ಶಾಶ್ವತ ಬೆಲೆ ಇಳಿಕೆ ಕಂಡ ಒಪ್ಪೊ ಎನ್‌ಕೋ W31 ಮತ್ತು ಎನ್‌ಕೋ M31 ಹೆಡ್‌ಫೋನ್!

|

ಒಪ್ಪೋ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಎನ್‌ಕೋ W31 ಮತ್ತು ಎನ್‌ಕೋ M31 ಇಯರ್‌ಫೋನ್‌ಗಳ ಬೆಲೆಯಲ್ಲಿ ಇದೀಗ ಮತ್ತೆ ಭಾರಿ ಕಡಿತ ಆಗಿದೆ. ಎನ್‌ಕೋ M31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಬೆಲೆಯಲ್ಲಿ 500ರೂ. ಇಳಿಕೆ ಆಗಿದೆ. ಅದೇ ರಿತಿ ಎನ್ಕೊ W31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಬೆಲೆಯಲ್ಲಿ ಸಹ ಈಗ 500ರೂ. ಇಳಿಕೆ ಆಗಿದೆ.

ಇಯರ್‌ಫೋನ್‌

ಒಪ್ಪೊ ಕಂಪನಿಯ ಈ ಎರಡು ಇಯರ್‌ಫೋನ್‌ ಮ್ಯೂಸಿಕ್ ಪ್ರಿಯ ಗ್ರಾಹಕರನ್ನು ಆಕರ್ಷಿಸಿದ್ದವು. ಆದರೆ ಇದೀಗ 500ರೂ. ಬೆಲೆ ಇಳಿಕೆ ಪಡೆದಿದ್ದು, ಹೆಚ್ಚಿನ ಗಮನ ಸೆಳೆಯಲಿವೆ. ಈ ಎರಡು ಆಡಿಯೊ ಪ್ರಾಡಕ್ಟ್‌ಗಳ ಧೂಳು ಮತ್ತು ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನ ಒಳಗೊಂಡಿವೆ. ಹಾಗೆಯೇ ನಾಯ್ಸ್‌ ಕ್ಯಾನ್ಸೆಲೇಶನ್‌, ಸೌಂಡ್‌ ಗುಣಮಟ್ಟ, ಮೈಕ್ರೊಫೋನ್ ವ್ಯವಸ್ಥೆಯನ್ನು ಪಡೆದಿವೆ. ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯಿರಿ.

ವಾಯರ್‌ಲೆಸ್‌

ಎನ್ಕೊ W31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಕಡಿಮೆ ಲೇಟೆನ್ಸಿ ಟ್ರಾನ್ಸ್‌ಮಿಷನ್‌ ಇನ್-ಇಯರ್ ವಿನ್ಯಾಸವನ್ನು ಹೊಂದಿದೆ. ಇದರ ವಿನ್ಯಾಸವು ನಿಮ್ಮ ಕಿವಿಗಳ ಒಳಗೆ ಸಿಲಿಕೋನ್ ಕಿವಿ ಸುಳಿವುಗಳೊಂದಿಗೆ ಸುರಕ್ಷಿತವಾಗಿ ಕೂರುವುದಕ್ಕೆ ಅನುಕೂಲವಾಗಿದೆ. ಇದಲ್ಲದೆ ಈ ಇಯರ್‌ಫೋನ್‌ಗಳು ಧೂಳು ಮತ್ತು ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನ ಹೊಂದಿದೆ. ಅಲ್ಲದೆ ಎನ್‌ಕೋ W31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಎರಡು ವಾಯ್ಸ್‌ ಮೋಡ್,ಅನ್ನು ಹೊಂದಿದೆ. ಇದರಲ್ಲಿ ನ್ಯಾಚುರಲ್‌ ಸೌಂಡ್‌ ಪ್ರೊಫೈಲ್ ಮತ್ತು ಬಾಸ್-ಬೂಸ್ಟ್ ಮೋಡ್ ಅನ್ನು ಒಳಗೊಂಡಿದೆ. ಅಲ್ಲದೆ ವಾಯ್ಸ್‌ ಕಾಲ್‌ಗಳ ಸಮಯದಲ್ಲಿ ನಾಯ್ಸ್‌ ಕ್ಯಾನ್ಸೆಲೇಶನ್‌ ಸಾಧಿಸಲು ಎರಡೂ ಸ್ಪೀಕರ್‌ಗಳು ಕೂಡ ಎರಡು ಮೈಕ್ರೊಫೋನ್‌ಗಳನ್ನು ಒಳಗೊಂಡಿವೆ.

ನೆಕ್‌ಬ್ಯಾಂಡ್

ಎನ್‌ಕೋ M31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ನೆಕ್‌ಬ್ಯಾಂಡ್ ಶೈಲಿಯ ಮಾದರಿಯನ್ನ ಹೊಂದಿದೆ. ಇದು ಉತ್ತಮ ಗುಣಮಟ್ಟದ ಆಡಿಯೊಗಾಗಿ ಎಲ್‌ಡಿಎಸಿ ಜೊತೆಗೆ ಬ್ಲೂಟೂತ್ 5.0 ಅನ್ನು ಒಳಗೊಂಡಿದೆ. ಇದರಲ್ಲಿ ಪಿಇಟಿ ಟೈಟಾನಿಯಂ ಕಾಂಪೋಸಿಟ್ ಡಯಾಫ್ರಾಮ್‌ಗಳನ್ನ ನೀಡಲಾಗಿದೆ. ಅಲ್ಲದೆ ಸ್ವತಂತ್ರ ಬಾಸ್ ಚೇಂಬರ್ಸ್‌ಜೊತೆಗೆ 9.2mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದಲ್ಲದೆ ಕರೆಗಳ ಸಮಯದಲ್ಲಿ ಶಬ್ದ ಮತ್ತು ಮಾನವ ಧ್ವನಿಯನ್ನು ಪ್ರತ್ಯೇಕಿಸಲು ಶಬ್ದ ಕಡಿತ ವೈಶಿಷ್ಟ್ಯವನ್ನು ಇದರಲ್ಲಿರುವ AI ಟೆಕ್ನಾಲಜಿ ನೋಡಿಕೊಳ್ಳಲಿದೆ. ಇನ್ನು ಈ ನೆಕ್‌ಬ್ಯಾಂಡ್‌ ಅನ್ನು ದ್ರವ ಸಿಲಿಕೋನ್ ರಬ್ಬರ್‌ನಲ್ಲಿ ಮುಚ್ಚಿದ ಆಕಾರ-ಮೆಮೊರಿ ಲೋಹದಿಂದ ತಯಾರಿಸಲಾಗಿದೆ.

M31

ಒಪ್ಪೊ ಎನ್‌ಕೋ M31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಬೆಲೆ 3,499 ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಒಪ್ಪೊ ಎನ್ಕೊ W31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಬೆಲೆ ಇದೀಗ 1999 ರೂ ಆಗಿದೆ. ಇನ್ನು ಈ ಡಿವೈಸ್‌ಗಳಿ ಕಪ್ಪು ಅಥವಾ ಬಿಳಿ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
Oppo Enco W31 and Enco M31 are now available on Amazon and Flipkart.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X