OPPO: ಒಪ್ಪೋದ ಈ ಫೋನ್‌ಗೆ ಭಾರೀ ಕೊಡುಗೆ, 8GB RAM.. 64MP ಕ್ಯಾಮೆರಾ! ಆಫರ್ ಬೆಲೆ ಎಷ್ಟು?
ಒಪ್ಪೋ ಫೋನ್‌ಗಳಿಗೆ (Oppo phone) ಭಾರತದಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಒಪ್ಪೋ ವಿವಿಧ ಸುಧಾರಿತ ಫೀಚರ್ಸ್ ಹಾಗೂ ಆಕರ್ಷಕ ಶೈಲಿಯ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದೆ. ಅದರಲ್ಲೂ ಫೋಲ್ಡಬಲ್ ಫೋನ್‌ಗಳ ವಿಭಾಗಕ್ಕೂ ಕಾಲಿಟ್ಟಿದ್ದು, ಬಹಳಷ್ಟು ಸದ್ದು ಮಾಡಿದೆ.
ಹೌದು, ಒಪ್ಪೋ ಫೋನ್‌ಗಳು ಭಾರತೀಯರಿಗೆ ಅಚ್ಚು ಮೆಚ್ಚಿನ ಫೋನ್‌ಗಳಾಗಿವೆ. ಈ ನಡುವೆ ಒಪ್ಪೋ F21 ಪ್ರೊ (OPPO F21 Pro) ಸ್ಮಾರ್ಟ್‌ಫೋನ್‌ಗೆ ಬೃಹತ್ ಡಿಸ್ಕೌಂಟ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 8GB RAM ಆಯ್ಕೆ ಹಾಗೂ 64MP ಪ್ರಮುಖ ಕ್ಯಾಮೆರಾ, ಉತ್ತಮ ಕಾರ್ಯಕ್ಷಮತೆಯ ಪ್ರೊಸೆಸರ್ ಹೊಂದುವ ಮೂಲಕ ಬಳಕೆದಾರರಿಗೆ ಇಷ್ಟವಾಗಿದೆ. ಅದರಂತೆ ಈಗ ಈ ಫೋನ್‌ಗೆ ದೊಡ್ಡ ಮಟ್ಟದಲ್ಲಿ ಆಫರ್ ನೀಡಲಾಗಿದ್ದು, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ವಿವರವನ್ನು ತಿಳಿಯೋಣ ಬನ್ನಿ.

