Home
ಸುದ್ದಿಜಾಲ

ಒಪ್ಪೋದ ಈ ವಿಶೇಷ ಫೋನ್‌ಗೆ 21% ರಿಯಾಯಿತಿ; ಈ ಆಫರ್‌ ಎಲ್ಲಿ ಗೊತ್ತಾ!?

ಒಪ್ಪೋ ಫೋನ್‌ಗಳು ಈಗಂತೂ ನಿರೀಕ್ಷೆ ಮೀರಿದ ಬಜೆಟ್‌ ಬೆಲೆಯಲ್ಲಿ ಸುಧಾರಿತ ಫೀಚರ್ಸ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿದೆ. ಇದರ ಭಾಗವಾಗಿಯೇ ಕೆಲವು ದಿನಗಳ ಹಿಂದೆ ಒಪ್ಪೋ K11x ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲಾಗಿದೆ. ಇದೀಗ ಒಪ್ಪೋ ಪ್ರಿಯರು ಸಂತಸ ಪಡುವ ಸುದ್ದಿ ನೀಡಲಾಗಿದೆ. ಯಾಕೆಂದರೆ ಒಪ್ಪೋ F21s ಪ್ರೊ ಬೆಲೆ ಕಡಿತವಾಗಿದೆ.

ಹೌದು,ಒಪ್ಪೋ F21sಪ್ರೊ(OPPO F21s Pro 8GB RAM) ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಇದು ಉತ್ತಮ ಸಮಯ. ಈ ಫೋನ್‌ಗೆ 21%ರಿಯಾಯಿತಿ ಘೋಷಣೆ ಮಾಡಲಾಗಿದೆ. ಇನ್ನು ಈ ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 680 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದ್ದು, 64MPವೈಡ್ ಆಂಗಲ್ ನ ಪ್ರಮುಖ ಕ್ಯಾಮೆರಾ ಆಯ್ಕೆ ಸಹ ಇದೆ. ಹಾಗಿದ್ರೆ ಮತ್ಯಾಕೆ ತಡ ಈ ಫೋನ್‌ನ ಆಫರ್‌ ಬೆಲೆ ಹಾಗೂ ಪ್ರಮುಖ ಫೀಚರ್ಸ್‌ ವಿವರವನ್ನು ತಿಳಿಯಲು ಈ ಲೇಖನ ಓದಿರಿ.

ಒಪ್ಪೋದ ಈ ವಿಶೇಷ ಫೋನ್‌ಗೆ 21% ರಿಯಾಯಿತಿ; ಈ ಆಫರ್‌ ಎಲ್ಲಿ ಗೊತ್ತಾ!?

ಒಪ್ಪೋ F21s ಪ್ರೊ ಡಿಸ್‌ಪ್ಲೇ ವಿವರ: ನಿಗದಿಪಡಿಸಲಾಗಿರುವ ಬೆಲೆಗೆ ಈ ಫೋನ್‌ ಯೋಗ್ಯವೇ, ಇದನ್ನು ಆಫರ್‌ ಬೆಲೆಯಲ್ಲಿ ಖರೀದಿ ಮಾಡಿದರೆ ಒಳಿತೇ ಎಂದು ತಿಳಿದುಕೊಳ್ಳಬೇಕು ಎಂದರೆ ಇದರ ಪ್ರಮುಖ ಫೀಚರ್ಸ್ ತಿಳಿದುಕೊಳ್ಳಬೇಕು. ಅದರಂತೆ ಈ ಫೋನ್ 6.43 ಇಂಚಿನ ಅಮೋಲೆಡ್‌ ಐ-ಕೇರ್ ಡಿಸ್‌ಪ್ಲೇ ಹೊಂದಿದ್ದು. 2400 x 1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ ಪಡೆದುಕೊಂಡಿದೆ. ಜೊತೆಗೆ 90Hz ನ ರಿಫ್ರೆಶ್ ರೇಟ್‌ ಹಾಗೂ 20:9 ಆಕಾರ ಅನುಪಾತವನ್ನು ಇದು ಹೊಂದಿದೆ.

ಒಪ್ಪೋ F21s ಪ್ರೊ ಪ್ರೊಸೆಸರ್ ಮಾಹಿತಿ: ಈ ಫೋನ್‌ನ ಪ್ರೊಸೆಸರ್ ವಿಚಾರಕ್ಕೆ ಬರುವುದಾದರೆ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 680 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದ್ದು, ಅಡ್ರಿನೊ 610 GPU ಬಲ ಪಡೆದುಕೊಂಡಿದೆ. ಇನ್ನುಳಿದಂತೆ ಕ್ವಾಡ್-ಕೋರ್, ಡ್ಯುಯಲ್ ಕ್ರಿಯೋ 265 (1.9GHz ಮತ್ತು 2.4GHz) ನಿಂದ ಮಾಡಲಾದ ಎಂಟು-ಕೋರ್ ಸಂಸ್ಕರಣಾ ವ್ಯವಸ್ಥೆಯು ಒಪ್ಪೋದ ಪ್ರಮುಖ ಫೀಚರ್ಸ್ ಆಗಿದೆ. ಹಾಗೆಯೇ 8GB RAM ಆಯ್ಕೆ ಇದರಲ್ಲಿದೆ.

