Oppo: ಒಪ್ಪೋದ ಈ ಫೇಮಸ್ ಸ್ಮಾರ್ಟ್‌ಫೋನ್ ಬೆಲೆ ಕಡಿತ! 1TB ವರೆಗೂ ಸ್ಟೋರೇಜ್ ಆಯ್ಕೆ.. ಟ್ರಿಪಲ್ ಕ್ಯಾಮೆರಾ
ಒಪ್ಪೋ ಸ್ಮಾರ್ಟ್‌ಫೋನ್‌ಗಳು (Oppo smartphone) ಭಾರತದಲ್ಲಿ ಹೆಚ್ಚು ಸೇಲ್‌ಆಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿವೆ. ಈ ಫೋನ್‌ಗಳು ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ನೀಡುವ ಜೊತೆಗೆ ಕ್ಯಾಮೆರಾ ಪ್ರಿಯರಿಗಂತೂ ಉತ್ತಮ ಆಯ್ಕೆ ಆಗಿವೆ.
ಹೌದು, ಒಪ್ಪೋ ಫೋನ್‌ಗಳಿಗೆ ಭಾರತದಲ್ಲಿ ವಿಶೇಷ ಬೇಡಿಕೆ ಇದ್ದು, ಈ ನಡುವೆ ಒಪ್ಪೋ F21s ಪ್ರೊ 5G ಸ್ಮಾರ್ಟ್‌ಫೋನ್‌ಗೆ (Oppo F21s Pro 5G smartphone) ಪ್ರಮುಖ ಇ- ಕಾಮರ್ಸ್ ಸೈಟ್‌ನಲ್ಲಿ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 128 GB ಇಂಟರ್ ಸ್ಟೋರೇಜ್ ಆಯ್ಕೆ ಹಾಗೂ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಹಾಗಿದ್ರೆ, ಈ ವಿಶೇಷ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒಪ್ಪೋ F21s ಪ್ರೊ 5G : ಈ ಫೋನ್ 29,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವಿಗ ಇದನ್ನು 25,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್ ಮೇಲೆ ಫ್ಲಿಪ್‌ಕಾರ್ಟ್ 13% ರಿಯಾಯಿತಿ ಘೋಷಣೆ ಮಾಡಿದೆ. ಇದರೊಂದಿಗೆ ಕೆಲವು ಬ್ಯಾಂಕ್ ಆಫರ್ ಹಾಗೂ ಕ್ಯಾಶ್‌ಬ್ಯಾಕ್ ಆಫರ್ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.
ಒಪ್ಪೋ F21s ಪ್ರೊ 5G ಫೋನ್ ಅನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಮೂಲಕ ಖರೀದಿ ಮಾಡಿದ್ರೆ 10% ರಿಯಾಯಿತಿ, 6 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಮೇಲೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 500 ರೂ.ಗಳ ಹೆಚ್ಚುವರಿ ರಿಯಾಯಿತಿ, ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಸೇರಿದಂತೆ ಇನ್ನೂ ಹಲವಾರು ಬ್ಯಾಂಕ್ ಆಫರ್ ಅನ್ನು ಈ ವೇಳೆ ಪಡೆದುಕೊಳ್ಳಬಹುದಾಗಿದೆ.

ಒಪ್ಪೋ F21s ಪ್ರೊ 5G ಫೋನ್ ಡಿಸ್‌ಪ್ಲೇ ವಿವರ: ಈ ಫೋನ್ 6.3 ಇಂಚಿನ ಅಮೋಲೆಡ್ ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದ್ದು, 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಜೊತೆಗೆ 409 ಪಿಕ್ಸೆಲ್ ಸಾಂದ್ರತೆ, 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ, 60Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪಲಿಂಗ್ ರೇಟ್ ಅನ್ನು ಹೊಂದಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.
ಒಪ್ಪೋ F21s ಪ್ರೊ 5G ಫೋನ್ ಪ್ರೊಸೆಸರ್ ಮಾಹಿತಿ: ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಅಡ್ರಿನೊ 619 ಗ್ರಾಫಿಕ್ ಬೆಂಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಇದರೊಂದಿಗೆ 8 GB RAM ಹಾಗೂ 128 GB ಇಂಟರ್ ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದ್ದು, ಇದರೊಂದಿಗೆ ಇನ್ನೂ ಹೆಚ್ಚಿನ ಸ್ಟೋರೇಜ್ ಬೇಕು ಎಂದರೆ ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಬರೋಬ್ಬರಿ 1 TB ಸ್ಟೋರೇಜ್ ವಿಸ್ತರಣೆ ಮಾಡಿಕೊಳ್ಳಬಹುದು.

ಒಪ್ಪೋ F21s ಪ್ರೊ 5G ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ ಹಾಗೂ 2 ಮೆಗಾಪಿಕ್ಸೆಲ್ ಮೂರನೇ ಸೆನ್ಸರ್ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾದ ಜೊತೆಗೆ 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಮೂಲಕ ಡ್ಯುಯಲ್ ಸೆಲ್ಫಿ ಸೆನ್ಸರ್‌ನೊಂದಿಗೆ ಈ ಫೋನ್ ಕಾಣಿಸಿಕೊಂಡಿದೆ.

ಒಪ್ಪೋ F21s ಪ್ರೊ 5G ಬ್ಯಾಟರಿ ಹಾಗೂ ಇತರೆ: ಈ ಫೋನ್ 4500 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 33W ನ ಸೂಪರ್ VOOC ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಅದರಂತೆ 63 ನಿಮಿಷಗಳಲ್ಲಿ 100% ಚಾರ್ಜ್ ಆಗಲಿದೆ. ಉಳಿದಂತೆ ಅಗತ್ಯ ಸೆನ್ಸರ್ ಆಯ್ಕೆ, ಸುಧಾರಿತ ಬ್ಲೂಟೂತ್ ಹಾಗೂ ವೈ-ಫೈ ಸಂಪರ್ಕ ಸೇರಿದಂತೆ ಅನೇಕ ಆಕರ್ಷಕ ಬೆಂಬಲ ಪಡೆದಿದೆ.


Click it and Unblock the Notifications








