Home
ಸುದ್ದಿಜಾಲ

ಒಪ್ಪೊ ಎನ್‌ಕೋ W31 ಮತ್ತು ಎನ್‌ಕೋ M31 ಇಯರ್‌ಫೋನ್‌ಗಳ ಬೆಲೆ ಇಳಿಕೆ!

ಒಪ್ಪೋ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಎನ್‌ಕೋ W31 ಮತ್ತು ಎನ್‌ಕೋ M31 ಇಯರ್‌ಫೋನ್‌ಗಳ ಬೆಲೆಯಲ್ಲಿ ಇದೀಘ ತಾತ್ಕಾಲಿಕ ಕಡಿತ ಆಗಿದೆ. ಎನ್‌ಕೋ M31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಬೆಲೆಯಲ್ಲಿ 1000ರೂ. ಇಳಿಕೆ ಆಗಿದೆ. ಅದೇ ರಿತಿ ಎನ್ಕೊ W31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಬೆಲೆಯಲ್ಲಿ ಈಗ 700ರೂ. ಇಳಿಕೆ ಆಗಿದೆ.

ಇಯರ್‌ಫೋನ್‌

ಒಪ್ಪೊ ಸಂಸ್ಥೆಯ ಈ ಎರಡು ಇಯರ್‌ಫೋನ್‌ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸಿದ್ದವು. ಆದರೆ ಇದೀಗ ತಾತ್ಕಾಲಿಕ ಬೆಲೆ ಇಳಿಕೆ ಪಡೆದಿದ್ದು ಗಮನ ಸೆಳೆದಿದೆ. ಈ ಎರಡು ಆಡಿಯೊ ಪ್ರಾಡಕ್ಟ್‌ಗಳ ಧೂಳು ಮತ್ತು ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನ ಒಳಗೊಂಡಿವೆ. ಹಾಗೆಯೇ ನಾಯ್ಸ್‌ ಕ್ಯಾನ್ಸೆಲೇಶನ್‌, ಸೌಂಡ್‌ ಗುಣಮಟ್ಟ, ಮೈಕ್ರೊಫೋನ್ ವ್ಯವಸ್ಥೆಯನ್ನು ಪಡೆದಿವೆ. ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯಿರಿ.

ವಾಯರ್‌ಲೆಸ್‌

ಎನ್ಕೊ W31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಕಡಿಮೆ ಲೇಟೆನ್ಸಿ ಟ್ರಾನ್ಸ್‌ಮಿಷನ್‌ ಇನ್-ಇಯರ್ ವಿನ್ಯಾಸವನ್ನು ಹೊಂದಿದೆ. ಇದರ ವಿನ್ಯಾಸವು ನಿಮ್ಮ ಕಿವಿಗಳ ಒಳಗೆ ಸಿಲಿಕೋನ್ ಕಿವಿ ಸುಳಿವುಗಳೊಂದಿಗೆ ಸುರಕ್ಷಿತವಾಗಿ ಕೂರುವುದಕ್ಕೆ ಅನುಕೂಲವಾಗಿದೆ. ಇದಲ್ಲದೆ ಈ ಇಯರ್‌ಫೋನ್‌ಗಳು ಧೂಳು ಮತ್ತು ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನ ಹೊಂದಿದೆ. ಅಲ್ಲದೆ ಎನ್‌ಕೋ W31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಎರಡು ವಾಯ್ಸ್‌ ಮೋಡ್,ಅನ್ನು ಹೊಂದಿದೆ. ಇದರಲ್ಲಿ ನ್ಯಾಚುರಲ್‌ ಸೌಂಡ್‌ ಪ್ರೊಫೈಲ್ ಮತ್ತು ಬಾಸ್-ಬೂಸ್ಟ್ ಮೋಡ್ ಅನ್ನು ಒಳಗೊಂಡಿದೆ. ಅಲ್ಲದೆ ವಾಯ್ಸ್‌ ಕಾಲ್‌ಗಳ ಸಮಯದಲ್ಲಿ ನಾಯ್ಸ್‌ ಕ್ಯಾನ್ಸೆಲೇಶನ್‌ ಸಾಧಿಸಲು ಎರಡೂ ಸ್ಪೀಕರ್‌ಗಳು ಕೂಡ ಎರಡು ಮೈಕ್ರೊಫೋನ್‌ಗಳನ್ನು ಒಳಗೊಂಡಿವೆ.

