Home
ಸುದ್ದಿಜಾಲ

ನಾಳೆ ಒಪ್ಪೋದ ಈ ಸ್ಟೈಲಿಶ್‌ ಸ್ಮಾರ್ಟ್‌ಫೋನ್‌ ಲಾಂಚ್‌!..ಫೀಚರ್ಸ್‌ ಏನು?

ಜನಪ್ರಿಯ ಒಪ್ಪೋ ಸಂಸ್ಥೆಯು ಹೊಸದೊಂದು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಕಲ ರೀತಿ ಸಜ್ಜಾಗಿದ್ದು, ಅದುವೇ ಒಪ್ಪೋ F27 ಪ್ರೊ+ 5G (Oppo F27 Pro+ 5G) ಸ್ಮಾರ್ಟ್‌ಫೋನ್‌ ಆಗಿದೆ. ಈ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ ನಾಳೆ (ಜೂನ್‌ 13 ರಂದು) ಭಾರತೀಯ ಮಾರುಕಟ್ಟೆಗೆ ಅಧಕೃತವಾಗಿ ಎಂಟ್ರಿ ಕೊಡಲಿದೆ. ಇನ್ನು ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿರಲಿದ್ದು, ಇದರ ಜೊತೆಗೆ 64 ಮೆಗಾ ಪಿಕ್ಸಲ್‌ನ ಪ್ರಾಥಮಿಕ ಕ್ಯಾಮೆರಾ ರಚನೆ ಅನ್ನು ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಹೌದು, ಒಪ್ಪೋ ಸಂಸ್ಥೆಯು ನಾಳೆ (ಜೂನ 13 ರಂದು) ತನ್ನ ಹೊಸ ಒಪ್ಪೋ F27 ಪ್ರೊ+ 5G (Oppo F27 Pro+ 5G) ಫೋನ್‌ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್‌ ಲಾಂಚ್‌ ಕುರಿತಾಗಿ ಫ್ಲಿಪ್‌ಕಾರ್ಟ್‌ ಮೈಕ್ರೋ ಸೈಟ್‌ ಕೂಡಾ ಓಪೆನ್‌ ಮಾಡಿದೆ. ಇನ್ನು ಈ ಫೋನ್‌ 8GB RAM +128GB ಹಾಗೂ 8GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಲಗ್ಗೆ ಇಡಲಿದೆ ಎನ್ನಲಾಗಿದೆ. ಡ್ಯಾಮೆಜ್‌ ಪ್ರೋಫ್‌ 360 ಡಿಗ್ರಿ ರಚನೆ ಅನ್ನು ಪಡೆದಿರಲಿದೆ.

ನಾಳೆ ಒಪ್ಪೋದ ಈ ಸ್ಟೈಲಿಶ್‌ ಸ್ಮಾರ್ಟ್‌ಫೋನ್‌ ಲಾಂಚ್‌!..ಫೀಚರ್ಸ್‌ ಏನು?

ಅಂದಹಾಗೆ ಈ ಫೋನ್ ಡಸ್ಕ್‌ ಪಿಂಕ್‌ ಹಾಗೂ ಮೀಡ್‌ನೈಟ್‌ ನೇವಿ ಕಲರ್‌ ಆಯ್ಕೆಗಳಲ್ಲಿ ಎಂಟ್ರಿ ಕೊಡಲಿದೆ. ಇದರಲ್ಲದೇ ಈ ಫೋನ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದ್ದು, ಜೊತೆಗೆ 67W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ ಎನ್ನಲಾಗಿದೆ. ಹಾಗಾದರೇ ಒಪ್ಪೋ F27 ಪ್ರೊ+ 5G ಫೋನಿನ ಇತರೆ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ F27 ಪ್ರೊ+ 5G ನಿರೀಕ್ಷಿತ ಫೀಚರ್ಸ್‌

ಒಪ್ಪೋ F27 ಪ್ರೊ+ 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಕರ್ವ್ಡ್‌ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿದ್ದು, ಇದರ ಜೊತೆಗೆ 120Hz ರಿಫ್ರೆಶ್ ರೇಟ್‌ ಸಹ ಪಡೆದುಕೊಂಡಿರಲಿದೆ .ಹಾಗೆಯೇ ಈ ಡಿಸ್‌ಪ್ಲೇಯು 950 nits ಬ್ರೈಟ್ನೆಸ್‌ ಸಪೋರ್ಟ್‌ ಹೊಂದಿರಲಿದ್ದು, ಇದರ ಜೊತೆಗೆ ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿರಬಹುದು ಎಂದು ತಿಳಿದುಬಂದಿದೆ.

ಒಪ್ಪೋ F27 ಪ್ರೊ+ 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ ಎನ್ನಲಾಗಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಕೂಡಾ ಒಳಗೊಂಡಿರಲಿದೆ. ಅಲ್ಲದೇ 8GB RAM +128GB ಹಾಗೂ 8GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಲಗ್ಗೆ ಇಡಲಿದೆ ಎನ್ನಲಾಗಿದೆ.

ಒಪ್ಪೋ F27 ಪ್ರೊ+ 5G ಫೋನ್ ಹಿಂಭಾಗದಲ್ಲಿ ಸರ್ಕಲ್ ಮಾದರಿಯ ರಚನೆ ಇದ್ದು, ಡ್ಯುಯಲ್‌ ರಿಯರ್‌ ಕ್ಯಾಮೆರಾ ಅನ್ನು ಒಳಗೊಂಡಿದೆ ಎನ್ನಲಾಗಿದೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇರಲಿದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿರುವ ಸಾಧ್ಯತೆಗಳು ಇವೆ ಎಂದು ತಿಳಿದುಬಂದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಾಗಿ 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ಒದಗಿಸುವ ನಿರೀಕ್ಷೆಗಳು ಇವೆ.

ಒಪ್ಪೋ F27 ಪ್ರೊ+ 5G ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿರಲಿದ್ದು, ಇದರ ಜೊತೆಗೆ 67W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಇರಲಿದೆ ಎಂದು ಹೇಳಾಗಿದೆ. ಅಲ್ಲದೇ ಇದು IP69 ರೇಟಿಂಗ್‌ ಸೌಲಭ್ಯ ಪಡೆದಿರಲಿದೆ ಜೊತೆಗೆ ಡ್ಯಾಮೆಜ್‌ ಪ್ರೋಫ್‌ 360 ಡಿಗ್ರಿ ರಚನೆ ಅನ್ನು ಪಡೆದಿರಲಿದೆ. ಇನ್ನು ಅಲ್ಟ್ರಾ ಟಫ್‌ 3D ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇ ಇರಲಿದೆ ಎನ್ನಲಾಗಿದೆ.

Best Mobiles in India

English summary
Oppo F27 Pro+ 5G launching in India Tomorrow via flipkart. Check specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+