ಒಪ್ಪೋ ಪರಿಚಯಿಸಲಿದೆ EV ಸ್ಕೂಟರ್!..ಭಾರತದಲ್ಲಿ ಯಾವಾಗ ಲಭ್ಯ?..ಬೆಲೆ ಎಷ್ಟು?

|

ಪೆಟ್ರೋಲ್ ದರ ಹೆಚ್ಚಳದಿಂದಾಗಿ, ಸದ್ಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಈ ನಿಟ್ಟಿನಲ್ಲಿ ಪ್ರಮುಖ ಬೈಕ್ ತಯಾರಿಕಾ ಸಂಸ್ಥೆಗಳು ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸುತ್ತ ಸಾಗಿವೆ. ಅವುಗಳ ಜೊತೆಗೆ ನೂತನ ಸ್ಟಾರ್ಟ್‌ ಅಪ್‌ ಕಂಪನಿಗಳು ಹಾಗೂ ಮೊಬೈಲ್ ತಯಾರಿಕೆ ಕಂಪನಿಗಳು ಸಹ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯತ್ತ ಹೆಜ್ಜೆ ಇಟ್ಟಿವೆ. ಆ ಪೈಕಿ ಪ್ರಮುಖ ಮೊಬೈಲ್ ಸಂಸ್ಥೆಗಳಲ್ಲಿ ಒಂದಾದ ಒಪ್ಪೋ ಇ ಸ್ಕೂಟರ್ ಪರಿಚಯಿಸುವ ಸೂಚನೆ ನೀಡಿದೆ.

ಒಪ್ಪೋ ಪರಿಚಯಿಸಲಿದೆ EV ಸ್ಕೂಟರ್!..ಭಾರತದಲ್ಲಿ ಯಾವಾಗ ಲಭ್ಯ?..ಬೆಲೆ ಎಷ್ಟು?

ಹೌದು, ಒಪ್ಪೋ ಎಲೆಕ್ಟ್ರಿಕ್ ವಾಹನ ತಯಾರಿಕಾ ವಲಯಕ್ಕೆ ಕಾಲಿಡಲು ಸಜ್ಜಾಗಿದೆ. 2024ರಲ್ಲಿ ಒಪ್ಪೋ ಭಾರತದಲ್ಲಿ ಒಪ್ಪೋ EV ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಲಾಂಚ್ ಮಾಡಲು ತಯಾರಿ ನಡೆಸಿದೆ ಎಂದು ವರದಿಯಾಗಿದೆ. ಒಪ್ಪೋ EV ಕುರಿತ ಕೆಲವು ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸದ್ಯ ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ ಎನ್ನಲಾಗಿದೆ. ಈಗಾಗಲೇ ಒಪ್ಪೋ ಕಂಪನಿಯು ಬ್ಯಾಟರಿ ಮತ್ತು ಇತರ ಬಿಡಿ ಭಾಗಗಳ ತಯಾರಕರೊಂದಿಗೆ ಮಾತುಕತೆ ಪ್ರಾರಂಭಿಸಿದೆ ಎನ್ನಲಾಗಿದೆ. ಅಧಿಕೃತವಾಗಿ ಒಪ್ಪೋ ಎಲೆಕ್ಟ್ರಿಕ್ ಸ್ಕೂಟರ್ ಯಾವಾಗ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.

ಒಪ್ಪೋ ಪರಿಚಯಿಸಲಿದೆ EV ಸ್ಕೂಟರ್!..ಭಾರತದಲ್ಲಿ ಯಾವಾಗ ಲಭ್ಯ?..ಬೆಲೆ ಎಷ್ಟು?

ಹಾಗೆಯೇ ಒಪ್ಪೊ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಅದರೊಂದಿಗೆ ಒಪ್ಪೋ EV ಕಾಂಪ್ಯಾಕ್ಟ್ ಕಾರ್ ಅನ್ನು ಸಹ ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ. ಒಪ್ಪೋ EV ಕಾಂಪ್ಯಾಕ್ಟ್ ಕಾರ್ ಟಾಟಾ ನ್ಯಾನೋ ಕಾರಿಗೆ ಹೋಲುತ್ತದೆ ಎನ್ನಲಾಗಿದೆ.

ಒಪ್ಪೋ EV ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಷ್ಟಿರಲಿದೆ?

ಒಪ್ಪೋ EV ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಬರಲಿರುವ ಒಪ್ಪೋ ಎಲೆಕ್ಟ್ರಿಕ್ ಸ್ಕೂಟರ್‌ ಸುಮಾರು 60,000 ರೂ.ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಒಪ್ಪೊ ಕಂಪನಿಯು ಗ್ರಾಹಕ ಸ್ನೇಹಿ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲು ಮುಂದಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಒಪ್ಪೋ ಪರಿಚಯಿಸಲಿದೆ EV ಸ್ಕೂಟರ್!..ಭಾರತದಲ್ಲಿ ಯಾವಾಗ ಲಭ್ಯ?..ಬೆಲೆ ಎಷ್ಟು?

ಬೌನ್ಸ್‌ EV ಸ್ಕೂಟರ್ ಬ್ಯಾಟರಿ ಇಲ್ಲದೆ ಖರೀದಿಸಬಹುದು!

