ಭಾರತದಲ್ಲಿ ಒಪ್ಪೋ F17 ಮತ್ತು ಒಪ್ಪೋ F17 ಪ್ರೊ ಸ್ಮಾರ್ಟ್‌ಫೋನ್ ಲಾಂಚ್!

|

ಒಪ್ಪೊ ಸಂಸ್ಥೆಯು ತನ್ನ ಬಹುನಿರೀಕ್ಷಿತ F17 ಸ್ಮಾರ್ಟ್‌ಫೋನ್‌ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್‌ಫೋನ್ ಸರಣಿಯು ಒಪ್ಪೋ F17 ಮತ್ತು ಒಪ್ಪೋ F17 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ವಾಡ್‌ ಕ್ಯಾಮೆರಾ ಹಾಗೂ ಬಿಗ್ ಬ್ಯಾಟರಿ ಗಳಂತಹ ಹೈ ಎಂಡ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿವೆ. ಬೆಲೆಯು ಮೀಡ್‌ರೀಂಜ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿವೆ.

ಒಪ್ಪೋ F17

ಹೌದು, ಒಪ್ಪೋ ಸಂಸ್ಥೆಯು ದೇಶದಲ್ಲಿ ಒಪ್ಪೋ F17 ಮತ್ತು ಒಪ್ಪೋ F17 ಪ್ರೊ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇವುಗಳಲ್ಲಿ ಒಪ್ಪೋ F17 ಪ್ರೊ ಮೀಡಿಯಾ ಟೆಕ್ ಹಿಲಿಯೋ P95 ಪ್ರೊಸೆಸರ್‌ ಒಳಗೊಂಡಿದೆ. ಹಾಗೆಯೇ ಒಪ್ಪೋ F17 ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಇವೆರಡೂ ಆಂಡ್ರಾಯ್ಡ್ 10 ಓಎಸ್‌ ಸಪೋರ್ಟ್‌ ಪಡೆದುಕೊಂಡಿವೆ. ಇನ್ನುಳಿದಂತೆ ಒಪ್ಪೋ F17 ಮತ್ತು ಒಪ್ಪೋ F17 ಪ್ರೊ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೊ ಎಫ್ 17 ಪ್ರೊ ಫೀಚರ್ಸ್‌

ಒಪ್ಪೊ ಎಫ್ 17 ಪ್ರೊ ಫೀಚರ್ಸ್‌

ಒಪ್ಪೊ ಎಫ್ 17 ಪ್ರೊ ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 6.43-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 20: 9 ಆಕಾರ ಅನುಪಾತ ಹೊಂದಿದ್ದು, ಸ್ಕ್ರೀನ್ ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90.7 ಆಗಿದೆ. ಇನ್ನು ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ ಪಿ 95 SoC ಅನ್ನು ಹೊಂದಿದ್ದು, ಜೊತೆಗೆ 8GB RAM+128GB ಸ್ಟೋರೇಜ್ ಅನ್ನು ಹೊಂದಿದೆ.

ಫೋನ್

ಒಪ್ಪೊ ಎಫ್ 17 ಪ್ರೊ ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾ ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,000mAh ಬ್ಯಾಟರಿಯನ್ನು ಪಡೆದಿದ್ದು, 30W VOOC ಚಾರ್ಜ್ 4.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಒಪ್ಪೊ ಎಫ್ 17 ಫೀಚರ್ಸ್‌

ಒಪ್ಪೊ ಎಫ್ 17 ಫೀಚರ್ಸ್‌

ಒಪ್ಪೊ ಎಫ್ 17 ಸ್ಮಾರ್ಟ್‌ಫೋನ್ 6.44-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ ವಾಟರ್‌ಡ್ರಾಪ್ ನಾಚ್ ಸ್ಟೈಲ್ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಜೊತೆಗೆ 4GB/64GB, 6GB/128GB ಮತ್ತು 8GB/128GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ.

ಕ್ವಾಡ್‌

ಒಪ್ಪೊ ಎಫ್ 17 ಫೋನ್ ಸಹ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 16ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾ ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,000mAh ಬ್ಯಾಟರಿಯನ್ನು ಪಡೆದಿದ್ದು, 30W VOOC ಚಾರ್ಜ್ 4.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೊಸದಾಗಿ ಲಾಂಚ್ ಆಗಿರುವ ಒಪ್ಪೋ F17 ಮತ್ತು ಒಪ್ಪೋ F17 ಪ್ರೊ ಸ್ಮಾರ್ಟ್‌ಫೋನ್ ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿವೆ. ಒಪ್ಪೋ F17 ಪ್ರೊ ಫೋನಿನ 8GB + 128GB ಸ್ಟೋರೇಜ್ ವೇರಿಯಂಟ್ ಬೆಲೆಯು 22,990ರೂ. ಆಗಿದೆ. ಇನ್ನು ಈ ಫೋನ್ ಸೆಪ್ಟೆಂಬರ್ 17ರಿಂದ ಸೇಲ್ ಶುರುಮಾಡಲಿದೆ. ಇನ್ನು ಒಪ್ಪೋ F17 ಸ್ಮಾರ್ಟ್‌ಫೋನ್ ಸೇಲ್ ಡೇಟ್ ಬಗ್ಗೆ ಮಾಹಿತಿ ಸ್ಪಷ್ಟಪಡಿಸಿಲ್ಲ.

Best Mobiles in India

English summary
Oppo F17 Pro price in India is set at Rs. 22,990 for the sole 8GB + 128GB storage variant.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X