ಭಾರತದಲ್ಲಿ ಒಪ್ಪೋ F19 ಫೋನ್ ಲಾಂಚ್!..ಫೀಚರ್ಸ್ ಏನು?..ಬೆಲೆ ಎಷ್ಟು?
ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಒಪ್ಪೊ ಸಂಸ್ಥೆಯು ತನ್ನ ಬಹು ನಿರೀಕ್ಷಿತ F19 ಸ್ಮಾರ್ಟ್‌ಫೋನ್ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹಾಗೂ 5,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಫೀಚರ್ಸ್ ಅನ್ನು ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಆಂತರೀಕ ಸ್ಟೋರೇಜ್ ವೇರಿಯಂಟ್ ಮಾಡೆಲ್ ಅನ್ನು ಪಡೆದಿದೆ.

ಹೌದು, ಒಪ್ಪೋ ಸಂಸ್ಥೆಯು ದೇಶದ ಮಾರುಕಟ್ಟೆಯಲ್ಲಿ ಒಪ್ಪೋ F19 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಕಲರ್ ಓಎಸ್ 11.1 ಬೆಂಬಲಿತ ಆಂಡ್ರಾಯ್ಡ್ 10 ಓಎಸ್ ಸಪೋರ್ಟ್ ಪಡೆದುಕೊಂಡಿವೆ. ಜೊತೆಗೆ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗಾದರೇ ಒಪ್ಪೋ F19 ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳು ಹೇಗಿವೆ ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೊ ಎಫ್ F19- ಡಿಸ್‌ಪ್ಲೇ
ಒಪ್ಪೊ ಎಫ್ F19 ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 6.43-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 20: 9 ಆಕಾರ ಅನುಪಾತ ಹೊಂದಿದ್ದು, ಸ್ಕ್ರೀನ್ ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90.7 ಆಗಿದೆ.

ಒಪ್ಪೊ ಎಫ್ F19 - ಪ್ರೊಸೆಸರ್
ಒಪ್ಪೊ ಎಫ್ F19 ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಕಲರ್ ಓಎಸ್ 11.1 ಬೆಂಬಲಿತ ಆಂಡ್ರಾಯ್ಡ್ 10 ಓಎಸ್ ಸಪೋರ್ಟ್ ಪಡೆದುಕೊಂಡಿವೆ. ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಆಂತರೀಕ ಸ್ಟೋರೇಜ್ ವೇರಿಯಂಟ್ ಮಾಡೆಲ್ ಅನ್ನು ಪಡೆದಿದೆ.

ಒಪ್ಪೊ ಎಫ್ F19 - ಕ್ಯಾಮೆರಾ
ಒಪ್ಪೊ ಎಫ್ F19 ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾ ಕ್ರಮವಾಗಿ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದೆ. ಇದರೊಂದಿಗೆ ಎಡಿಟಿಂಗ್ ಆಯ್ಕೆಗಳನ್ನು ಪಡೆದಿದೆ.

ಒಪ್ಪೊ ಎಫ್ F19 - ಬ್ಯಾಟರಿ
ಒಪ್ಪೊ ಎಫ್ F19 ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಪಡೆದಿದ್ದು, 30W VOOC ಚಾರ್ಜ್ 4.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿಇ, ವೈ-ಫೈ, ಬ್ಲೂಟೂತ್ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ. ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಸಹ ಇದೆ. ಒಪ್ಪೋ ಎಫ್ 19 5,000 ಎಮ್ಎಹೆಚ್ ಬ್ಯಾಟರಿಯನ್ನು 33 ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ನೊಂದಿಗೆ ಪ್ಯಾಕ್ ಮಾಡುತ್ತದೆ. ಫೋನ್ 160.3x73.8x7.95mm ಅಳತೆ ಮತ್ತು 175 ಗ್ರಾಂ ತೂಕ ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಒಪ್ಪೊ ಎಫ್ F19 ಸ್ಮಾರ್ಟ್‌ಫೋನ್ 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಬೆಲೆಯು 18,990ರೂ. ಆಗಿದೆ. ಮೀಡ್‌ನೈಟ್ ಬ್ಲೂ ಮತ್ತು ಪ್ರಿಸ್ಮ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಫೋನ್ ಇದೇ ಏಪ್ರಿಯ 19ರಂದು ಫಸ್ಟ್ ಸೇಲ್ ಶುರು ಮಾಡಲಿದೆ.


Click it and Unblock the Notifications