OPPO: ಒಪ್ಪೋ F25 ಪ್ರೊ ಸ್ಮಾರ್ಟ್‌ಫೋನ್ ಲಾಂಚ್! IP65 ರೇಟಿಂಗ್, ಬೆಲೆ ಎಷ್ಟು?
ಒಪ್ಪೋ (OPPO) ಕೊನೆಗೂ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ F ಸರಣಿ ವಿಭಾಗದಲ್ಲಿ ಇನ್ಮುಂದೆ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಲಿದೆ.
ಹೌದು, ಭಾರತದಲ್ಲಿ ಇದೀಗ ಒಪ್ಪೋ F25 ಪ್ರೊ ಸ್ಮಾರ್ಟ್‌ಫೋನ್ (Oppo F25 Pro Smartphone) ಅನ್ನು ಲಾಂಚ್ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, OLED ಕರ್ವ್ಡ್ ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಇತರೆ ಪ್ರಮುಖ ಫೀಚರ್ಸ್ ಏನು?, ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ನ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಈ ಲೇಖದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒಪ್ಪೋ F25 ಪ್ರೊ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.7 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಕರ್ವ್ಡ್ ಡಿಸ್ಪ್ಲೇ ಆಯ್ಕೆ ಪಡೆದಿದ್ದು, 2412×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್, ಪಾಂಡಾ ಗ್ಲಾಸ್ ರಕ್ಷಣೆಯನ್ನು ಈ ಫೋನ್‌ನಲ್ಲಿ ಕಾಣಬಹುದು.
ಒಪ್ಪೋ F25 ಪ್ರೊ ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ (2 x 2.6GHz ಕಾರ್ಟೆಕ್ಸ್-A78 + 6 x 2GHz ಕಾರ್ಟೆಕ್ಸ್-A55 CPUಗಳು) ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್ ಬಲದೊಂದಿಗೆ ಕಾಣಿಸಿಕೊಂಡಿದ್ದು, ಮಾಲಿ-G68 MC4 ಜಿಪಿಯುನೊಂದಿಗೆ ಕೆಲಸ ಮಾಡಲಿದೆ. ಹಾಗೆಯೇ 8GB LPDDR4x RAM, 128GB / 256GB UFS 3.1 ಇಂಟರ್ ಸ್ಟೋರೇಜ್ ವೇರಿಯಂಟ್ ಅನ್ನು ಕಾಣಬಹುದು.

ಒಪ್ಪೋ F25 ಪ್ರೊ ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ƒ/1.7 ದ್ಯುತಿರಂಧ್ರದೊಂದಿಗೆ 64 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾ, ಓಮ್ನಿವಿಷನ್ OV64B ಸೆನ್ಸರ್, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮರಾ ಜೊತೆಗೆ ಸೋನಿ IMX355 ಸೆನ್ಸರ್, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮರಾ ಜೊತೆಗೆ ಮೆಗಾಪಿಕ್ಸೆಲ್ OV02B10 ಸೆನ್ಸರ್ ಹೊಂದಿದೆ. ಇದರ ಜೊತೆಗೆ ಸೋನಿ IMX615 ಸೆನ್ಸರ್‌ನೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.
ಒಪ್ಪೋ F25 ಪ್ರೊ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 67W ಸೂಪರ್‌ವೂಕ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ, ಇದರ ಜೊತೆಗೆ ಧೂಳು ಮತ್ತು ನೀರು ನಿರೋಧಕ (IP65) ರೇಟಿಂಗ್ ಪಡೆದಿದೆ. ಇನ್ನು ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ 5G SA/NSA, ಡ್ಯುಯಲ್ 4G VoLTE, ವೈ ಫೈ 6 802.11 ax (2.4GHz + 5GHz), ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್/ ಗ್ಲೋನಾಸ್, ಯುಎಸ್‌ಬಿ ಟೈಪ್-ಸಿ ಬೆಂಬಲ ಪಡೆದಿದೆ.
ಒಪ್ಪೋ F25 ಪ್ರೊ ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಫೋನ್‌ನ 8GB + 128GB ಆವೃತ್ತಿಗೆ 23,999ರೂ.ಗಳು ಮತ್ತು 8GB + 256GB ಆವೃತ್ತಿಗೆ 25,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ಅನ್ನು ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್, ಒಪ್ಪೋದ ಅಧಿಕೃತ ಸೈಟ್ ಮೂಲಕ ಮಾರ್ಚ್ 4 ರಿಂದ ಖರೀದಿ ಮಾಡಬಹುದಾಗಿದೆ. ಈ ವೇಳೆ ಕೆಲವು ಕೊಡುಗೆ ಸಹ ಲಭ್ಯ ಇದೆ.

ಎಸ್‌ಬಿಐ ಕಾರ್ಡ್‌ಗಳು ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್ ಕಾರ್ಡ್‌ಗಳೊಂದಿಗೆ 10% ತ್ವರಿತ ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರೊಂದಿಗೆ 9 ತಿಂಗಳವರೆಗೆ ನೋಕಾಸ್ಟ್ ಇಎಮ್‌ಐ ಸೌಲಭ್ಯ, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಇಎಮ್‌ಐ ಕಂತು ಮತ್ತು ಅವಧಿಯನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆ, ಶೂನ್ಯ ಡೌನ್ ಪಾವತಿ ಲಭ್ಯ ಇದೆ.


Click it and Unblock the Notifications








