Home
ಸುದ್ದಿಜಾಲ

ಇಂದು ಲಾಂಚ್‌ ಆಗಲಿದೆ ಒಪ್ಪೋ F25 ಪ್ರೊ 5G ಫೋನ್‌!..ಫೀಚರ್ಸ್‌ ಏನಿವೆ?

ಒಪ್ಪೋ ಮೊಬೈಲ್‌ ಸಂಸ್ಥೆಯ ಬಹುನಿರೀಕ್ಷಿತ ಒಪ್ಪೋ F25 ಪ್ರೊ 5G ಸ್ಮಾರ್ಟ್‌ಫೋನ್‌ ಇಂದು ಅಧಿಕೃತವಾಗಿ ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್‌ ಆಗಲಿದೆ. ಈ ಫೋನ್ ಇಂದು (ಫೆ. 29) ಮಧ್ಯಾಹ್ನ 12 ರಂದು ಪ್ರಮುಖ ಇ ಕಾಮರ್ಸ್‌ ತಾಣಗಳ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಹೌದು, ಒಪ್ಪೋ F25 ಪ್ರೊ 5G ಸ್ಮಾರ್ಟ್‌ಫೋನ್‌ ಇಂದು ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಮೊಬೈಲ್‌ ಲಾಂಚ್‌ ಬಗ್ಗೆ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣಗಳು ಮೈಕ್ರೋ ಪೇಜ್‌ ಕೂಡಾ ರಚಿಸಿವೆ. ಬಿಡುಗಡೆಗೂ ಮುನ್ನವೇ ಈ ಫೋನಿನ ಕೆಲವು ಫೀಚರ್ಸ್‌ ಗ್ರಾಹಕರ ದಿಲ್‌ ಗೆದ್ದಿವೆ ಎನ್ನಬಹುದಾಗಿದ್ದು, ಆ ಪೈಕಿ 32 ಮೆಗಾ ಪಿಕ್ಸಲ್‌ ಸೆಲ್ಫೀ ಫೀಚರ್‌ ಒಂದಾಗಿದೆ.

ಇಂದು ಲಾಂಚ್‌ ಆಗಲಿದೆ ಒಪ್ಪೋ F25 ಪ್ರೊ 5G ಫೋನ್‌!..ಫೀಚರ್ಸ್‌ ಏನಿವೆ?

ನೂತನ ಒಪ್ಪೋ F25 ಪ್ರೊ 5G ಮೊಬೈಲ್‌ ತ್ರಿವಳಿ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಇದಲ್ಲದೇ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್‌ ಪವರ್‌ ಕೂಡಾ ಪಡೆದುಕೊಂಡಿದೆ. ಜೊತೆಗೆ ಇದು 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಒಪ್ಪೋ F25 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಒಪ್ಪೋ F25 ಪ್ರೊ 5G - ಫೀಚರ್ಸ್‌ ಹೀಗಿವೆ

ಒಪ್ಪೋ F25 ಪ್ರೊ 5G ಮೊಬೈಲ್‌ 6.7 ಇಂಚಿನ ಡಿಸ್‌ಪ್ಲೇ ಪಡೆದಿರಲಿದ್ದು, ಇದಕ್ಕೆ ಅನುಗುಣವಾಗಿ ಈ ಡಿಸ್‌ಪ್ಲೇಯು 2412 × 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಇರಲಿದೆ. ಇದು ಫುಲ್ ಹೆಚ್‌ಡಿ+ ಅಮೋಲೆಡ್‌ ಕರ್ವ್ಡ್ ಡಿಸ್ಪ್ಲೇ ಆಯ್ಕೆ ಇರಲಿದ್ದು, ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಹೊಂದಿರಲಿದ್ದು, ಪಾಂಡಾ ಗ್ಲಾಸ್ ರಕ್ಷಣೆ ಪಡೆದಿರದೆ.

ಇಂದು ಲಾಂಚ್‌ ಆಗಲಿದೆ ಒಪ್ಪೋ F25 ಪ್ರೊ 5G ಫೋನ್‌!..ಫೀಚರ್ಸ್‌ ಏನಿವೆ?

ಹಾಗೆಯೇ ಈ ಮೊಬೈಲ್‌ ಆಕ್ಟಾ ಕೋರ್ (2 x 2.6GHz ಕಾರ್ಟೆಕ್ಸ್-A78 + 6 x 2GHz ಕಾರ್ಟೆಕ್ಸ್-A55 CPU ಗಳು) ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಮಾಲಿ-G68 MC4 GPU ಗ್ರಾಪಿಕ್ಸ್‌ ಕಾರ್ಡ್‌ನಲ್ಲಿ ಕೆಲಸ ಮಾಡಲಿದೆ ಎಂದು ವರದಿಯಾಗಿದೆ.

ಹಾಗೆಯೇ ಒಪ್ಪೋದ ಈ ಮೊಬೈಲ್‌ 8GB RAM ಜೊತೆಗೆ 128GB / 256GB UFS 3.1 ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ ಆಗಲಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಕಲರ್‌ ಓಎಸ್‌ 14 ಜೊತೆಗೆ ಆಂಡ್ರಾಯ್ಡ್‌ 14 ನಲ್ಲಿ ರನ್‌ ಆಗಲಿದೆ ಎಂದು ಲೀಕ್‌ ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ಈ ಮೊಬೈಲ್‌ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿರಲಿದ್ದು, ಇದರ ಮೊದಲ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಪಡೆದಿರುವುದು ಖಚಿತ ಆಗಿದೆ. ಹಾಗೆಯೇ ಉಳಿದಂತೆ ಇನ್ನೆರಡು ಕ್ಯಾಮೆರಾಗಳು ಕ್ರಮವಾಗಿ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಹಾಗೂ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮರಾ ಸೌಲಭ್ಯ ಪಡೆದಿರಲಿವೆ. ಇನ್ನು ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಇರಲಿದೆ ಎಂದು ತಿಳಿದುಬಂದಿದೆ.

ಒಪ್ಪೋ F25 ಪ್ರೊ 5G ಮೊಬೈಲ್‌ 67W ಸೂಪರ್ ವೂಕ್‌ ಚಾರ್ಜಿಂಗ್‌ ಸಪೋರ್ಟ್‌ ಪಡೆದಿರಲಿದ್ದು, ಇದಕ್ಕೆ ಸಪೋರ್ಟ್‌ ಆಗಿ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಖಚಿತ ಎನ್ನಲಾಗಿದೆ. ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್‌, ಧೂಳು ಮತ್ತು ನೀರು ನಿರೋಧಕ (IP65), ಡ್ಯುಯಲ್ 4G VoLTE, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಅನೇಕ ಅಗತ್ಯ ಕನೆಕ್ಟಿವಿಟಿ ಸೌಲಭ್ಯ ಪಡೆದಿರಲಿದೆ ಎಂದು ತಿಳಿದುಬಂದಿದೆ.

Best Mobiles in India

English summary
OPPO F25 Pro 5G is launching in India Today. Check here Expected price, Offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+