Home
ಸುದ್ದಿಜಾಲ

ಒಪ್ಪೋ F23 5G ಸ್ಮಾರ್ಟ್‌ಫೋನ್‌ ಇಂದಿನಿಂದ ಖರೀದಿಗೆ ಲಭ್ಯ: ಆಫರ್‌ ಏನಿದೆ?

ಒಪ್ಪೋ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದು, ಈ ಮೂಲಕ ಹೆಚ್ಚು ಹೆಚ್ಚು ಬೇಡಿಕೆ ನಿರ್ಮಾಣ ಮಾಡಿಕೊಂಡಿದೆ. ಅದರಂತೆ ಕೆಲವು ದಿನಗಳ ಹಿಂದೆ ಒಪ್ಪೋ ಹೊಸ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದ್ದು, ಈ ಫೋನ್‌ ಅತ್ಯಾಕರ್ಷಕ ಫೀಚರ್ಸ್‌ನೊಂದಿಗೆ ವಿಶೇಷ ಎನಿಸಿಕೊಂಡಿದೆ. ಜೊತೆಗೆ ಈ ಫೋನ್‌ ಇಂದಿನಿಂದ ಖರೀದಿಗೆ ಲಭ್ಯ.

ಹೌದು, ಒಪ್ಪೋ ಕಂಪೆನಿಯು ಒಪ್ಪೋ F23 5G (Oppo F23 5G) ಸ್ಮಾರ್ಟ್‌ಫೋನ್‌ ಅನ್ನು 15 ಮೇ 2023 ರಂದು ಅಂದರೆ ಮೊನ್ನೆಯಷ್ಟೇ ಲಾಂಚ್‌ ಮಾಡಲಾಗಿದ್ದು, ಈ ಫೋನ್‌ 256GBಇಂಟರ್‌ಸ್ಟೋರೇಜ್‌ ಆಯ್ಕೆಯೊಂದಿಗೆ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 695 5G ಪ್ರೊಸೆಸರ್ ಬಲ ಪಡೆದುಕೊಂಡಿದೆ. ಅದರಂತೆ ನೀವು ಈ ಫೋನ್‌ ಅನ್ನು ಇಂದಿನಿಂದ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ,ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ತಿಳಿಯೋಣ ಬನ್ನಿ.

ಒಪ್ಪೋ F23 5G ಸ್ಮಾರ್ಟ್‌ಫೋನ್‌ ಇಂದಿನಿಂದ ಖರೀದಿಗೆ ಲಭ್ಯ: ಆಫರ್‌ ಏನಿದೆ?

ಒಪ್ಪೋ F23 5G ಡಿಸ್‌ಪ್ಲೇ ವಿವರ: ಈ ವಿಶೇಷ ಫೋನ್‌ ಅನ್ನು ನೀವು ಖರೀದಿ ಮಾಡುವ ಮುನ್ನ ಮೊದಲು ಇದರ ಪ್ರಮುಖ ಫೀಚರ್ಸ್‌ ಅನ್ನು ತಿಳಿದುಕೊಳ್ಳಿ. ಅದರಂತೆ ಈ ಫೋನ್ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LTPS ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದ್ದು,1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 120Hz ರಿಫ್ರೆಶ್ ರೇಟ್‌ ಆಯ್ಕೆ ಇದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 391ppi ಪಿಕ್ಸೆಲ್ ಸಾಂದ್ರತೆಯನ್ನು ಪಡೆದುಕೊಂಡಿದೆ.

ಒಪ್ಪೋ F23 5G ಪ್ರೊಸೆಸರ್‌:ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿದ್ದು, ಆಂಡ್ರಾಯ್ಡ್‌ 13 ಈ ಫೋನ್‌ನಲ್ಲಿ ರನ್‌ ಆಗಲಿದೆ. ಜೊತೆಗೆ 8GB RAM ಹಾಗ 256GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದ್ದು, ಇದರಲ್ಲಿ ಬಳಕೆದಾರರು RAM ಅನ್ನು 16GB ವರೆಗೆ ವಿಸ್ತರಿಸಿಕೊಳ್ಳುವ ಆಯ್ಕೆ ನೀಡಲಾಗಿದೆ.

ಒಪ್ಪೋ F23 5G ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದ್ದು, ಅದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಆಟೋಫೋಕಸ್ ಲೆನ್ಸ್‌ ಹಾಗೂ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೈಕ್ರೋ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಸೆಲ್ಫಿಗಾಘಿ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಆಯ್ಕೆ ನೀಡಲಾಗಿದೆ.

ಒಪ್ಪೋ F23 5G ಸ್ಮಾರ್ಟ್‌ಫೋನ್‌ ಇಂದಿನಿಂದ ಖರೀದಿಗೆ ಲಭ್ಯ: ಆಫರ್‌ ಏನಿದೆ?

