Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒಪ್ಪೊದ ಹೊಸ 'ನಾಯಿಸ್‌ಲೆಸ್ ಇಯರ್‌ಫೋನ್' ಅನಾವರಣ!..ಬೆಲೆ?
ಒಪ್ಪೊ ಸಂಸ್ಥೆಯು ಹಲವು ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರ ಮನಗೆದ್ದಿದ್ದು ಹಾಗೆಯೇ ರೆನೋ ಸರಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದೆ. ಇದೇ ಅಗಷ್ಟ್ 28ರಂದು ರೆನೋ ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಇವುಗಳೊಂದಿಗೆ ಹೊಸ ನಾಯಿಸ್‌ಲೆಸ್ ಇಯರ್‌ಫೋನ್ ಅನ್ನು ಸಹ ಬಿಡುಗಡೆ ಮಾಡಿ ಮಾರುಕಟ್ಟೆಗೆ ದೊಡ್ಡ ಅಚ್ಚರಿ ನೀಡಿದೆ.

ಹೌದು, ಒಪ್ಪೊ ಕಂಪನಿಯು ಇತ್ತೀಚಿಗೆ ಚೀನಾದಲ್ಲಿ ಲಾಂಚ್ ಮಾಡಿದ್ದ 'ಒಪ್ಪೊ Enco Q1' ವಾಯರ್‌ಲೆಸ್ ಮತ್ತು ನಾಯಿಸ್‌ಲೆಸ್ ಇಯರ್‌ಫೋನ್ ಅನ್ನು ಇದೀಗ ಭಾರತೀಯ ಮಾರುಕಟ್ಟೆಗೂ ಬಿಡುಗಡೆ ಮಾಡಿದೆ. ಈ ಇಯರ್‌ಫೋನ್ ಹೈಬ್ರಿಡ್ ನಾಯಿಸ್ ಕ್ಯಾನ್ಸ್‌ಲೇಶನ್ ತಂತ್ರಜ್ಞಾನವನ್ನು ಹೊಂದಿದ್ದು, 3D ನೆಕ್‌ಬ್ಯಾಂಡ್ ಡಿಸೈನ್ ವಿನ್ಯಾಸ್‌ದಲ್ಲಿದೆ. ಹಾಗೆಯೇ 22ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಸಹ ಪಡೆದುಕೊಂಡಿದೆ. ಹಾಗಾದರೇ ಒಪ್ಪೊ ಇಯರ್‌ಫೋನ್ ಇತರೆ ವಿಶೇಷಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಇಯರ್‌ಫೋನ್ ರಚನೆ
ಒಪ್ಪೊ ರೆನೋ ಹೊಸ ಇಯರ್‌ಫೋನ್ ಆಕರ್ಷಕ ನೋಟವನ್ನು ಹೊಂದಿದ್ದು, ಇದರ ನೆಕ್‌ಬ್ಯಾಂಡ್ ಡಿಸೈನ್ 3D ಆಕಾರದಲ್ಲಿದೆ. ತೂಕವು ಹಗುರವಾಗಿದ್ದು, ಕಾಲರ್ ಡಿಸೈನ್ ಸ್ಟೈಲ್ ಲುಕ್ ಸಹ ಉತ್ತಮವಾಗಿದೆ. ಧರಿಸಲು ಕಂಫರ್ಟ್ ಎನಿಸಲಿದೆ. ಇಯರ್‌ಫೋನ್ 11.8 mm ರಚನೆಯನ್ನು ಪಡೆದಿದ್ದು, ( FF+FB) ನಾಯಿಸ್ ತಡೆಯಲು, ನಾಲ್ಕು ಮೈಕ್ರೊಫೋನ್ಸ್‌ಗಳನ್ನು ನೀಡಲಾಗಿದೆ.

ವಿಶೇಷ ಫೀಚರ್ಸ್‌ಗಳು
ಒಪ್ಪೊ ಇಯರ್‌ಫೋನ್ IPX4 ಸೌಲಭ್ಯವನ್ನು ಪಡೆದಿದ್ದು, ವಾಟರ್‌ಪ್ರೊಫ್ ರಚನೆಯನ್ನು ಒಳಗೊಂಡಿದೆ. ಡೈನಾಮಿಕ್ ಸೌಂಡ್ ಡ್ರೈವರ್‌ಗಳನ್ನು ಒಳಗೊಂಡಿದ್ದು, ಔಟ್‌ಪುಟ್ ಸೌಂಡ್ ಕ್ವಾಲಿಟಿಯು ಅತ್ಯುತ್ತಮವಾಗಿರಲಿದೆ. ಬ್ಯಾಕ್‌ಗ್ರೌಂಡ್ ನಾಯಿಸ್ ತಡೆಗಟ್ಟುವ ಸಲುವಾಗಿ ENC ತಂತ್ರಜ್ಞಾನ ಅಳವಡಿಸಲಾಗಿದ್ದು, ಹಾಗೆಯೇ ಹೈಬ್ರಿಡ್ ನಾಯಿಸ್ ಕ್ಯಾನ್ಸ್‌ಲೇಶನ್ ಟೆಕ್ನಾಲಜಿಯನ್ನು ಪಡೆದಿದೆ.

ಬ್ಯಾಟರಿ ಲೈಫ್
ಒಪ್ಪೊ ಸಂಸ್ಥೆಯ ಹೊಸ Enco Q1 ವಾಯರ್‌ಲೆಸ್ ಮತ್ತು ನಾಯಿಸ್‌ಲೆಸ್ ಇಯರ್‌ಫೋನ್ ಅತ್ಯುತ್ತಮ ಬ್ಯಾಟರಿ ಪವರ್ ಪಡೆದಿದೆ. ಒಮ್ಮೆ ಫುಲ್ ಚಾರ್ಜ್ ಮಾಡಿದರೇ ಸುಮಾರು 15ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದ್ದು, ನಾಯಿಸ್ ಕ್ಯಾನ್ಸ್‌ಲೇಶನ್ ಆಯ್ಕೆಯನ್ನು ಆಫ್ ಮಾಡಿ ಬಳಕೆ ಮಾಡಿದರೇ ಸುಮಾರು 22 ಗಂಟೆಗಳ ಬ್ಯಾಟರಿ ಲೈಫ್ ಬರಲಿದೆ. ಹಾಗೆಯೇ ಯುಎಸ್‌ಬಿ-ಸಿ ಚಾರ್ಜಿಂಗ್ ಪೋರ್ಟ್ ಆಯ್ಕೆ ಇದೆ.

ಬೆಲೆ ಮತ್ತು ಲಭ್ಯತೆ
ಒಪ್ಪೊ ರೆನೊ 2 ಸರಣಿಯೊಂದಿಗೆ Enco Q1 ವಾಯರ್‌ಲೆಸ್ ಮತ್ತು ನಾಯಿಸ್‌ಲೆಸ್ ಇಯರ್‌ಫೋನ್ ಡಿವೈಸ್ 7,990ರೂ.ಗಳ ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ. ವೈಟ್, ಬ್ಲ್ಯಾಕ್ ಮತ್ತು ಆರೇಂಜ್ ಬಣ್ಣಗಳ ಆಯ್ಕೆ ಹೊಂದಿರುವ ಈ ಇಯರ್‌ಫೋನ್ ಜನಪ್ರಿಯ ಇ ಕಾಮರ್ಸ್ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ತಾಣಗಳಲ್ಲಿ ಶೀಘ್ರದಲ್ಲೇ ಗ್ರಾಹಕರ ಖರೀದಿಗೆ ದೊರೆಯಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470