Home
ಸುದ್ದಿಜಾಲ

Oppo: ಭಾರತದಲ್ಲಿ ಒಪ್ಪೋ F25 ಪ್ರೊ ಲಾಂಚ್‌ಗೆ ದಿನಾಂಕ ನಿಗದಿ! ಏನೆಲ್ಲಾ ಫೀಚರ್ಸ್‌ ಪಡೆದಿದೆ?

ಒಪ್ಪೋ ಸ್ಮಾರ್ಟ್‌ಫೋನ್‌ಗಳು (Oppo Smartphones) ಇತ್ತೀಚಿನ ದಿನಗಳಲ್ಲಿ ಹೆಚ್ಚು ಸೇಲ್‌ ಆಗುತ್ತಿರುವ ಹಾಗೂ ಬೇಡಿಕೆ ಇರುವ ಸ್ಮಾರ್ಟ್‌ಫೋನ್‌ಗಳಾಗಿವೆ. ಈ ಫೋನ್‌ಗಳ ವಿಶೇಷ ಫೀಚರ್ಸ್‌ ಬಳಕೆದಾರರಿಗೆ ಭಿನ್ನ ಅನುಭವ ನೀಡಲಿದ್ದು, ಈ ನಡುವೆ ಭಾರತದಲ್ಲಿ ಮತ್ತೊಂದು ಬಹು ನಿರೀಕ್ಷಿತ ಒಪ್ಪೋ ಫೋನ್‌ ಲಾಂಚ್‌ ಆಗಲಿದೆ.

ಹೌದು, ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್‌ಫೋನ್‌ (Oppo F25 Pro Smartphone) ಲಾಂಚ್‌ ಆಗಲಿದೆ. ಈ ಫೋನ್ 120Hz ರಿಫ್ರೆಶ್‌ ರೇಟ್‌ ಆಯ್ಕೆಯ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದ್ದು, IP65 ರೇಟಿಂಗ್‌ ಮೂಲಕ ಸ್ಮಾರ್ಟ್‌ಫೋನ್‌ ವಲಯದಲ್ಲಿ ದೊಡ್ಡ ಸಂಚಲನ ಉಂಟು ಮಾಡಲಿದೆ. ಹಾಗಿದ್ರೆ. ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವಾಗ ಲಾಂಚ್‌ ಆಗಲಿದೆ?, ಇದರ ನಿರೀಕ್ಷಿತ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಒಪ್ಪೋ F25 ಪ್ರೊ ಲಾಂಚ್‌ಗೆ ದಿನಾಂಕ ನಿಗದಿ! ಏನೆಲ್ಲಾ ಫೀಚರ್ಸ್‌ ಪಡೆದಿದೆ?

ಒಪ್ಪೋ F25 ಪ್ರೊ ಸ್ಮಾರ್ಟ್‌ಫೋನ್‌: ಒಪ್ಪೋ ಫೆಬ್ರವರಿ 29 ರಂದು ಭಾರತದಲ್ಲಿ ಕಂಪನಿಯ ಮುಂದಿನ ಮಧ್ಯಮ ಶ್ರೇಣಿಯ F ಸರಣಿಯ ಫೋನ್ ಆಗಿರುವ ಒಪ್ಪೋ F25 ಪ್ರೊ ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕೃತವಾಗಿ ತಿಳಿಸಿದೆ. ಈ ಫೋನ್‌ನ ವಿನ್ಯಾಸವು ಈ ತಿಂಗಳ ಆರಂಭದಲ್ಲಿ ಥೈಲ್ಯಾಂಡ್‌ನಲ್ಲಿ ಲಾಂಚ್‌ ಆಗಿರುವ ಒಪ್ಪೋ ರೆನೋ 11F ನಂತೆಯೇ ಕಾಣುತ್ತದೆ. ಹಾಗಿದ್ರೆ, ಇದರ ನಿರೀಕ್ಷಿತ ಫೀಚರ್ಸ್‌ ಏನು ಅನ್ನೋದನ್ನು ಗಮನಿಸೋಣ ಬನ್ನಿ.

