ದೇಶಿಯ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ OPPO F27 5G ಫೋನ್!..ಬೆಲೆ?
ಜನಪ್ರಿಯ ಒಪ್ಪೋ (OPPO) ಮೊಬೈಲ್ ಸಂಸ್ಥೆಯ ಬಹುನಿರೀಕ್ಷಿತ ಒಪ್ಪೋ F27 5G (OPPO F27 5G) ಸ್ಮಾರ್ಟ್‌ಫೋನ್ ಇಂದು ಅಧಿಕೃತವಾಗಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಫೋನ್ ಒಪ್ಪೋ F25 5G ಸರಣಿಯ ಉತ್ತರಾಧಿಕಾರಿಯಾಗಿ ಲಗ್ಗೆ ಇಟ್ಟಿದೆ. ಈ ಮೊಬೈಲ್ Armour ರಚನೆ ಪಡೆದಿದ್ದು, ರಫ್ ಆಂಡ್ ಟಫ್ ಬಳಕೆಗೂ ಸೈ ಎನಿಸುವಂತೆ ಇದೆ. ಇನ್ನು ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್ ಸೌಲಭ್ಯ ಪಡೆದುಕೊಂಡಿದೆ.
ಹೌದು, ಒಪ್ಪೋ ಸಂಸ್ಥೆಯು ಅಧಿಕೃತವಾಗಿ ತನ್ನ ಒಪ್ಪೋ F27 5G (OPPO F27 5G) ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಮೊಬೈಲ್ 5,000mAh ಬ್ಯಾಟರಿ ಸೌಲಭ್ಯ ಪಡೆದಿದ್ದು, ಇದರೊಂದಿಗೆ 50 ಮೆಗಾ ಪಿಕ್ಸಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಹಾಗೆಯೇ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ.

ನೂತನ ಒಪ್ಪೋ F27 5G ಮೊಬೈಲ್ 8GB RAM + 128GB ಹಾಗೂ 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇದಲ್ಲದೇ AMOLED ಸ್ಕ್ರೀನ್ ಹಾಗೂ 120Hz ರಿಫ್ರೆಶ್ ರೇಟ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇನ್ನುಳಿದಂತೆ ಒಪ್ಪೋ F27 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ಒಪ್ಪೋ F27 5G - ಫೀಚರ್ಸ್ ಹೀಗಿವೆ
ಒಪ್ಪೋ F27 5G ಮೊಬೈಲ್ 6.67 ಇಂಚಿನ AMOLED ಸ್ಕ್ರೀನ್ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 2400×1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಇನ್ನು ಇದು 120Hz ರಿಫ್ರೆಶ್ ರೇಟ್, ಅಕ್ವಾ ಡೈನಾಮಿಕ್ಸ್, 240Hz ಟಚ್ ಸ್ಯಾಂಪ್ಲಿಂಗ್ ದರ, 394 PPI, 100% DCI P3 ಬಣ್ಣದ ಹರವು ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ 2100 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಕೂಡಾ ಪಡೆದಿದೆ.
ಒಪ್ಪೋ F27 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಕಾರ್ಯ ನಿರ್ವಹಿಸಲಿದ್ದು, ಮಾಲಿ G57 MP2 GPU ಸಪೋರ್ಟ್ ಸಹ ಇದೆ. ಅಲ್ಲದೇ ಇದು ಕಲರ್ ಓಎಸ್ 14 ಜೊತೆಗೆ ಆಂಡ್ರಾಯ್ಡ್ 14 ನಲ್ಲಿ ರನ್ ಆಗಲಿದೆ. ಹಾಗೆಯೇ 8GB RAM + 128GB ಹಾಗೂ 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. 2TB ವರೆಗೆ ವಿಸ್ತರಣೆಗೆ ಬೆಂಬಲದೊಂದಿಗೆ ಮೈಕ್ರೊ SD ಕಾರ್ಡ್ ಸ್ಲಾಟ್ ಆಯ್ಕೆ ಕೂಡಾ ಇದೆ.
ಒಪ್ಪೋ F27 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಹಾಗೆಯೇ ಉಳಿದ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇನ್ನು ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.
ಒಪ್ಪೋ F27 5G ಮೊಬೈಲ್ 45W SuperVOOC ಚಾರ್ಜಿಂಗ್ ಸಪೋರ್ಟ್ ಪಡೆದಿದ್ದು, ಇದಕ್ಕೆ ಸಪೋರ್ಟ್ ಆಗಿ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇದು ಡ್ಯುಯಲ್-ಸಿಮ್, 5G, WiFi 5 802.11 ax, ಬ್ಲೂಟೂತ್ 5.3, ಯುಎಸ್‌ಬಿ 2.0, ಜಿಪಿಎಸ್, GLONASS, ಗೆಲಿಲಿಯೋ, BeiDou ಮತ್ತು QZSS ಆಯ್ಕೆಗಳು ಇವೆ.
ಬೆಲೆ ಮಾಹಿತಿ
8GB+128GB ವೇರಿಯಂಟ್ ಬೆಲೆ 22,999ರೂ. ಗಳು
8GB+256GB ವೇರಿಯಂಟ್ ಬೆಲೆ 24,999ರೂ. ಗಳು


Click it and Unblock the Notifications








