Home
ಸುದ್ದಿಜಾಲ

Oppo: ಒಪ್ಪೋ F23 5G ಸ್ಮಾರ್ಟ್‌ಫೋನ್‌ಗೆ ಸೂಪರ್ ಆಫರ್! 256 GB ಸ್ಟೋರೇಜ್‌.. 64 MP ಕ್ಯಾಮೆರಾ

ಒಪ್ಪೊ ಸ್ಮಾರ್ಟ್‌ಫೋನ್‌ಗಳ (Oppo smartphone) ವಿಭಾಗದಲ್ಲಿ ಒಪ್ಪೋ ಫೈಂಡ್ ಎಕ್ಸ್‌, ಒಪ್ಪೋ ರೆನೋ 11 ಫೋನ್‌ಗಳ ಬಗ್ಗೆ ಮಾರುಕಟ್ಟೆಯಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಈ ಬೆಳವಣಿಗೆ ನಡುವೆ ಇತ್ತೀಚಿಗೆ ಲಾಂಚ್ ಮಾಡಲಾದ ಒಪ್ಪೋ ಫೋನ್‌ವೊಂದನ್ನು ದೀಪಾವಳಿ ವಿಶೇಷ ಸೇಲ್‌ ಹಿನ್ನೆಲೆ ಭರ್ಜರಿ ಆಫರ್ ನೀಡಲಾಗುತ್ತಿದೆ.

ಹೌದು, ಒಪ್ಪೋದ ಜನಪ್ರಿಯ ಫೋನ್‌ ಆಗಿರುವ ಒಪ್ಪೋ F23 5G ಸ್ಮಾರ್ಟ್‌ಫೋನ್‌ಗೆ (Oppo F23 5G smartphone) 22% ರಿಯಾಯಿತಿ ನೀಡಲಾಗಿದೆ. ಈ ಮೂಲಕ ಖರೀದಿದಾರರು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 256 GB ಆಂತರಿಕ ಸ್ಟೋರೇಜ್ ಆಯ್ಕೆ ಪಡೆದಿದ್ದು, 64 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾದೊಂದಿಗೆ ಅತ್ಯುತ್ತಮ ಎನಿಸಿದೆ. ಹಾಗಿದ್ರೆ, ಈ ಫೋನ್‌ಗೆ ಇರುವ ಆಫರ್ ಏನು?, ಇದರ ಪ್ರಮುಖ ಫೀಚರ್ಸ್‌ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಒಪ್ಪೋ F23 5G ಸ್ಮಾರ್ಟ್‌ಫೋನ್‌ಗೆ ಸೂಪರ್ ಆಫರ್! 256 GB ಸ್ಟೋರೇಜ್‌..

ಒಪ್ಪೋ F23 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಫೋನ್‌ ಅನ್ನು ಖರೀದಿ ಮಾಡುವ ಮುನ್ನ ಇದರ ಫೀಚರ್ಸ್ ಬಗ್ಗೆ ತಿಳಿಯೋಣ. ಅದರಂತೆ ಈ ಫೋನ್‌ 6.72 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 120Hz ರಿಫ್ರೆಶ್‌ ರೆಟ್‌ ಹಾಗೂ 550 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ.

ಒಪ್ಪೋ F23 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ: ಇನ್ನು ಈ ಫೋನ್ ಕ್ವಾಲ್ಕಾಮ್ SM6375 ಸ್ನಾಪ್‌ಡ್ರಾಗನ್ 695 5G (6 nm) ಪ್ರೊಸೆಸರ್ ಬಲ ಪಡೆದಿದ್ದು, ಈ ಚಿಪ್‌ ಆಕ್ಟಾ-ಕೋರ್ (2x2.2 GHz Kryo 660 ಚಿನ್ನ ಮತ್ತು 6x1.7 GHz ಕ್ರಿಯೋ 660) ನೊಂದಿಗೆ ಪ್ಯಾಕ್‌ ಆಗಿದೆ. ಉಳಿದಂತೆ ಅಡ್ರಿನೊ 619 ಜಿಪಿಯುನೊಂದಿಗೆ ಈ ಫೋನ್‌ ಕೆಲಸ ಮಾಡಲಿದೆ. ಜೊತೆಗೆ ಆಂಡ್ರಾಯ್ಡ್ 13 ಅನ್ನು ಈ ಫೋನ್‌ ರನ್‌ ಮಾಡಲಿದೆ. ಮುಖ್ಯವಾಗಿ ಈ ಫೋನ್ 8GB RAM ಹಾಗೂ 256GB ಇಂಟರ್‌ ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯ ಇದೆ.

