Home
ಸುದ್ದಿಜಾಲ

Oppo Enco Air3 : ಒಪ್ಪೋ ಎನ್ಕೋ ಏರ್‌ 3 ಇಯರ್‌ಬಡ್ಸ್‌ ಅನಾವರಣ; ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ತಿಳಿಯಿರಿ!

ಸ್ಮಾರ್ಟ್ ಗ್ಯಾಜೆಟ್‌ ತಯಾರಿಕಾ ಸಂಸ್ಥೆಗಳಲ್ಲಿ ಒಪ್ಪೋ ಸಹ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿರುವ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆಯು ಈಗಾಗಲೇ ಹಲವಾರು ಸ್ಮಾರ್ಟ್‌ಫೋನ್‌, ಇಯರ್‌ಫೋನ್, ಪವರ್‌ ಬ್ಯಾಂಕ್‌ ಸೇರಿದಂತೆ ಇನ್ನಿತರೆ ಸ್ಮಾರ್ಟ್‌ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇದರ ನಡುವೆ ಈಗ ಒಪ್ಪೋ ಒಂದೇ ಬಾರಿಗೆ ಹೊಸ ಸ್ಮಾರ್ಟ್‌ಫೋನ್‌ ಹಾಗೂ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಿದೆ.

ಒಪ್ಪೋ ಎನ್ಕೋ ಏರ್‌ 3 ಇಯರ್‌ಬಡ್ಸ್‌ ಅನಾವರಣ; ಬೆಲೆ ,ಫೀಚರ್ಸ್‌ ಬಗ್ಗೆ ತಿಳಿಯಿರಿ!

ಹೌದು, ಒಪ್ಪೋ ಬಹು ನಿರೀಕ್ಷಿತ ರೆನೊ8T 5G ಸ್ಮಾರ್ಟ್‌ಫೋನ್ ಲಾಂಚ್‌ ಸಮಾರಂಭದಲ್ಲಿಯೇ ಒಪ್ಪೋ ಎನ್ಕೋ ಏರ್‌ 3 ಇಯರ್‌ಬಡ್ಸ್‌ (Enco Air 3 earbuds) ಅನ್ನು ಅನಾವರಣ ಮಾಡಿದೆ. ಈ ಇಯರ್‌ಬಡ್ಸ್‌ ಡಿಜಿಟಲ್ ಸಿಗ್ನಲ್ ಪ್ರೊಸೆಸರ್ ಆಯ್ಕೆ ಹೊಂದಿರುವ ಟಾಪ್ ಆಫ್-ಲೈನ್ TWS ಆಗಿ ಇದು ಗುರುತಿಸಿಕೊಂಡಿದೆ. ಹಾಗೆಯೇ ಬ್ಲೂಟೂತ್ ಆವೃತ್ತಿ 5.3 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಿದ್ರೆ, ಈ ಡಿವೈಸ್‌ನ ಪ್ರಮುಖ ಫೀಚರ್ಸ್‌ ಹಾಗೂ ಬಾರತದಲ್ಲಿ ಇದರ ಬೆಲೆ ಎಷ್ಟೆಂದು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಎನ್ಕೋ ಏರ್‌ 3 ಪ್ರಮುಖ ಫೀಚರ್ಸ್

