64MP ಕ್ಯಾಮೆರಾ ಇರುವ ಈ ಮೊಬೈಲ್ ಬೆಲೆಯಲ್ಲಿ ಶೇ.31 ರಷ್ಟು ನೇರ ಇಳಿಕೆ!
ಒಪ್ಪೋ ಸಂಸ್ಥೆಯ ಒಪ್ಪೋ F25 ಪ್ರೊ 5G (Oppo F25 Pro 5G) ಮೊಬೈಲ್ ಇದೀಗ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಭರ್ಜರಿ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದ್ದು, 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತನ್ನ ವೆಬ್‌ಸೈಟ್‌ನಲ್ಲಿ ಒಪ್ಪೋ ಕಂಪನಿಯ ಒಪ್ಪೋ F25 ಪ್ರೊ 5G (OPPO F25 Pro 5G) ಮೊಬೈಲ್ ಶೇ. 31% ರಷ್ಟು ನೇರ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೊಬೈಲ್‌ನ 8 GB RAM + 128 GB ವೇರಿಯಂಟ್ ಆಫರ್‌ನಲ್ಲಿ 19,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಇತರೆ ಬ್ಯಾಂಕ್ ಆಫರ್ ಸಹ ದೊರೆಯುತ್ತವೆ.

ಈ ಫೋನ್ 8GB + 128GB ಸ್ಟೋರೇಜ್ ಹಾಗೂ 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಇದರೊಂದಿಗೆ ಇದು 5,000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗಾದರೇ ಒಪ್ಪೋ F25 ಪ್ರೊ 5G ಫೋನಿನ ಇತರೆ ಫೀಚರ್ಸ್ ಮುಂದೆ ನೋಡೋಣ ಬನ್ನಿರಿ.
ಒಪ್ಪೋ F25 ಪ್ರೊ 5G - ಫೀಚರ್ಸ್ ಮಾಹಿತಿ
ಒಪ್ಪೋ F25 ಪ್ರೊ 5G ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಕರ್ವ್ಡ್ ಡಿಸ್‌ಪ್ಲೇ ರಚನೆ ಅನ್ನು ಪಡೆದಿದ್ದು, 2412 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್, ಪಾಂಡಾ ಗ್ಲಾಸ್ ರಕ್ಷಣೆ ಸೌಲಭ್ಯವನ್ನು ಈ ಫೋನ್‌ನಲ್ಲಿ ನೋಡಬಹುದಾಗಿದೆ.
ಒಪ್ಪೋ F25 ಪ್ರೊ 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದರ ಜೊತೆಗೆ ಮಾಲಿ-G68 MC4 ಜಿಪಿಯು ಸಪೋರ್ಟ್ ಸಹ ಇದೆ. ಹಾಗೆಯೇ 8GB + 128GB ಸ್ಟೋರೇಜ್ ಹಾಗೂ 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಸಹ ಕಾಣಬಹುದು.
ಒಪ್ಪೋ F25 ಪ್ರೊ 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮೊದಲ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸರ್ ಸೌಲಭ್ಯದಲ್ಲಿ ಇದೆ. ಹಾಗೆಯೇ ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮರಾ ಸೆನ್ಸರ್ ಪಡೆದಿದ್ದು, ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮರಾ ಜೊತೆಗೆ ಮೆಗಾ ಪಿಕ್ಸೆಲ್ OV02B10 ಸೆನ್ಸಾರ್ ಹೊಂದಿದೆ. ಇದರ ಜೊತೆಗೆ ಸೋನಿ IMX615 ಸೆನ್ಸರ್‌ನೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.
ಒಪ್ಪೋ F25 ಪ್ರೊ 5G ಸ್ಮಾರ್ಟ್‌ಫೋನ್ 67W ಸೂಪರ್‌ವೂಕ್ ಚಾರ್ಜಿಂಗ್ ಸಪೋರ್ಟ್, ಇದರ ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಇದರ ಜೊತೆಗೆ ಧೂಳು ಮತ್ತು ನೀರು ನಿರೋಧಕ (IP65) ರೇಟಿಂಗ್ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, ಡ್ಯುಯಲ್ 4G VoLTE, ವೈ ಫೈ 6 802.11 ax (2.4GHz + 5GHz), ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್/ ಗ್ಲೋನಾಸ್, ಯುಎಸ್‌ಬಿ ಟೈಪ್-ಸಿ ಸಪೋರ್ಟ್ ಪಡೆದಿದೆ.


Click it and Unblock the Notifications