ಒಪ್ಪೋ F23 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 64 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ ಸೆನ್ಸರ್‌ನೊಂದಿಗೆ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಈ ಸೆನ್ಸರ್‌ ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್‌ ಹೊಂದಿದೆ.

ಒಪ್ಪೋ F23 5G ಸ್ಮಾರ್ಟ್‌ಫೋನ್‌ಗೆ ಸೂಪರ್ ಆಫರ್! 256 GB ಸ್ಟೋರೇಜ್‌..

ಒಪ್ಪೋ F23 5G ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಇನ್ನು ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇದು 18 ನಿಮಿಷಗಳಲ್ಲಿ 67W ವೈರ್ಡ್ ಚಾರ್ಜಿಂಗ್‌ ಮೂಲಕ 50% ಚಾರ್ಜಿಂಗ್ ಆಗಲಿದೆ. ಉಳಿದಂತೆ ಈ ಫೋನ್ ಸ್ಟೀರಿಯೋ ಸ್ಪೀಕರ್‌, 3.5 ಎಂಎಂ ಜ್ಯಾಕ್ ,ವೈ-ಫೈ 802.11 a/b/g/n/ac, ಬ್ಲೂಟೂತ್ ಆವೃತ್ತಿ 5.1, A2DP, LE, aptX HD, ಯುಎಸ್‌ಬಿ ಟೈಪ್-ಸಿ 2.0 ಕನೆಕ್ಟಿವಿಟಿ ಹೊಂದಿದೆ.

ಒಪ್ಪೋ F23 5G ಸ್ಮಾರ್ಟ್‌ಫೋನ್‌ ಆಫರ್ ಬೆಲೆ ವಿವರ: ಈ ಫೋನ್‌ನ ಸಾಮಾನ್ಯ ದರ 28,999ರೂ.ಗಳಾಗಿದ್ದು, ಇದನ್ನು ನೀವು ಈಗ 22,488ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದು. ಯಾಕೆಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ 22% ರಿಯಾಯಿತಿ ನೀಡಲಾಗಿದೆ. ಅಷ್ಟೇ ಅಲ್ಲದೆ ನೀವು ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಖರೀದಿ ಮಾಡಲು ಮುಂದಾದರೆ ಬ್ಯಾಂಕ್‌ ಆಫರ್ ಮೂಲಕ ಖರೀದಿ ಮಾಡಿ.

ಒಪ್ಪೋ F23 5G ಸ್ಮಾರ್ಟ್‌ಫೋನ್‌ಗೆ ಸೂಪರ್ ಆಫರ್! 256 GB ಸ್ಟೋರೇಜ್‌..

ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 1500 ರೂ.ಗಳ ರಿಯಾಯಿತಿ, ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಲೇಟರ್ ಪೇ ಮೂಲಕ ಖರೀದಿ ಮಾಡಿದ್ರೆ 20,000 ರೂ. ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು. ಇದರೊಂದಿಗೆ ಪೇಟಿಎಮ್‌ ವಾಲೆಟ್‌ನಲ್ಲಿ 100 ಕ್ಯಾಶ್‌ಬ್ಯಾಕ್ ಸಹ ಸಿಗಲಿದೆ. ಅಷ್ಟೇ ಅಲ್ಲದೆ ಡೆಬಿಟ್ ಕಾರ್ಡ್ ಇಎಮ್‌ಐ 1,393ರೂ.ಗಳಿಂದ ಆರಂಭ ಆಗಲಿದೆ.

Best Mobiles in India

English summary
Oppo F23 5G smartphone which is a popular phone of Oppo, has 22% discount. By the, buyer can save huge money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+