ಬೌನ್ಸ್ ಸಂಸ್ಥೆಯು ಹೊಸ ಎಲೆಕ್ಟ್ರಿಕ್ ವಾಹನವನ್ನು ಇದೇ ಡಿಸೆಂಬರ್ 2 ರಂದು ದೇಶದಲ್ಲಿ ಬಿಡುಗಡೆ ಮಾಡಲಿದೆ. ಅದೇ ದಿನ ಮುಂಗಡ ಬುಕಿಂಗ್ ಸಹ ಪ್ರಾರಂಭವಾಗುತ್ತದೆ. ಹೊಸ ಬೌನ್ಸ್ EV ಸ್ಕೂಟರ್ ಖರೀದಿಸಲು ಇಚ್ಛಿಸುವ ಗ್ರಾಹಕರು ಕೇವಲ 499 ರೂ.ಗೆ ಬುಕ್ ಮಾಡಬಹುದು. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆ ಮುಂದಿನ ವರ್ಷ ಪ್ರಾರಂಭವಾಗುತ್ತವೆ. ಗ್ರಾಹಕರು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬ್ಯಾಟರಿ ಇಲ್ಲದೇ ಖರೀದಿ ಮಾಡಬಹುದಾಗಿದೆ. ಅದೂ ಹೇಗೆ ಅಂತೀರಾ ಮುಂದೆ ಓದಿರಿ.

ಬೌನ್ಸ್ ಸಂಸ್ಥೆಯು ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 'Battery as a service' ಆಯ್ಕೆಯನ್ನು ಸಹ ನೀಡುತ್ತಿದೆ. ಗ್ರಾಹಕರು ಬ್ಯಾಟರಿ ಇಲ್ಲದೆಯೇ ಸ್ಕೂಟರ್ ಅನ್ನು ಖರೀದಿಸಬಹುದಾಗಿದೆ. ಇದರಿಂದ ಗ್ರಾಹಕರ ಬ್ಯಾಟರಿ ಹೊಂದಿರುವ ಸ್ಕೂಟರ್‌ಗಿಂತಲೂ ಶೇ.40 ರಷ್ಟು ಕಡಿಮೆ ವೆಚ್ಚದಲ್ಲಿ ಸ್ಕೂಟರ್ ಲಭ್ಯವಾಗಲಿದೆ. ಇನ್ನು ಬ್ಯಾಟರಿ ಇಲ್ಲದೆ ವಾಹನ ಖರೀದಿಸಿದರೆ ನಂತರ ಬೌನ್ಸ್‌ನ ಬ್ಯಾಟರಿ-ಸ್ವಾಪಿಂಗ್ ನೆಟ್‌ವರ್ಕ್ ಬಳಸಲು ಸಾಧ್ಯ. ಈ ಸೇವೆಯಲ್ಲಿ ಬೌನ್ಸ್‌ನ ಸ್ವಾಪಿಂಗ್ ನೆಟ್‌ವರ್ಕ್‌ನಿಂದ ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯೊಂದಿಗೆ ಖಾಲಿ ಬ್ಯಾಟರಿಯನ್ನು ವಿನಿಮಯ ಮಾಡಿಕೊಂಡಾಗ ಬ್ಯಾಟರಿ ಸ್ವಾಪ್‌ಗಳಿಗೆ ಮಾತ್ರ ಪಾವತಿಸಲು ಸಾಧ್ಯವಾಗುತ್ತದೆ.

ಬೌನ್ಸ್ ಸಂಸ್ಥೆಯ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಡಿಟ್ಯಾಚೇಬಲ್ ಲಿಥಿಯಂ-ಐಯಾನ್ ಬ್ಯಾಟರಿ ಅನ್ನು ಒಳಗೊಂಡಿರಲಿದೆ. ಗ್ರಾಹಕರು ಅಗತ್ಯವಿದ್ದರೆ ಈ ಬ್ಯಾಟರಿಯನ್ನು ಸ್ಕೂಟರ್‌ನಿಂದ ತೆಗೆಯಬಹುದು. ಅಲ್ಲದೇ ಅವರ ಅಗತ್ಯಕ್ಕೆ ಅನುಗುಣವಾಗಿ ಚಾರ್ಜ್ ಮಾಡಬಹುದು.

ಬೌನ್ಸ್ ಸಂಸ್ಥೆಯ ನೂತನ ಹೊಸ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯ ಮಾಹಿತಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಈ ಸ್ಕೂಟರ್ ಇದೇ ಡಿಸೆಂಬರ್ 2 ರಂದು ಭಾರತದಲ್ಲಿ ಅನಾವರಣ ಮಾಡಲಿದೆ. ಇನ್ನು ಬರಲಿರುವ ಈ ಹೊಸ ಇ ಸ್ಕೂಟರ್ ಓಲಾ ಇವಿ ಸ್ಕೂಟರ್ ಸೇರಿದಂತೆ ಕೆಲವು ಜನಪ್ರಿಯ ಇವಿ ಸ್ಕೂಟರ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ಮಾಡಲಿದೆ ಎಂದು ಹೇಳಲಾಗುತ್ತಿದೆ.

Most Read Articles
Best Mobiles in India

English summary
OPPO Electric Scooter Price Tipped; May Launch in India By 2024.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X