ಒಪ್ಪೋ ಎನ್ಕೋ ಏರ್‌3 ಇಯರ್‌ಬಡ್ಸ್‌ ಬಳಕೆದಾರರಿಗೆ ಉತ್ತಮ ಅನುಭವ ನೀಡಲು 13.4mm ಡ್ರೈವರ್‌ಗಳು ಮತ್ತು ಕ್ಯಾಡೆನ್ಸ್ HiFi5 DSP (ಡಿಜಿಟಲ್ ಸಿಗ್ನಲ್ ಪ್ರೊಸೆಸರ್) ಸೌಲಭ್ಯವನ್ನು ಪಡೆದುಕೊಂಡಿದೆ. ಈ ಮೂಲಕ ಒಪ್ಪೋದ ಟಾಪ್ ಆಫ್ ಲೈನ್ TWS ಆಗಿ ಇದು ಹೆಸರು ಪಡೆಯಲಿದೆ. ಇನ್ನು 47ms ಕಡಿಮೆ ಲೇಟೆನ್ಸಿ ಮೋಡ್ ಆಯ್ಕೆ ಇರುವುದರಿಂದ ಗೇಮಿಂಗ್‌ ಸಮಯದಲ್ಲಿ ಅತ್ಯುತ್ತಮವಾದ ಆಡಿಯೋ ಅನುಭವವನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ ಸಿಬಿಎಸ್‌ ಮತ್ತು ಎಎಸಿ ಕೊಡೆಕ್‌ಗಳು ಮತ್ತು ಥಿಯೇಟರ್ ತರಹದ ಅನುಭವಕ್ಕಾಗಿ ಒಪ್ಪೋ ಲೈವ್ ಆಡಿಯೊ ಫೀಚರ್ಸ್‌ ಅನ್ನು ಈ ಇಯರ್‌ಬಡ್ಸ್‌ ಪಡೆದುಕೊಂಡಿದ್ದು, ಇನ್ನುಳಿದಂತೆ ಬ್ಲೂಟೂತ್ ಆವೃತ್ತಿ 5.3 ನಲ್ಲಿ ಕಾರ್ಯನಿರ್ವಹಿಸುವ ಈ ಇಯರ್‌ಬಡ್ಸ್‌ ಯಾವುದೇ ಡಿವೈಸ್‌ಗಳಿಗೆ ಎರಡು ರೀತಿಯಲ್ಲಿ ಸಂಪರ್ಕಗೊಳ್ಳುತ್ತದೆ.

ಒಪ್ಪೋ ಎನ್ಕೋ ಏರ್‌ 3 ಇಯರ್‌ಬಡ್ಸ್‌ ಅನಾವರಣ; ಬೆಲೆ ,ಫೀಚರ್ಸ್‌ ಬಗ್ಗೆ ತಿಳಿಯಿರಿ!

ಇದರ ಶೈಲಿಯ ವಿಚಾರಕ್ಕೆ ಬಂದರೆ ಒಪ್ಪೋದ ಹಳೆಯ ವಿನ್ಯಾಸವನ್ನೇ ಹೊಂದಿದೆಯಾದರೂ ಸ್ವಲ್ಪ ನವೀಕರಣಗಳು ಕಂಡುಬಂದಿವೆ. ಅಂದರೆ, ಚಾರ್ಜಿಂಗ್‌ ಕೇಸ್‌ನ ಮುಚ್ಚಳವು ಸ್ವಲ್ಪ ದೊಡ್ಡದಾಗಿದ್ದು, ವಿಶೇಷ ರೀತಿಯಲ್ಲಿ ಆಕರ್ಷಿಸುತ್ತದೆ. ಅದರಲ್ಲೂ ಇದು ಟ್ರಾನ್ಪರೆಂಟ್ ಆಗಿರುವುದು ಇನ್ನಷ್ಟು ವಿಶೇಷ. ಇದರೊಂದಿಗೆ ಬಡ್ಸ್‌ಗಳು ಇನ್‌ ಇಯರ್‌ ವಿನ್ಯಾಸವನ್ನು ಪಡೆದುಕೊಂಡಿರುವುದರಿಂದ ಕಿವಿಗೆ ಯಾವುದೇ ನೋವು ಹಾಗೂ ಇನ್ನಿತರೆ ಸಾಮಾನ್ಯ ಸಮಸ್ಯೆ ಬಾರದಂತೆ ತಡೆಯುತ್ತವೆ. ಹಾಗೆಯೇ ಸ್ಪಷ್ಟ ಆಡಿಯೋ ಆಲಿಸಲು ಸುಲಭವಾಗುತ್ತದೆ.

