ಭಾರತದಲ್ಲಿ ಒಪ್ಪೊ F19 ಪ್ರೊ ಪ್ಲಸ್ ಮತ್ತು ಒಪ್ಪೊ F19 ಪ್ರೊ ಫೋನ್ ಬಿಡುಗಡೆ!
ಜನಪ್ರಿಯ ಮೊಬೈಲ್ ಸಂಸ್ಥೆಗಳಲ್ಲಿ ಒಂದಾದ ಒಪ್ಪೊ ಕಂಪನಿಯ ಬಹುನಿರೀಕ್ಷಿತ ಒಪ್ಪೊ F19 ಸ್ಮಾರ್ಟ್‌ಫೋನ್ ಸರಣಿಯು ಭಾರತದಲ್ಲಿ ಇಂದು ಅನಾವರಣ ಆಗಿದೆ. ಈ ಸ್ಮಾರ್ಟ್‌ಫೋನ್ ಸರಣಿಯು ನಿರೀಕ್ಷೆಯಂತೆ ಒಪ್ಪೊ F19 ಪ್ರೊ ಪ್ಲಸ್ ಮತ್ತು ಒಪ್ಪೊ F19 ಪ್ರೊ ಹೆಸರಿನ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ವಾಡ್ ಕ್ಯಾಮೆರಾ ರಚನೆ ಪಡೆದಿರುವುದು ಪ್ಲಸ್ ಪಾಯಿಂಟ್ ಆಗಿದೆ.

ಹೌದು, ಒಪ್ಪೊ ಸಂಸ್ಥೆಯು ಹೊಸದಾಗಿ ಒಪ್ಪೊ F19 ಪ್ರೊ ಪ್ಲಸ್ ಮತ್ತು ಒಪ್ಪೊ F19 ಪ್ರೊ ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಇಂದು(ಮಾ.8) ಲಾಂಚ್ ಮಾಡಿದೆ. ಒಪ್ಪೊ F19 ಸರಣಿಯಲ್ಲಿ ಬಿಡುಗಡೆ ಆಗಿರುವ ಒಪ್ಪೊ F19 ಪ್ರೊ ಪ್ಲಸ್ ಮತ್ತು ಒಪ್ಪೋ F19 ಪ್ರೊ ಸ್ಮಾರ್ಟ್‌ಫೋನ್‌ಗಳು ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹಾಗೂ ಸೂಪರ್ AMOLED ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನುಳಿದಂತೆ ಒಪ್ಪೊ F19 ಪ್ರೊ ಪ್ಲಸ್ ಮತ್ತು ಒಪ್ಪೊ F19 ಪ್ರೊ ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿವೆ ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಒಪ್ಪೊ F19 ಪ್ರೊ ಪ್ಲಸ್ - ಫೀಚರ್ಸ್
ಒಪ್ಪೊ F19 ಪ್ರೊ ಪ್ಲಸ್ ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.4 ಇಂಚಿನ ಪೂರ್ಣ ಹೆಚ್‌ಡಿ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಫೋನ್ ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 800 ಯು SoC ಪ್ರೊಸೆಸರ್ ಹೊಂದಿದೆ. ಇದರೊಂದಿಗೆ ಕ್ವಾಡ್ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಈ ಫೋನ್ 8GB RAM + 128GB ಸ್ಟೋರೇಜ್ ಆಯ್ಕೆ ಒಳಗೊಂಡಿದ್ದು, 4,310mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ.

ಒಪ್ಪೊ F19 ಪ್ರೊ - ಫೀಚರ್ಸ್
ಒಪ್ಪೊ F19 ಪ್ರೊ ಸ್ಮಾರ್ಟ್‌ಫೋನ್ ಅಧಿಕ ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.4 ಇಂಚಿನ ಪೂರ್ಣ ಹೆಚ್‌ಡಿ AMOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಫೋನ್ ಆಂಡ್ರಾಯ್ಡ್ 11 ಆಧಾರಿತ ColorOS 11.1 ಅನ್ನು ಹೊಂದಿದೆ. ಇದರೊಂದಿಗೆ ಕ್ವಾಡ್ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಈ ಫೋನ್ 8GB RAM + 128GB ಮತ್ತು 8GB RAM + 256GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದ್ದು, 4,310mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಒಪ್ಪೊ F19 ಪ್ರೊ ಪ್ಲಸ್ ಫೋನ್ 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆಯು 25,990ರೂ. ಆಗಿದೆ. ಅದೇ ರೀತಿ ಒಪ್ಪೊ F19 ಪ್ರೊ ಫೋನ್ 8GB RAM + 128GB ವೇರಿಯಂಟ್ ದರವು 21,490 ರೂ. ಆಗಿದ್ದು, 8GB RAM + 256GB ವೇರಿಯಂಟ್ ಬೆಲೆಯು 23,490ರೂ. ಆಗಿದೆ. ಈ ಎರಡು ಫೋನ್‌ಗಳು ಇದೇ ಮಾರ್ಚ್ 17ರಂದು ಫಸ್ಟ್ ಸೇಲ್ ಶುರು ಮಾಡಲಿವೆ.


Click it and Unblock the Notifications