ಒಪ್ಪೋ F23 5G ಬ್ಯಾಟರಿ ಸಾಮರ್ಥ್ಯ: ಒಪ್ಪೋ F23 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇದು 67W ಸೂಪರ್‌ವೋಕ್‌ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಅಂದರೆ 44 ನಿಮಿಷಗಳಲ್ಲಿ ಫೋನ್‌ ಅನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಬಹುದಾಗಿದೆ. ಇನ್ನುಳಿದಂತೆ ಈ ಫೋನ್ 5G, ವೈ ಫೈ, ಬ್ಲೂಟೂತ್, ಜಿಪಿಎಸ್‌ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ನ ಕನೆಕ್ಟಿವಿಟಿ ಆಯ್ಕೆ ಇದ್ದು ಇತರೆ ಅಗತ್ಯ ಫೀಚರ್ಸ್‌ ಅನ್ನು ಈ ಫೋನ್‌ ಪಡೆದುಕೊಂಡಿದೆ.

ಒಪ್ಪೋ F23 5G ಬೆಲೆ ಹಾಗೂ ಲಭ್ಯತೆ:ಈ ಸ್ಮಾರ್ಟ್‌ಫೋನ್ 24,999ರೂ.ಗಳ ಬೆಲೆ ಹೊಂದಿದ್ದು, ಇಂದು ಒಪ್ಪೋ ಸ್ಟೋರ್, ಅಮೆಜಾನ್ ಮತ್ತು ಇತರ ರಿಟೇಲರ್‌ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.ಹಾಗೆಯೇ ಈ ಫೋನ್ ಬೋಲ್ಡ್ ಗೋಲ್ಡ್, ಕೂಲ್ ಬ್ಲ್ಯಾಕ್‌ನ ಎರಡು ಬಣ್ಣಗಳಲ್ಲಿ ಲಭ್ಯ ಇರಲಿದೆ. ಈ ಫೋನ್‌ ಖರೀದಿ ಮೇಲೆ ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಕಾರ್ಡ್‌ಗಳು, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಇತರ ಪ್ರಮುಖ ಬ್ಯಾಂಕ್‌ಗಳು ಮೂಲಕ ಇನ್ನೂ ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದು.

ಇಂದಿನಿಂದ ಮೇ 31 ರವರೆಗೆ ಅಂದರೆ 6 ತಿಂಗಳವರೆಗೆ ಈ ಫೋನ್‌ ಖರೀದಿ ಮೇಲೆ 10% ಕ್ಯಾಶ್‌ಬ್ಯಾಕ್ ಮತ್ತು ನೋ ಕಾಸ್ಟ್ ಇಎಂಐ ಸೌಲಭ್ಯ ಪಡೆದುಕೊಳ್ಳಬಹುದಾಗಿದ್ದು, ಈ ಇಎಮ್‌ಐ ಫೈನಾನ್ಸ್ ಸ್ಕೀಮ್‌ಗಳಲ್ಲಿ ಬಜಾಜ್ ಫೈನಾನ್ಸ್, ಟಿವಿಎಸ್ ಕ್ರೆಡಿಟ್ ಮತ್ತು ಹೆಚ್‌ಡಿಬಿ ಫೈನಾನ್ಶಿಯಲ್‌ಗಳಿಂದಲೂ ಬಳಕೆದಾರರು ಇನ್ನೂ ಹೆಚ್ಚಿನ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಒಪ್ಪೋ F23 5G ಸ್ಮಾರ್ಟ್‌ಫೋನ್‌ ಇಂದಿನಿಂದ ಖರೀದಿಗೆ ಲಭ್ಯ: ಆಫರ್‌ ಏನಿದೆ?

ಹಾಗೆಯೇ ಒಪ್ಪೋ ಬಳಕೆದಾರರು 2500ರೂ.ವರೆಗಿನ ವಿನಿಮಯ ಹಾಗೂ ಲಾಯಲ್ಟಿ ಬೋನಸ್ ಅನ್ನು ಪಡೆದುಕೊಳ್ಳಬಹುದಾಗಿದ್ದು, ಒಪ್ಪೋ ಅಲ್ಲದ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಗ್ರಾಹಕರು 1,500ರೂ. ವರೆಗಿನ ಎಕ್ಸ್‌ಚೇಂಜ್ ಆಫರ್ ಅನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಎನ್ಕೋ ಏರ್2i ಅನ್ನು ಸಹ ಖರೀದಿ ಮಾಡಬಹುದಾಗಿದ್ದು, ಈ ಇಯರ್‌ಬಡ್‌ಗಳಿಗೆ 1,799ರೂ. ಗಳ ಬೆಲೆ ನಿಗದಿ ಮಾಡಲಾಗಿದೆ.

Best Mobiles in India

English summary
Oppo F23 5G smartphone was launched a few days ago and is powered by the Qualcomm Snapdragon 695 5G processor. This phone can be purchased from today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+