ಇದಿಷ್ಟೇ ಅಲ್ಲದೆ, ಈ ಇಯರ್‌ಬಡ್ಸ್‌ಗಳು ಟಚ್‌ ಕಂಟ್ರೋಲ್‌ ಫೀಚರ್ಸ್‌ ಪಡೆದುಕೊಂಡಿರುವುದು ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲು ಸಹಕಾರಿ. ಇದರೊಂದಿಗೆ ಕರೆ ಸಂದರ್ಭದಲ್ಲಿ ಡಿಎನ್‌ಎಮ್‌ ನಾಯ್ಸ್‌ ಕ್ಯಾನ್ಸಲಿಂಗ್‌ಫೀಚರ್ಸ್‌ ಪಡೆದುಕೊಂಡಿರುವುದರ ಜೊತೆಗೆ ಗೂಗಲ್‌ ಫಾಸ್ಟ್ ಪೇರ್ ಬೆಂಬಲ ಮತ್ತು ಇನ್ನೂ ಹೆಚ್ಚಿನ ಗಮನಾರ್ಹ ಸೌಲಭ್ಯವನ್ನು ಈ ಇಯರ್‌ಬಡ್ಸ್‌ ಪಡೆದುಕೊಂಡಿದೆ. ಮತ್ತು IP54 ರೇಟಿಂಗ್ ಇರುವುದರಿಂದ ವಾಟರ್‌ ಹಾಗೂ ಡಸ್ಟ್ ಬಗ್ಗೆ ಚಿಂತೆ ಮಾಡುವ ಅಗತ್ಯ ಇಲ್ಲ.

ಒಪ್ಪೋ ಎನ್ಕೋ ಏರ್‌ 3 ಇಯರ್‌ಬಡ್ಸ್‌ ಅನಾವರಣ; ಬೆಲೆ ,ಫೀಚರ್ಸ್‌ ಬಗ್ಗೆ ತಿಳಿಯಿರಿ!

ಎನ್ಕೋ ಏರ್‌ 3 ಬ್ಯಾಟರಿ ಸಾಮರ್ಥ್ಯ

ಒಪ್ಪೋ ಎನ್ಕೋ ಏರ್‌3 ಇಯರ್‌ಬಡ್ಸ್‌ ಅನ್ನು 10 ನಿಮಿಷ ಚಾರ್ಜ್‌ ಮಾಡಿದರೆ 2 ಗಂಟೆಗಳ ವರೆಗೆ ಸಂಗೀತ ಆಲಿಸಬಹುದಾಗಿದೆ. ಇನ್ನು ಒಂದು ಪೂರ್ಣ ಚಾರ್ಜ್‌ನಲ್ಲಿ 25 ಗಂಟೆಗಳ ಪ್ಲೇ ಬ್ಯಾಕ್‌ ನೀಡುವುದು ಈ ಇಯರ್‌ಬಡ್ಸ್‌ನ ಮತ್ತಷ್ಟು ವಿಶೇಷತೆಗಳಲ್ಲಿ ಒಂದು.

ಎನ್ಕೋ ಏರ್‌ 3 ಬೆಲೆ ಹಾಗೂ ಲಭ್ಯತೆ

ಒಪ್ಪೋ ಎನ್ಕೋ ಏರ್‌3 ಇಯರ್‌ಬಡ್ಸ್‌ಗೆ ಭಾರತದಲ್ಲಿ 2,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಇನ್ನು ಈ ಇಯರ್‌ಬಡ್ಸ್‌ ಅನ್ನು ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಒಪ್ಪೋ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ. ಆದರೆ, ಇದನ್ನು ಖರೀದಿ ಮಾಡಬೇಕಾದರೆ ನೀವು ಕೆಲವು ದಿನಗಳು ಕಾಯಬೇಕು. ಯಾಕೆಂದರೆ ಫೆಬ್ರವರಿ 10, 2023 ರಿಂದ ಈ ಡಿವೈಸ್‌ ಮಾರಾಟಕ್ಕೆ ಲಭ್ಯವಿರುತ್ತದೆ.

Best Mobiles in India

English summary
Oppo launched Enco Air 3 earbuds. These earbuds have got Oppo Live Audio features for a theater-like experience. Here are the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+