪೋದ ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕಿದೆ. ಇದಾದ ನಂತರದಲ್ಲಿ ನನ್ನ ಒಪ್ಪೋ ಖಾತೆ ರಚಿಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಇನ್ನು ಮೈ ಒಪ್ಪೋ ನಲ್ಲಿ 'Me-E-Waranty' ವಿಭಾಗದಲ್ಲಿ ಸಕ್ರಿಯಗೊಳಿಸುವ ದಿನಾಂಕವನ್ನು ಪರಿಶೀಲಿಸಿ.
ಇದೆಲ್ಲಾ ಆದ ಮೇಲೆ ಯಾರೆಲ್ಲಾ ಬಹುಮಾನಕ್ಕೆ ಅರ್ಹರೋ ಅವರನ್ನು ಆಯ್ಕೆ ಮಾಡಿ ಅವರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಐಟಿ ಕಾಯಿದೆ ನಿಯಮಗಳ ಪ್ರಕಾರ ಅನ್ವಯವಾಗುವ ಟಿಡಿಎಸ್ ಅನ್ನು ಈ ವೇಳೆ ಕಡಿತಗೊಳಿಸಲಾಗುತ್ತದೆ. ಎಲ್ಲಾ ವಿಜೇತರಿಗೆ ಇಮೇಲ್ ಮಾಹಿತಿ ನೀಡಲಾಗುತ್ತದೆ ಎಂದು ಒಪ್ಪೋ ಮಾಹಿತಿ ನೀಡಿದೆ. ಇದರೊಂದಿಗೆ ಈ ಮಾಹಿತಿಯನ್ನು ಮೈ ಒಪ್ಪೋ ಆಪ್ ಮೂಲಕವೂ ವೀಕ್ಷಣೆ ಮಾಡಬಹುದು ಎಂದು ತಿಳಿಸಲಾಗಿದೆ. ಈ ವಿಶೇಷ ಸೇಲ್ 24, 2023 ರವರೆಗೆ ಇರಲಿದೆ.

ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಪ್ರಿಯರು ಸಾಕಷ್ಟು ಹಣ ಉಳಿತಾಯ ಮಾಡಬಹುದಾಗಿದೆ. ಅಂದರೆ ಒಪ್ಪೋ ರೆನೋ 5G ಫೋನ್ 38,999ರೂ.ಗಳಾಗಿದ್ದು, ಇದನ್ನು ನೀವು 32,999ರೂ.ಗಳಿಗೆ ಖರೀದಿ ಮಾಡಬಹುದು. ಹಾಗೆಯೇ ಒಪ್ಪೋ A58 ಸ್ಮಾರ್ಟ್‌ಫೋನ್ ಅನ್ನು 14,999ರೂ.ಗಳಿಗೆ, A78 5G ಸ್ಮಾರ್ಟ್‌ಫೋನ್ ಅನ್ನು 18,999ರೂ.ಗಳಿಗೆ, ಒಪ್ಪೋ A38 ಫೋನ್ ಅನ್ನು 12,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