M31 ಟ್ರೂಲಿ

ಎನ್‌ಕೋ M31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ನೆಕ್‌ಬ್ಯಾಂಡ್ ಶೈಲಿಯ ಮಾದರಿಯನ್ನ ಹೊಂದಿದೆ. ಇದು ಉತ್ತಮ ಗುಣಮಟ್ಟದ ಆಡಿಯೊಗಾಗಿ ಎಲ್‌ಡಿಎಸಿ ಜೊತೆಗೆ ಬ್ಲೂಟೂತ್ 5.0 ಅನ್ನು ಒಳಗೊಂಡಿದೆ. ಇದರಲ್ಲಿ ಪಿಇಟಿ ಟೈಟಾನಿಯಂ ಕಾಂಪೋಸಿಟ್ ಡಯಾಫ್ರಾಮ್‌ಗಳನ್ನ ನೀಡಲಾಗಿದೆ. ಅಲ್ಲದೆ ಸ್ವತಂತ್ರ ಬಾಸ್ ಚೇಂಬರ್ಸ್‌ಜೊತೆಗೆ 9.2mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದಲ್ಲದೆ ಕರೆಗಳ ಸಮಯದಲ್ಲಿ ಶಬ್ದ ಮತ್ತು ಮಾನವ ಧ್ವನಿಯನ್ನು ಪ್ರತ್ಯೇಕಿಸಲು ಶಬ್ದ ಕಡಿತ ವೈಶಿಷ್ಟ್ಯವನ್ನು ಇದರಲ್ಲಿರುವ AI ಟೆಕ್ನಾಲಜಿ ನೋಡಿಕೊಳ್ಳಲಿದೆ. ಇನ್ನು ಈ ನೆಕ್‌ಬ್ಯಾಂಡ್‌ ಅನ್ನು ದ್ರವ ಸಿಲಿಕೋನ್ ರಬ್ಬರ್‌ನಲ್ಲಿ ಮುಚ್ಚಿದ ಆಕಾರ-ಮೆಮೊರಿ ಲೋಹದಿಂದ ತಯಾರಿಸಲಾಗಿದೆ.

ಇಯರ್‌ಫೋನ್‌

ಒಪ್ಪೊ ಎನ್‌ಕೋ M31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಬೆಲೆ 3999 ರೂ. ಆಗಿದ್ದು, ಈಗ 1000ರೂ ಕಡಿತವಾಗಿದೆ. ಹಾಗೆಯೇ ಒಪ್ಪೊ ಎನ್ಕೊ W31 ಟ್ರೂಲಿ ವಾಯರ್‌ಲೆಸ್‌ ಇಯರ್‌ ಫೋನ್‌ ಬೆಲೆ 1999 ರೂ ಆಗಿದ್ದು, ಈಗ 700ರೂ ಇಳಿಕೆ ಆಗಿದೆ. ಇನ್ನು ಈ ಡಿವೈಸ್‌ಗಳಿ ಕಪ್ಪು ಅಥವಾ ಬಿಳಿ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಬೆಲೆ ಇಳಿಕೆಯು ತಾತ್ಕಾಲಿಕ ಅವಧಿವು ಇದೇ ಜುಲೈ 15ರ ವರೆಗೂ ಇರಲಿದೆ ಎನ್ನಲಾಗಿದೆ.

Best Mobiles in India

English summary
The two wireless headphones will be listed with reduced prices on Amazon India till July 15.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+