Home
ಸುದ್ದಿಜಾಲ

ಮೇ.15ರಂದು ಒಪ್ಪೊ Enco W31 ವಾಯರ್‌ಲೆಸ್‌ ಹೆಡ್‌ಫೋನ್‌ ಸೇಲ್‌!

ಜನಪ್ರಿಯ ಒಪ್ಪೊ ಸಂಸ್ಥೆಯು ಮೊಬೈಲ್‌ ಜೊತೆಗೆ ಹಲವು ಡಿವೈಸ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಅವುಗಳಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಒಪ್ಪೊ Enco W31 ಟ್ರೂ ವಾಯರ್‌ಲೆಸ್ ಹೆಡ್‌ಫೋನ್‌ ಸಹ ಒಂದಾಗಿದೆ. ಇ-ಕಾಮರ್ಸ್‌ ದೈತ್ಯ ಅಮೆಜಾನ್ ತಾಣದಲ್ಲಿ ಮೇ 15 ರಂದು (ನಾಳೆ) ಈ ಹೆಡ್‌ಫೋನ್ ಮಾರಾಟ ನಡೆಯಲಿದೆ. ಈ ಡಿವೈಸ್‌ ಬೆಲೆಯು 4,499ರೂ. ಆಗಿದ್ದು, ಡಿಸ್ಕೌಂಟ್ ದರದಲ್ಲಿ ಲಭ್ಯವಾಗಲಿದೆ.

ಒಪ್ಪೊ ಎನ್‌ಕೊ w31

ಹೌದು, ಚೀನಾ ಮೂಲದ ಜನಪ್ರಿಯ ಒಪ್ಪೊ ಸಂಸ್ಥೆಯ ಒಪ್ಪೊ ಎನ್‌ಕೊ w31 ಟ್ರೂ ವಾಯರ್‌ಲೆಸ್‌ ಇಯರ್‌ ಬಡ್ಸ್‌ ಸೇಲ್ ಅಮೆಜಾನ್‌ನಲ್ಲಿ ನಡೆಯಲಿದೆ. ಯುವ ಸಮೂಹದ ಆಶಯಕ್ಕೆ ತಕ್ಕಂತೆ ರಚನೆಗೊಂದಿರುವ ಈ ಹೆಡ್‌ಫೋನ್ ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಜೊತೆಗೆ ಬಾಸ್‌ ಮೋಡ್‌ ಹಾಗೂ ಬ್ಯಾಲೆನ್ಸ್‌ ಮೋಡ್‌ ಹೊಂದಿದೆ. ಈ ಡಿವೈಸ್‌ನ ಬೆಲೆಯು 4,499ರೂ. ಇದ್ದು, 500ರೂ. ಡಿಸ್ಕೌಂಟ್ ಲಭ್ಯತೆಯೊಂದಿಗೆ 3,999ರೂ.ಗಳಿಗೆ ಖರೀದಿಗೆ ಲಭ್ಯವಾಗಲಿದೆ. ಈ ಹೆಡ್‌ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸೈನ್

ಡಿಸೈನ್

ಒಪ್ಪೋ Enco W31 ಫ್ರೀ ವಾಯರ್‌ಲೆಸ್‌ ಇಯರ್‌ಬಡ್‌ಗಳು ಒದೇ ಸಮಯದಲ್ಲಿ ಕನೆಕ್ಟ್‌ ಆಗುವ ಬೈನೌರಲ್ ಬ್ಲೂಟೂತ್ ಟ್ರಾನ್ಸ್‌ಮಿಷನ್‌ ಅನ್ನು ಹೊಂದಿದ್ದು, ಇದು ಎಡ ಮತ್ತು ಬಲ ಕಿವಿಗಳಿಗೆ ಏಕಕಾಲದಲ್ಲಿ ಉತ್ತಮ ಆಡಿಯೋ ವನ್ನು ತಲುಪಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಈ ಇಯರ್‌ಬಡ್ಸ್‌ ಬ್ಲೂಟೂತ್ 5.0 ಮೂಲಕ ಸ್ಮಾರ್ಟ್‌ಫೋನ್‌ ಜೊತೆಗೆ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಜೊತೆಗೆ ಇದು ಇನ್ಸಟ್ಯಾಂಟ್‌ ಕನೆಕ್ಟಿವಿಟಿ ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ.