ಒಪ್ಪೋ F21 ಪ್ರೊ ಆಫರ್ ವಿವರ: ಈ ಸ್ಮಾರ್ಟ್‌ಫೋನ್ ನ ಸಾಮಾನ್ಯ ದರ 27,999 ರೂ.ಗಳು ಆದರೆ, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯಲ್ ಡೇ ಸೇಲ್‌ನಲ್ಲಿ (Flipkart Big Billion Day Sale) ಭಾರೀ ರಿಯಾಯಿತಿ ನೀಡಲಾಗಿದೆ. ಈ ಮೂಲಕ ನೀವು ಇದನ್ನು ಕೇವಲ 19,980ರೂ.ಗಳ ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದು. ಅಂದರೆ ಇದಕ್ಕೆ 28% ರಷ್ಟು ಡಿಸ್ಕೌಂಟ್ ನೀಡಲಾಗಿದೆ. ಆದರೂ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಖರೀದಿ ಮಾಡಬೇಕು ಎಂದರೆ ನೀವು ಕೆಲವು ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಬಹುದು.
ಹತ್ತಕ್ಕೂ ಅಧಿಕ ಬ್ಯಾಂಕ್ ಆಫರ್: ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ (Flipkart Axis Bank Credit Card) ಈ ಫೋನ್ ಖರೀದಿ ಮಾಡಿದ್ರೆ 5% ರಿಯಾಯಿತಿ ಸಿಗಲಿದೆ. ಹಾಗೆಯೇ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಇಎಂಐ ವ್ಯವಹಾರದ ಮೇಲೆ ಬ್ಯಾಂಕ್ ಆಫರ್ 5%, ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್ ಮೇಲೆ 10% ರಿಯಾಯಿತಿ ಸಿಗಲಿದೆ. ಇದರೊಂದಿಗೆ ಯಾವುದೇ ವೆಚ್ಚದ ಇಎಂಐ ಆಯ್ಕೆಯನ್ನೂ ನೀಡಲಾಗಿದೆ ಅಂದರೆ ತಿಂಗಳಿಗೆ ನೀವು ಕೇವಲ 3,330 ರೂ.ಗಳನ್ನು ಪಾವತಿ ಮಾಡಿದ್ರೆ ಸಾಕು. ಇಷ್ಟೇ ಅಲ್ಲದೆ ಉನ್ನೂ ಕೆಲವು ಆಫರ್ ಈ ಫೋನ್‌ಗೆ ಅನ್ವಯ ಆಗಲಿವೆ.
ಒಪ್ಪೋ F21 ಪ್ರೊ ಫೀಚರ್ಸ್: ಈ ಫೋನ್‌ನ ಫೀಚರ್ಸ್ ಕಡೆ ಕಣ್ಣಾಯಿಸೋಣ. ಅದರಂತೆ ಈ ಫೋನ್ 6.43 ಇಂಚಿನ ಅಮೋಲೆಡ್ ಡಿಪ್ಲೇ ಹೊಂದಿದ್ದು, ಇದು 20:9 ಆಕಾರ ಅನುಪಾತವನ್ನು ಪಡೆದಿದೆ. ಇದರೊಂದಿಗೆ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದ್ದು, 409ppi ಪಿಕ್ಸೆಲ್ ಸಾಂದ್ರತೆ ಹೊಂದಿದೆ. ಇನ್ನು ಫೋನ್‌ನ ಮೇಲಿನ ಎಡ ಮೂಲೆಯಲ್ಲಿ ಸೆಲ್ಫಿ ಕ್ಯಾಮೆರಾ ಲೆನ್ಸ್ ಅನ್ನು ಹೊಂದಿರುವ ಪಂಚ್ ಹೋಲ್ ಆಯ್ಕೆ ನೀಡಲಾಗಿದೆ.
ಒಪ್ಪೋ F21 ಪ್ರೊ ಪ್ರೊಸಸೆರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಕ್ವಾಡ್-ಕೋರ್ ಕ್ರಿಯೋ265 2.4GHz ಮತ್ತು ಕ್ವಾಡ್-ಕೋರ್ ಕ್ರಿಯೋ 265 1.9GHz ವೇಗವನ್ನು ಹೊಂದಿರುವ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ (Qualcomm Snapdragon 680 processor) ಮತ್ತು ಆಕ್ಟಾ-ಕೋರ್ CPU ಬಲ ಪಡೆದಿದೆ. ಈ ಮೂಲಕ ನೀವು ಅತ್ಯುತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ 8GB RAM ಮತ್ತು ಅಡ್ರಿನೋ 610 GPU ಈ ಫೋನ್ ಅನ್ನು ಸುಗಮವಾಗಿ ಕಾರ್ಯನಿರ್ವಹಣೆ ಮಾಡುವಂತೆ ಮಾಡಲಿದೆ.

ಒಪ್ಪೋ F21 ಕ್ಯಾಮೆರಾ ರಚನೆ: ಈ ವಿಶೇಷ ಫೋನ್ ಎಲ್‌ಇಡಿ ಫ್ಲ್ಯಾಶ್ ಮತ್ತು ಫೇಸ್ ಡಿಟೆಕ್ಷನ್ ಆಟೋಫೋಕಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ 64 ಮೆಗಾಪಿಲ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಲ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2 ಮೆಗಾಪಿಲ್ಸೆಲ್ ಡೆಪ್ತ್ ಲೆನ್ಸ್ ಕ್ಯಾಮೆರಾ ಇದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 32 ಮೆಗಾಪಿಲ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇದರೊಂದಿಗೆ 4500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದರಲ್ಲಿದ್ದು, ಸೂಪರ್ ವೂಕ್ 33W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ.


Click it and Unblock the Notifications








