Home
ಸುದ್ದಿಜಾಲ

ಒಪ್ಪೊ ಕಂಪನಿಯ ಈ ಮೂರು ಸ್ಮಾರ್ಟ್‌ಫೋನ್‌ಗಳು ಭರ್ಜರಿ ಬೆಲೆ ಇಳಿಕೆ ಕಂಡಿವೆ!

ಚೀನಾ ಮೂಲದ ಸೆಲ್ಫಿ ಎಕ್ಸ್‌ಪರ್ಟ್‌ ಒಪ್ಪೊ ಇದೀಗ ಗ್ರಾಹಕ ಸ್ನೇಹಿ ಹೆಜ್ಜೆಯನ್ನು ಇಟ್ಟಿದೆ. ಇತ್ತೀಚಿಗೆ ಬಿಡುಗಡೆ ಆಗಿರುವ ತನ್ನ ಜನಪ್ರಿಯ ಒಪ್ಪೊ ಕೆ1, ಒಪ್ಪೊ ಎಫ್‌11 ಪ್ರೊ ಮತ್ತು ಒಪ್ಪೊ ಎ5 ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದ್ದು, ಈ ಮೂಲಕ ಒಪ್ಪೊ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಇತರೆ ಮೊಬೈಲ್‌ ಕಂಪನಿಗಳಿಗೆ ತನ್ನ ಗ್ರಾಹಕರ ಸಂಖ್ಯೆಯನ್ನು ಮತ್ತಷ್ಟು ವಿಸ್ತರಿಸುವತ್ತ ಯೋಚಿಸಿದೆ.

ಒಪ್ಪೊ ಕಂಪನಿಯ ಈ ಮೂರು ಸ್ಮಾರ್ಟ್‌ಫೋನ್‌ಗಳು ಭರ್ಜರಿ ಬೆಲೆ ಇಳಿಕೆ ಕಂಡಿವೆ!

ಹೌದು, ಒಪ್ಪೊ ಕಂಪನಿಯು ತನ್ನ 'ಒಪ್ಪೊ ಕೆ1', 'ಒಪ್ಪೊ ಎಫ್‌11 ಪ್ರೊ' ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ 2000ರೂ.ಗಳ ಇಳಿಕೆ ಮತ್ತು 'ಒಪ್ಪೊ ಎ5' ಸ್ಮಾರ್ಟ್‌ಫೋನ್‌ನ ಬೆಲೆಯಲ್ಲಿ 1000ರೂ.ಗಳ ಇಳಿಕೆ ಮಾಡಿದೆ. ಬೆಲೆ ಇಳಿಕೆ ಕಂಡಿರುವ ಜೊತೆಗೆ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಮೂರು ಸ್ಮಾರ್ಟ್‌ಫೋನ್‌ಗಳು, ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ.

ಒಪ್ಪೊ ಕಂಪನಿಯ ಈ ಮೂರು ಸ್ಮಾರ್ಟ್‌ಫೋನ್‌ಗಳು ಭರ್ಜರಿ ಬೆಲೆ ಇಳಿಕೆ ಕಂಡಿವೆ!

ಬೆಲೆ ಇಳಿಕೆ ಕಂಡ ನಂತರ ಒಪ್ಪೊ ಕೆ1 ಸ್ಮಾರ್ಟ್‌ಫೋನ್‌ ಬೆಲೆಯು 14,990ರೂ ಆಗಿದೆ, ಹಾಗೆಯೇ 6 GB RAM + 64 GB ಸ್ಟೋರೇಜ್‌ನ 'ಒಪ್ಪೊ ಎಫ್‌11 ಪ್ರೊ' ಸ್ಮಾರ್ಟ್‌ಫೋನ್‌ ಬೆಲೆಯು 20,900ರೂ.ಗಳು ಮತ್ತು 'ಒಪ್ಪೊ ಎ5' ಸ್ಮಾರ್ಟ್‌ಫೋನ್‌ 11,990ರೂ.ಗಳಿಗೆ ದೊರೆಯಲಿದೆ. ಹಾಗಾದರೇ ಒಪ್ಪೊದ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಬೆಲೆ ಇಳಿಕೆ ಯಾಕೆ

