ಒಪ್ಪೋದ ಈ ನಾಲ್ಕು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ!

|

ಒಪ್ಪೋ ಕಂಪೆನಿಯ ಕೆಲವು ಸ್ಮಾರ್ಟ್‌ಫೋನ್‌ಗಳು ವಿಶೇಷ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿವೆ. ಅವುಗಳಲ್ಲಿ ಒಪ್ಪೊ F17, ಒಪ್ಪೋ A12, ಒಪ್ಪೋ A15 ಹಾಗೂ ಒಪ್ಪೋ ರೆನೋ 3 ಪ್ರೊ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಆಕರ್ಷಿಸಿವೆ. ಇದೀಗ ಒಪ್ಪೋದ ಈ ನಾಲ್ಕು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಶಾಶ್ವತವಾಗಿ ಭರ್ಜರಿ ಇಳಿಕೆ ಆಗಿದ್ದು, ಗ್ರಾಹಕರಿಗೆ ಸರ್‌ಪ್ರೈಸ್‌ ಅನಿಸಿದೆ.

ಒಪ್ಪೊ

ಹೌದು, ಒಪ್ಪೋ ಕಂಪನಿಯ ಒಪ್ಪೊ F17, ಒಪ್ಪೋ A12, ಒಪ್ಪೋ A15 ಹಾಗೂ ಒಪ್ಪೋ ರೆನೋ 3 ಪ್ರೊ ಫೋನ್‌ಗಳ ದರದಲ್ಲಿ 2000ರೂ. ವರೆಗೂ ಈಗ ಕಡಿತವಾಗಿದೆ. ಹೀಗಾಗಿ ಒಪ್ಪೊ F17 ಫೋನ್ 18,490ರೂ.ಗಳಿಗೆ ಲಭ್ಯ. ಒಪ್ಪೋ A12 ಫೋನ್ 8990ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿದೆ. ಒಪ್ಪೋ A15 ಸ್ಮಾರ್ಟ್‌ಫೋನ್ 8,990ರೂ.ಗಳ ದರದಲ್ಲಿ ಲಭ್ಯ ಹಾಗೂ ಒಪ್ಪೋ ರೆನೋ 3 ಪ್ರೊ ಸ್ಮಾರ್ಟ್‌ಫೋನ್ 24,990ರೂ.ಗಳ ಬೆಲೆಯಲ್ಲಿ ಸಿಗಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಒಪ್ಪೊ F17- ಫೀಚರ್ಸ್‌

ಒಪ್ಪೊ F17- ಫೀಚರ್ಸ್‌

ಒಪ್ಪೊ F17 ಸ್ಮಾರ್ಟ್‌ಫೋನ್ 6.44-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ ವಾಟರ್‌ಡ್ರಾಪ್ ನಾಚ್ ಸ್ಟೈಲ್ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಜೊತೆಗೆ 4GB/64GB, 6GB/128GB ಮತ್ತು 8GB/128GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 16ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,000mAh ಬ್ಯಾಟರಿಯನ್ನು ಪಡೆದಿದೆ.

ಒಪ್ಪೋ A12- ಫೀಚರ್ಸ್‌

ಒಪ್ಪೋ A12- ಫೀಚರ್ಸ್‌

ಒಪ್ಪೋ A12 ಸ್ಮಾರ್ಟ್‌ಫೋನ್‌ 720 x 1520 ಪಿಕ್ಸೆಲ್‌ ಸ್ಕ್ರಿನ್ ರೆಸಲ್ಯೂಶನ್‌ ಸಾಮರ್ಥ್ಯದ 6.2 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಮೀಡಿಯಾ ಟೆಕ್‌ ಹಿಲಿಯೋ P35 ಪ್ರೊಸೆಸರ್‌ ವೇಗವನ್ನ ಹೊಂದಿದ್ದು, ಆಂಡ್ರಾಯ್ಡ್ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. 4,230mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ.

ಒಪ್ಪೋ A15- ಫೀಚರ್ಸ್‌

ಒಪ್ಪೋ A15- ಫೀಚರ್ಸ್‌

ಒಪ್ಪೋ A15 ಸ್ಮಾರ್ಟ್‌ಫೋನ್‌ 720x1520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಮೀಡಿಯಾ ಟೆಕ್‌ ಹಿಲಿಯೋ P35SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 10 ಆಧಾರಿತ ಕಲರ್ಓಎಸ್ 7.2 ನಲ್ಲಿ ಕಾರ್ಯನಿರ್ವಹಿಸಲಿದೆ. ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಒಳಗೊಂಡಿದೆ. 4200mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. 10W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಒಪ್ಪೋ ರೆನೋ 3 ಪ್ರೊ

ಒಪ್ಪೋ ರೆನೋ 3 ಪ್ರೊ

ಒಪ್ಪೋ ರೆನೋ 3 ಪ್ರೊ ಸ್ಮಾರ್ಟ್‌ಫೋನ್‌ 1800x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ ಡಿಸ್‌ಪ್ಲೇಯನ್ನ ಹೊಂದಿದೆ. ಇದು 6.4 ಇಂಚಿನ ಸೂಪರ್‌ ಅಮೋಲೆಡ್ E3 ಫುಲ್‌ ಎಚ್‌ಡಿ ಡಿಸ್‌ಪ್ಲೇ ಆಗಿದೆ. ಮೀಡಿಯಾ ಟೆಕ್‌ P95 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಈ ಫೋನ್ 4,025mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, 30W ಫಾಸ್ಟ್‌ ಚಾರ್ಜಿಂಗ್‌ ಟೆಕ್ನಾಲಜಿಯನ್ನ ಬೆಂಬಲಿಸಲಿದೆ.

Best Mobiles in India

English summary
Oppo F17, Oppo A15, Oppo A12, and Oppo Reno 3 Pro has received a permanent price cut in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X