ಒಪ್ಪೋ F25 ಪ್ರೊ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.7 ಇಂಚಿನ 2412×1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಇರುವ ಫುಲ್ ಹೆಚ್‌ಡಿ+ ಅಮೋಲೆಡ್‌ ಕರ್ವ್ಡ್ ಡಿಸ್ಪ್ಲೇ ಆಯ್ಕೆ ಪಡೆಯಲಿದ್ದು, ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಹೊಂದಿರಲಿದ್ದು, ಪಾಂಡಾ ಗ್ಲಾಸ್ ರಕ್ಷಣೆ ಪಡೆದಿದೆ.

ಒಪ್ಪೋ F25 ಪ್ರೊ ಲಾಂಚ್‌ಗೆ ದಿನಾಂಕ ನಿಗದಿ! ಏನೆಲ್ಲಾ ಫೀಚರ್ಸ್‌ ಪಡೆದಿದೆ?

ಒಪ್ಪೋ F25 ಪ್ರೊ ಪ್ರೊಸೆಸರ್‌ ವಿವರ: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ (2 x 2.6GHz ಕಾರ್ಟೆಕ್ಸ್-A78 + 6 x 2GHz ಕಾರ್ಟೆಕ್ಸ್-A55 CPUಗಳು) ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಲಿ-G68 MC4 GPU ಗ್ರಾಪಿಕ್ಸ್‌ ಕಾರ್ಡ್‌ನಲ್ಲಿ ಕೆಲಸ ಮಾಡಲಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ 8GB LPDDR4x RAM, 128GB / 256GB UFS 3.1 ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಈ ಫೋನ್‌ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಕಲರ್‌ ಓಎಸ್‌ 14 ಜೊತೆಗೆ ಆಂಡ್ರಾಯ್ಡ್‌ 14 ನಲ್ಲಿ ರನ್‌ ಆಗಲಿದೆ ಎಂದು ತಿಳಿದುಬಂದಿದೆ.

ಒಪ್ಪೋ F25 ಪ್ರೊ ಕ್ಯಾಮೆರಾ ರಚನೆ: ಇನ್ನು ಈ ಫೋನ್ ƒ/1.7 ದ್ಯುತಿರಂಧ್ರದೊಂದಿಗೆ 64 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಎಲ್‌ಇಡಿ ಫ್ಲ್ಯಾಶ್‌, f/2.2 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, f/2.4 ದ್ಯುತಿರಂಧ್ರದೊಂದಿಗೆ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮರಾ, 4K ವಿಡಿಯೋ ರೆಕಾರ್ಡಿಂಗ್
f/2.4 ದ್ಯುತಿರಂಧ್ರದೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆಯಲಿದೆ ಎಂದು ತಿಳಿದುಬಂದಿದೆ.

ಒಪ್ಪೋ F25 ಪ್ರೊ ಲಾಂಚ್‌ಗೆ ದಿನಾಂಕ ನಿಗದಿ! ಏನೆಲ್ಲಾ ಫೀಚರ್ಸ್‌ ಪಡೆದಿದೆ?

ಒಪ್ಪೋ F25 ಪ್ರೊ ಬ್ಯಾಟರಿ ಹಾಗೂ ಇತರೆ: ಈ ಫೋನ್ 67W ಸೂಪರ್ ವೂಕ್‌ ಚಾರ್ಜಿಂಗ್‌ನೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯಲಿದ್ದು, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್‌, ಧೂಳು ಮತ್ತು ನೀರು ನಿರೋಧಕ (IP65), ಡ್ಯುಯಲ್ 4G VoLTE, ವೈ-ಫೈ 6 802.11 ax (2.4GHz + 5GHz), ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್‌/ ಗ್ಲೋನಾಸ್, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಅನೇಕ ಅಗತ್ಯ ಕನೆಕ್ಟಿವಿಟಿ ಸೌಲಭ್ಯ ಪಡೆದಿರಲಿದೆ ಎಂದು ತಿಳಿದುಬಂದಿದೆ.

Best Mobiles in India

English summary
Oppo F25 Pro Smartphone will be launched in India in a few days. This phone will have an AMOLED display with 120Hz refresh rate option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+