ಒಪ್ಪೋದ ಈ ವಿಶೇಷ ಫೋನ್‌ಗೆ 21% ರಿಯಾಯಿತಿ; ಈ ಆಫರ್‌ ಎಲ್ಲಿ ಗೊತ್ತಾ!?

ಒಪ್ಪೋ F21s ಪ್ರೊ ಕ್ಯಾಮೆರಾ ರಚನೆ: ಅತ್ಯಾಧುನಿಕ ಫೀಚರ್ಸ್‌ಗಳಿರುವ ಕ್ಯಾಮೆರಾಗಳನ್ನು ಈ ಫೋನ್ ಹೊಂದಿದ್ದು, ಅದರಲ್ಲಿ ಸೋನಿIMX709ಫ್ಲ್ಯಾಗ್‌ಶಿಪ್ ಸೆನ್ಸರ್‌ ಮತ್ತು f/1.7,64MPವೈಡ್ ಆಂಗಲ್‌ ಆಯ್ಕೆ ಪ್ರಮುಖ ಲೆನ್ಸ್ ಸೇರಿದಂತೆ ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಇದರಲ್ಲಿದೆ. ಇದರೊಂದಿಗೆ 2MPಮೊನೊ ಕ್ಯಾಮರಾ ಮತ್ತು2MPಮ್ಯಾಕ್ರೋ ಕ್ಯಾಮೆರಾ ಆಯ್ಕೆ ನೀಡಲಾಗಿದೆ.ಇವು ಟೆಕ್ಸ್ಟ್ ಸ್ಕ್ಯಾನರ್, ಟೈಮ್ ಲ್ಯಾಪ್ಸ್, ಸ್ಟಿಕ್ಕರ್, ಬೊಕೆ ಮೋಡ್ ಮತ್ತು ಇತರ ಫೀಚರ್ಸ್‌ ಹೊಂದಿವೆ. ಜೊತೆ 32MPಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಹೊಂದಿದೆ.

ಒಪ್ಪೋ F21s ಪ್ರೊ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್ 4500mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇದು 33W ಸೂಪರ್ ವೂಕ್‌ ಚಾರ್ಜಿಂಗ್ ಸಿಸ್ಟಮ್‌ಗೆ ಬೆಂಬಲ ಪಡೆದುಕೊಂಡಿದೆ. ಇನ್ನುಳಿದಂತೆ ಬ್ಲೂಟೂತ್, ವೈ-ಫೈ, ಜಿಪಿಎಸ್‌, ಡ್ಯುಯಲ್ ಸಿಮ್, ಫಿಂಗರ್‌ಪ್ರಿಂಟ್ ಸೆನ್ಸರ್, ಆಡಿಯೋ ಜ್ಯಾಕ್ ಸೌಲಭ್ಯವನ್ನು ಹೊಂದಿದೆ. ಈ ಮೂಲಕ ಬಳಕದಾರರು ಅಗತ್ಯ ಸೇವೆ ಪಡೆದುಕೊಳ್ಳಬಹುದು.

ಒಪ್ಪೋದ ಈ ವಿಶೇಷ ಫೋನ್‌ಗೆ 21% ರಿಯಾಯಿತಿ; ಈ ಆಫರ್‌ ಎಲ್ಲಿ ಗೊತ್ತಾ!?

ಒಪ್ಪೋ F21s ಪ್ರೊ ಆಫರ್‌ ವಿವರ: ಈ ಫೋನ್‌ನ ಸಾಮಾನ್ಯ ದರ 27,999ರೂ.ಆಗಿದೆ.ಆದರೆ, ಇದನ್ನು ನೀವೀಗ 21,999 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಯಾಕೆಂದರೆ ಪ್ರಮುಖ ಇ ಕಾಮರ್ಸ್ ಸೈಟ್‌ ಆಗಿರುವ ಅಮೆಜಾನ್‌ ಈ ಫೋನ್‌ಗೆ ಬರೋಬ್ಬರಿ 21%ರಿಯಾಯಿತಿ ಘೋಷಣೆ ಮಾಡಲಾಗಿದೆ. ಅದಾಗ್ಯೂ ನೀವು ಇನ್ನೂ ಹೆಚ್ಚಿನ ಡಿಸ್ಕೌಂಟ್‌ ನಲ್ಲಿ ಖರೀದಿ ಮಾಡಬೇಕು ಎಂದಾದರೆ ವಿನಿಮಯ ಆಫರ್‌ ಹಾಗೂ ಬ್ಯಾಂಕ್‌ ಕಾರ್ಡ್ ಆಫರ್‌ ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ 20,899ರೂ.ವರೆಗೂ ಉಳಿತಾಯ ಮಾಡಬಹುದಾಗಿದೆ.

Best Mobiles in India

English summary
Oppo F21s Pro smartphone got 21% discount in Amazon. Now is the best time to buy. and this phone have Qualcomm Snapdragon 680 chipset
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+