Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಅಬ್ಬರಿಸಿದ್ದ ಈ ಅತ್ಯುತ್ತಮ ಸೆಲ್ಫಿ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ದಿಗ್ಗಜ ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ ಇದೀಗ ಸ್ಮಾರ್ಟ್‌ಫೋನ್‌ ಫೆಸ್ಟಿವಲ್‌ ಡೇಸ್‌ ಸೇಲ್‌ ಮೇಳ ಅದ್ಧೂರಿಯಾಗಿ ಆಯೋಜಿಸದ್ದು, ಕೆಲವು ಬ್ರ್ಯಾಂಡ್‌ಗಳ ಮೊಬೈಲ್‌ಗಳಿಗೆ ಆಕರ್ಷಕ ಡಿಸ್ಕೌಂಟ್‌ ಲಭ್ಯ ಮಾಡಿದೆ. ಆ ಪೈಕಿ ಒಪ್ಪೋ (OPPO) ಕಂಪನಿಯ ಒಪ್ಪೋ F25 ಪ್ರೊ 5G ಫೋನ್‌ ಭರ್ಜರಿ ಡಿಸ್ಕೌಂಟ್‌ ಬೆಲೆ ಪಡೆದುಕೊಂಡಿದೆ. ಇನ್ನು ಈ ಮೊಬೈಲ್‌ 8 GB RAM + 128 GB ಸ್ಟೋರೇಜ್‌ನ ವೇರಿಯಂಟ್‌ ಸೌಲಭ್ಯ ಪಡೆದಿದ್ದು, 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಪಡೆದಿದೆ.

ಹೌದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ಸ್ಮಾರ್ಟ್‌ಫೋನ್‌ ಫೆಸ್ಟಿವಲ್‌ ಡೇಸ್‌ ಮಾರಾಟದಲ್ಲಿ ಒಪ್ಪೋ F25 ಪ್ರೊ 5G ಫೋನ್‌ ಶೇ. 31% ರಷ್ಟು ನೇರ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಫರ್‌ನಲ್ಲಿ 19,999ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಹೆಚ್ಚುವರಿಯಾಗಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ಡಿಸ್ಕೌಂಟ್‌ ಸಹ ಪಡೆಯಬಹುದಾಗಿದೆ.

ಮಾರುಕಟ್ಟೆಯಲ್ಲಿ ಅಬ್ಬರಿಸಿದ್ದ ಈ ಅತ್ಯುತ್ತಮ ಸೆಲ್ಫಿ ಫೋನ್‌ ಬೆಲೆಯಲ್ಲಿ ಇಳಿಕೆ!

ಅಂದಹಾಗೆ ಒಪ್ಪೋ F25 ಪ್ರೊ 5G ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದೆ. ಅಲ್ಲದೇ ಇದರ ಜೊತೆಗೆ ಸೋನಿ IMX615 ಸೆನ್ಸರ್‌ನೊಂದಿಗೆ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಹಾಗಾದರೇ ಒಪ್ಪೋ F25 ಪ್ರೊ 5G ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಒಪ್ಪೋ F25 ಪ್ರೊ 5G - ಫೀಚರ್ಸ್‌

ಒಪ್ಪೋ F25 ಪ್ರೊ 5G ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಕರ್ವ್ಡ್ ಡಿಸ್‌ಪ್ಲೇ ರಚನೆ ಅನ್ನು ಪಡೆದಿದ್ದು, 2412×1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇನನ್ಉ ಇದರ ಜೊತೆಗೆ 120Hz ರಿಫ್ರೆಶ್ ರೇಟ್, ಪಾಂಡಾ ಗ್ಲಾಸ್ ರಕ್ಷಣೆ ಸೌಲಭ್ಯವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಒಪ್ಪೋ F25 ಪ್ರೊ 5G ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ಮಾಡಲಿದ್ದು, ಇದರ ಜೊತೆಗೆ ಮಾಲಿ-G68 MC4 ಜಿಪಿಯು ಸಪೋರ್ಟ್‌ ಸಹ ಇದೆ. ಹಾಗೆಯೇ ಇದು 8GB + 128GB ಸ್ಟೋರೇಜ್‌ ಹಾಗೂ 8GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಸಹ ಪಡೆದಿದೆ.

ಒಪ್ಪೋ F25 ಪ್ರೊ 5G ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಫಸ್ಟ್‌ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಹಾಗೆಯೇ ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್‌ ಅಲ್ಟ್ರಾ-ವೈಡ್ ಕ್ಯಾಮರಾ ಸೆನ್ಸರ್‌ ಪಡೆದಿದ್ದು, ಮೂರನೇ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಮ್ಯಾಕ್ರೋ ಕ್ಯಾಮರಾ ಜೊತೆಗೆ ಮೆಗಾ ಪಿಕ್ಸೆಲ್‌ OV02B10 ಸೆನ್ಸಾರ್‌ ಪಡೆದಿದೆ. ಇದರ ಜೊತೆಗೆ ಸೋನಿ IMX615 ಸೆನ್ಸರ್‌ನೊಂದಿಗೆ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

ಒಪ್ಪೋ F25 ಪ್ರೊ 5G ಫೋನ್‌ 67W ಸೂಪರ್‌ವೂಕ್ ಚಾರ್ಜಿಂಗ್‌ ಸಪೋರ್ಟ್‌ ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ. ಇದರ ಜೊತೆಗೆ ಧೂಳು ಮತ್ತು ನೀರು ನಿರೋಧಕ (IP65) ರೇಟಿಂಗ್‌ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, ಡ್ಯುಯಲ್ 4G VoLTE, ವೈ ಫೈ 6 802.11 ax (2.4GHz + 5GHz), ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್‌/ ಗ್ಲೋನಾಸ್, ಯುಎಸ್‌ಬಿ ಟೈಪ್-ಸಿ ಸಪೋರ್ಟ್‌ ಇದೆ.

Best Mobiles in India

English summary
OPPO F25 Pro 5G receive mind blowing price cut in india. check out offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+