ಆಡಿಯೊ ವಿಶೇಷತೆ

ಆಡಿಯೊ ವಿಶೇಷತೆ

ಇನ್ನು ಈ ಇಯರ್‌ಬಡ್‌ಗಳು 13.4MM ಆಡಿಯೋ ಡೈನಾಮಿಕ್ ಡ್ರೈವರ್ ಮತ್ತು 120DB ಸೆನ್ಸಿಟಿವ್‌ ಡ್ರೈವರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಮೂಲಕ ಕರೆಗಳನ್ನ ಸ್ವೀಕರಿಸಲು AI ಅಪ್‌ಲಿಂಕ್ ನಾಯಿಸ್‌ ಕ್ಯಾನ್ಸೆಲೇಶನ್‌ ಅನ್ನು ನೀಡಲಾಗಿದೆ. ಇದರಿಂದ ಸುತ್ತಲೂ ಯಾವುದೇ ಗದ್ದಲವಿದ್ದರೂ ಕರೆಗಳ ಮೇಲೆ ಪರಿಣಾಮ ಬೀರದಂತೆ ಉತ್ತಮವಾಗಿ ಧ್ವನಿ ಕೇಳಲಿದೆ. ಇದಲ್ಲದೆ ಮ್ಯೂಸಿಕ್‌ ಪ್ಲೇಬ್ಯಾಕ್ ಟೈಂನಲ್ಲಿ ವಿಳಂಬವಾದರೆ ಸಿಸ್ಟಮ್-ವೈಡ್ ಆಪ್ಟಿಮೈಸೇಶನ್‌ಗಳನ್ನು ತೆಗೆದುಹಾಕಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಟ್ರೂ ಇಯರ್‌ಬಡ್ಸ್‌

ಟ್ರೂ ಇಯರ್‌ಬಡ್ಸ್‌

ಒಪ್ಪೋ ಎನ್‌ಕೊ w31 ಇಯರ್‌ ಬಡ್ಸ್‌ ಕೂಡ ಬೈನೌರಲ್ ಲೋ-ಲೇಟೆನ್ಸಿ ಬ್ಲೂಟೂತ್ ಟ್ರಾನ್ಸ್‌ಮಿಷನ್ ಮತ್ತು ಇನ್-ಇಯರ್ ವಿನ್ಯಾಸವನ್ನು ಹೊಂದಿದೆ. ಇದು ವಾಟರ್‌ ಹಾಗೂ ಡಸ್ಟ್‌ ಪ್ರೂಪ್‌ ಹೊಂದಿದ್ದು, ಫ್ರೀಕ್ವೆನ್ಸಿ ಮಟ್ಟವನ್ನು ಸುಧಾರಿಸಲು ಡ್ಯುಯಲ್ ಕಾಂಪೋಸಿಟ್ ಪಾಲಿಯುರೆಥೇನ್ (TPU) ಮತ್ತು ಗ್ರ್ಯಾಫೀನ್ ಡಯಾಫ್ರಾಮ್‌ವಿನ್ಯಾಸವನ್ನು ಅಳವಡಿಸಲಾಗಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಗಾಳಿ ಮತ್ತು ಶಬ್ದ ಹೆಚ್ಚಿರುವ ಸಮಯದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಲು ಹೈ-ಸೆನ್ಸಿಟಿವಿಟಿ ಮೈಕ್ರೊಫೋನ್‌ ಮತ್ತು ಅಲ್ಗಾರಿದಮ್ ಅನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಇಯರ್‌ಬಡ್‌ಗಳು 31mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ಅಪ್‌ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಐದು ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು 410mAh ಕ್ಯಾರಿ ಕೇಸ್ ಮೂಲಕ ಹೆಚ್ಚುವರಿ 20 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಬ್ಲೂಟೂತ್‌ v5.0 ಅನ್ನು ಬೆಂಬಲಿಸಲಿದ್ದು, ಇನ್ಸ್ಟ್ಯಾಂಟ್‌ ಕನೆಕ್ಟಿವಿಟಿಯನ್ನು ಹೊಂದಿವೆ. ಅಲ್ಲದೆ ಅಲ್ಟ್ರಾ ಡೈನಾಮಿಕ್‌ ಸ್ಪೀಕರ್‌ಗಳನ್ನು ಸಹ ಹೊಂದಿವೆ.

Best Mobiles in India

English summary
Oppo Enco W31 true wireless headphones at Rs 4,499, but the Amazon India page currently notes a lower price of Rs 3,999. Essentially, it is discounted by Rs 500.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+