Home
ಸುದ್ದಿಜಾಲ

ಕ್ಯಾಮೆರಾ ಪ್ರಿಯರ ಗಮನ ಸೆಳೆದ ಈ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಮೊಬೈಲ್‌ ಮಾರುಕಟ್ಟೆಯಲ್ಲಿ ಒಪ್ಪೋ ಸಂಸ್ಥೆಯ ಸ್ಮಾರ್ಟ್‌ಫೊನ್‌ಗಳಿಗೆ ಡಿಮ್ಯಾಂಡ್‌ ಇದ್ದೇ ಇದೆ. ಬಹುತೇಕ ಫೋನ್‌ ಪ್ರಿಯರ ಮೊದಲ ಆಯ್ಕೆ ವಿವೋ ಫೋನ್‌ ಆಗಿದ್ದು, ಸಂಸ್ಥೆಯು ಭಿನ್ನ ಶ್ರೇಣಿಯ ಮಾಡೆಲ್‌ಗಳನ್ನು ಪರಿಚಯಿಸಿದೆ. ಹಬ್ಬದ ಅಂಗವಾಗಿ ವಿವೋ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆಯ್ದ ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌ ಲಭ್ಯ ಮಾಡಿದೆ. ಅವುಗಳ ಪೈಕಿ ಒಪ್ಪೋ F21 ಪ್ರೊ 5G ಫೋನ್‌ ಕೂಡಾ ಸಖತ್ ಬೆಲೆ ಇಳಿಕೆ ಕಂಡಿದೆ.

ಹೌದು, ಹಬ್ಬದ ಅಂಗವಾಗಿ ಒಪ್ಪೋ ಸಂಸ್ಥೆಯು ಕೆಲವು ಫೋನ್‌ಗಳಿಗೆ ಸಿಕ್ಕಾಪಟ್ಟೆ ರಿಯಾಯಿತಿ ಘೋಷಣೆ ಮಾಡಿದೆ. ಅವುಗಳಲ್ಲಿ ಒಪ್ಪೋ F21 ಪ್ರೊ 5G ಫೋನ್‌ 31,999ರೂ. ಪ್ರೈಸ್‌ಟ್ಯಾಗ್‌ ಅನ್ನು ಒಳಗೊಂಡಿದ್ದು, ಡಿಸ್ಕೌಂಟ್‌ನಲ್ಲಿ ಈ ಫೋನ್ ಈಗ 25,999ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇತರೆ ಎಕ್ಸಟ್ರಾ ಆಫರ್‌ ಸಹ ಲಭ್ಯ.

ಕ್ಯಾಮೆರಾ ಪ್ರಿಯರ ಗಮನ ಸೆಳೆದ ಈ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಅಂದಹಾಗೆ ಒಪ್ಪೋ ಸಂಸ್ಥೆಯ ಈ ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 SoC ಪ್ರೊಸೆಸರ್‌ ಪವರ್ ಅನ್ನು ಪಡೆದಿದ್ದು, 8GB + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಇದರ ಜೊತೆಗೆ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಸೌಲಭ್ಯ ಸಹ ಪಡೆದುಕೊಂಡಿದೆ. ಹಾಗಾದರೇ ಒಪ್ಪೋ F21 ಪ್ರೊ 5G ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ F21 ಪ್ರೊ 5G ಫೋನ್‌ ಫೀಚರ್ಸ್‌

ಒಪ್ಪೋ ಸಂಸ್ಥೆಯ ಈ ಮೊಬೈಲ್‌ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರುವ ಜೊತೆಗೆ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಹಾಗೆಯೇ ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ 12 ನಲ್ಲಿ ಕಲರ್‌OS 12.1 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ.

ಕ್ಯಾಮೆರಾ ಪ್ರಿಯರ ಗಮನ ಸೆಳೆದ ಈ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಈ ಮೊಬೈಲ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್ ಆರ್ಬಿಟ್ ಲೈಟ್‌ಗಳನ್ನು ಪಡೆದುಕೊಂಡಿದೆ. ಇದರ ಜೊತೆಗೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಪಡೆದುಕೊಂಡಿದೆ. 4,500mAh ಸೌಲಭ್ಯದ ಬ್ಯಾಟರಿ ಹೊಂದಿದ್ದು, 33W SuperVOOC ಚಾರ್ಜಿಂಗ್ ಸೌಲಭ್ಯ ಕೂಡಾ ಪಡೆದುಕೊಂಡಿದೆ.

ಒಪ್ಪೋ F21 ಪ್ರೊ ಫೋನ್‌ ಫೀಚರ್ಸ್‌

ಒಪ್ಪೋ F21 ಪ್ರೊ ಮೊಬೈಲ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ.

ಕ್ಯಾಮೆರಾ ಪ್ರಿಯರ ಗಮನ ಸೆಳೆದ ಈ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಇದು ಆಕ್ಟಾ ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 12 ನಲ್ಲಿ ಕಲರ್‌OS 12.1 ಜೊತೆಗೆ ರನ್ ಆಗುತ್ತದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಇದು ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ IMX709 ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಕೂಡಾ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W SuperVOOC ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

Best Mobiles in India

English summary
OPPO F21 Pro 5G available at big price cut in Oppo India website. price, specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+