ಬೆಲೆ ಇಳಿಕೆ ಯಾಕೆ

ಸದ್ಯ ಮೊಬೈಲ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಕಂಪನಿಗಳ ನಡುವೆ ತೀವ್ರ ಪೈಪೋಟಿ ಇದ್ದು, ಗ್ರಾಹಕರನ್ನು ಸೆಳೆಯಲು ಕಂಪನಿಗಳು ಹಲವು ಆಫರ್‌ಗಳನ್ನು ನೀಡುತ್ತಿಲೇ ಸಾಗಿವೆ. ಅವುಗಳಲ್ಲಿ ಬೆಲೆ ಇಳಿಕೆ ಅಸ್ತ್ರ ಬಹುಬೇಗ ಗ್ರಾಹಕರನ್ನು ಆಕರ್ಷಸುತ್ತದೆ. ಹೀಗಾಗಿ ಒಪ್ಪೊ ಸಹ ಇದೀಗ ತನ್ನ ಮೂರು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಇಳಿಕೆ ಮಾಡಿದೆ.

ಒಪ್ಪೊ ಕೆ1

ಒಪ್ಪೊ ಕೆ1

ಒಪ್ಪೊ ಕೆ1 ಸ್ಮಾರ್ಟ್‌ಫೋನ್‌ 6.4 ಇಂಚಿನ ಪೂರ್ಣ ಹೆಚ್‌ಡಿ AMOLED ಡಿಸ್‌ಪ್ಲೇಯನ್ನು ಹೊಂಡಿದ್ದು, ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ. ಹಾಗೆಯೇ ಈ ಡಿಸ್‌ಪ್ಲೇಯು ಡ್ಯುವ್‌ಡ್ರಾಪ್‌ ಮಾದರಿಯನ್ನು ಹೊಂದಿದೆ. ಸೆಲ್ಫಿಗಾಗಿ 25ಎಂಪಿ ಕ್ಯಾಮೆರಾ ನೀಡಿದ್ದು, ಜೊತೆಗೆ ಹಿಂಬದಿ 16ಎಂಪಿ ಮತ್ತು 2ಎಂಪಿ ಕ್ಯಾಮೆರಾಗಳನ್ನು ನೀಡಲಾಗಿದೆ. 3,600mAh ಸಾಮರ್ಥ್ಯವಿದ್ದು, ಇದರೊಂದಿಗೆ 10W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾದೆ. ಬೆಲೆ 14,990ರೂ ಆಗಿದೆ.

ಒಪ್ಪೊ ಎಫ್‌11 ಪ್ರೊ

ಒಪ್ಪೊ ಎಫ್‌11 ಪ್ರೊ

ಈ ಸ್ಮಾರ್ಟ್‌ಫೋನ್‌ 6.53 ಇಂಚಿನ ಹೆಚ್‌ಡಿ LCD ಡಿಸ್‌ಪ್ಲೇಯನ್ನು ಹೊಂದಿದ್ದು, ಮೀಡಿಯಾ ಟೆಕ್‌ ಹಿಲಿಯೊ P70 ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಹಿಂಬದಿ 48ಎಂಪಿ + 5ಎಂಪಿ ಕ್ಯಾಮೆರಾ ನೀಡಲಾಗಿದ್ದು, ಸೆಲ್ಫಿಗಾಗಿ 16 ಎಂಪಿಯ ಪಾಪ್‌ಅಪ್‌ ಕ್ಯಾಮೆರಾ ಒಳಗೊಂಡಿದೆ. 4,000mAh ಬ್ಯಾಟರಿ ಸಾಮರ್ಥ್ಯದೊಂದಿಗೆ VOOC 3.0 ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಆರಂಭಿಕ ಬೆಲೆಯು 20,900ರೂ.ಗಳು ಆಗಿದೆ.

ಒಪ್ಪೊ ಎ5

ಒಪ್ಪೊ ಎ5

6.2 ಇಂಚಿನ ಹೆಚ್‌ಡಿ LCD ಡಿಸ್‌ಪ್ಲೇಯನ್ನು ಹೊಂದಿರುವ ಒಪ್ಪೊ ಎ5 ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರಾಗನ್ 450 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 4GB RAM ಮತ್ತು 64 GB ಸ್ಟೋರೇಜ್‌ ಸ್ಥಳಾವಕಾಶವನ್ನು ಪಡೆದುಕೊಂಡಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶವನ್ನು ಪಡೆದಿದೆ. ಇದರ ಬೆಲೆಯು 11,990ರೂ.ಗಳು ಆಗಿದೆ.

Best Mobiles in India

English summary
OPPO India has now slashed the prices of its three recently released smartphones such as OPPO F11 Pro, OPPO K1 and OPPO A5. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+